published on Jan.20, 2012, under News

ಸಿದ್ಲಿಂಗು ಸಕತ್ ಖುಷಿಯಲ್ಲಿದ್ದಾನೆ. ಕಾರಣ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತಿರುವ ‘ಸಿದ್ಲಿಂಗು’ ವಾರಕ್ಕೂ ಮೊದಲೇ ಹತ್ತಿರ ಹತ್ತಿರ 1 ಕೋಟಿಗಳಿಕೆ ಮಾಡಿದ ಅಂದಾಜಿದೆ. ಬೆಂಗಳೂರಿನ ಮೇನ್ "ಥಿಯೇಟರ್’ ತ್ರಿವೇಣಿಯಲ್ಲಿ ಈಗಾಗಲೇ 8 ಲಕ್ಷ ಷೇರು ಪಡೆದು ಹಿಂದಿನ ವಾರದ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಮುಂದಿದೆ. ಈ ಖುಷಿಯಲ್ಲಿ ಚಿತ್ರತಂಡ ಷೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆಯಬೇಕಿದ್ದ ಚಿತ್ರತಂಡ ಮೊನ್ನೆ ಗೆಲುವಿನ ಖುಷಿಯಲ್ಲಿ ಮಾಧ್ಯಮದವರೊಂದಿಗೆ ಪೂಜೆ ಮತ್ತು ಕುಂಬಳಕಾಯಿ ಒಡೆದು ದಾಖಲೆ ನಿರ್ಮಿಸಿತು.
ಚಿತ್ರದ ಪ್ರಮುಖ ಹೈಲೈಟ್ ಯೋಗಿ ಮತ್ತು ರಮ್ಯಳ [...]
published on Jan.12, 2012, under News

ಕನ್ನಡ ಚಿತ್ರರಂಗದವರು ಅಭಿಮಾನ ಶೂನ್ಯರಲ್ಲ. ನಮಗೂ ತಾಕತ್ತಿದೆ. ತೆಲುಗು-ತಮಿಳು ಚಿತ್ರರಂಗಕ್ಕೆ ಕಡಿಮೆಯಿಲ್ಲದಂತೆ ಚಿತ್ರಗಳನ್ನು ನೀಡುತ್ತ ಬಂದಿದ್ದೇವೆ. ನಮ್ಮ ಸಿನಿಮಾಗಳು 25 ರಿಂದ 30 ಕೋಟಿಯನ್ನು ನಮ್ಮ ನೆಲದಲ್ಲಿಯೇ ಗಳಿಕೆ ಮಾಡುತ್ತಿವೆ. ಪರಭಾಷ ಸಿನಿಮಾಗಳ ವ್ಯಾಮೋಹ ಬಿಟ್ಟು ಕನ್ನಡ ಚಿತ್ರಗಳನ್ನು ಗೆಲ್ಲಿಸಲು ಸಹಾಯ ಮಾಡಿ ಇನ್ನಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಿಸಲು ಉತ್ತೇಜನ ನೀಡಿ ಎಂದು ಸಿದ್ಲಿಂಗು ಟೀಮ್ ಕನ್ನಡ ಚಿತ್ರೋದ್ಯಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಹೊಸ ವರ್ಷದ ಉತ್ಸಾಹದಲ್ಲಿ ಸಿದ್ಲಿಂಗು ಬಿಡುಗಡೆ ಮಾಡಲು ಹೊರಟ ಚಿತ್ರತಂಡಕ್ಕೆ ಹತ್ತಿರ 100 ಚಿತ್ರಮಂದಿರಗಳನ್ನು [...]
published on Jan.10, 2012, under Blogs, rchandru
ಪ್ರಿಯ ಕನ್ನಡ ಸಿನಿಮಾ ಪ್ರೇಕ್ಷಕರೆ, ನಿಮ್ಮೊಂದಿಗೆ ಆತ್ಮೀಯತೆಯಿಂದ ಇರಲು ನನ್ನದೇ ಆದ ಬ್ಲಾಗ್ ಪ್ರಾರಂಭಿಸಿದೆ. ಶಿವಣ್ಣನಿಂದ ಉದ್ಘಾಟನೆಗೊಂಡು ಸಿನಿಮಾದ ಹೊರತಾಗಿ ಇನ್ನೀತರ ನನ್ನ ಯೋಚನೆಗಳನ್ನು ಹಂಚಿಕೊಳ್ಳಲು ಇದು ಉತ್ತಮ ಮಾಧ್ಯಮ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ನಂಬಿಕೆ ಬಹುಬೇಗನೆ ಸುಳ್ಳಾಯಿತು. ಒಮ್ಮೆ ಇದ್ದಕ್ಕಿದ್ದಂತೆ ಅನೇಕ ವೆಬ್ಸೈಟ್ಗಳಲ್ಲಿ ನನ್ನ ಸಿನಿಮಾದ ಬಗೆಗಿನ ಪ್ರತಿಕ್ರಿಯೆ ಓದಿದಾಗ ದಿಗಿಲಾಯಿತು. ಕೆಲವೊಂದು ಹೊಗಳಿಕೆ-ತೆಗಳಿಕೆಯ ಪ್ರತಿಕ್ರಿಯೆಗಳು ಪೂರಕವಾಗಿ ನಾನು ಸ್ವೀಕರಿಸಿದರೂ, ಹಲವರ ಪ್ರತಿಕ್ರಿಯೆಗಳು ಬಹಳ ಕೀಳುಮಟ್ಟದವಾಗಿದ್ದವು. ನಿಜಕ್ಕೂ ನಾನಂದು ತುಂಬ ಬೇಸರಪಟ್ಟುಕೊಂಡೆ.
ಪ್ರಿಯ ಪ್ರೇಕ್ಷಕರೆ, ನನ್ನ [...]
published on Jan.06, 2012, under News
ನಂಜುಂಡಿ ಕಲ್ಯಾಣದಲ್ಲಿ ದೇವಿ ಯಾಗಿ, ಪೋಲಿಸ್ ಪಾತ್ರದಲ್ಲಿ ಭಾರ್ಗವಿಯಾಗಿ ನಂತರ ತವರು ಮನೆ ಉಡುಗಡೆ ಸಿನಿಮಾದಲ್ಲಿ ಸಮಸ್ತ ಸ್ತ್ರೀ ಕುಲಕ್ಕೆ ಮಾದರಿ ಹೆಣ್ಣುಮಗಳಾಗಿ ಮಾಲಾಶ್ರೀ ಬೆಳ್ಳಿತೆರೆಯಲ್ಲಿ ರಾಣಿ ಮಹರಾಣಿ ಯಾಗಿ ದಾಖಲೆ ನಿರ್ಮಿ ಸಿದವರು. ಮಾಲಾಶ್ರೀ ಸಿನಿಮಾವೆಂದರೆ ಮುಗಿಯಿತು ಸಮಸ್ತ ಕನ್ನಡ ಚಿತ್ರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸೇರಿ ಜಾತ್ರೆ ಯನ್ನೆ ನೆನಪಿಸುತ್ತಿದ್ದರು. ಈಗ ಮತ್ತೊಮ್ಮೆ ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬರುತ್ತಿದ್ದು ಸ್ಟಾರ್ ನಟರಿಗೂ ಸಡ್ಡು ಹೊಡೆಯುತ್ತಿದ್ದಾರೆ.
ಮಾಲಾಶ್ರೀ ಕೇವಲ ತೆರೆಯಮೇಲೆ [...]
published on Dec.29, 2011, under News

ನೀವು ದುನಿಯಾ ಸಿನಿಮಾದ ನಂತರ ವಿಜಯ್,ಯೋಗೇಶ್ ಮತ್ತು ಸೂರಿಯನ್ನು ಸುಲಭವಾಗಿ ಗುರುತಿಸುತ್ತೀರಿ. ಈ ಮೂವರು ಮೇನ್ ಪಾರ್ಮಗೆ ಬರಲು ಹಗಲಿರುಳು ದುಡಿದ ನಿರ್ಮಾಪಕರು ಯಾರಿಗೂ ನೆನಪಿರುವುದಿಲ್ಲ. ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಿಂದಲೂ ಸಿನಿಮಾಕ್ಕೆ ಹಣ ಹೂಡುವವನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಕಾರಣ ಚಿತ್ರರಂಗದ ಅಸ್ತಿತ್ವವೇ ನಿರ್ಮಾಪಕ. ಯಾರೂ ಸುಮ್ಮ ಸುಮ್ಮ ನೆ ಸಿನಿಮಾ ಮಾಡುವುದಿಲ್ಲ. ಉತ್ತಮ ಚಿತ್ರ ನಿರ್ಮಿಸಿ, ಜನರನ್ನು ಮೆಚ್ಚಿಸಿ, ಹಾಗೇ ಹಾಕಿದ ಬಂಡವಾಳಕ್ಕೆ ಲಾಭ ಪಡೆಯುವುದೇ ನಿರ್ಮಾಪಕನ ನಿಜವಾದ ಕನಸಾಗಿರುತ್ತದೆ.
ಈ ಎಲ್ಲ ಗುಣಗಳನ್ನು ಹೊಂದಿರುವ, [...]
published on Dec.17, 2011, under News
ನಿಜವಾದ ಪ್ರೀತಿ ಉಂಟಾಗುವುದು ಒಂದೇ ಸಾರಿ, ಅಂತಹ ಪ್ರೀತಿ ಎಂದೆಂದು ಶಾಶ್ವತ. ಅಂತಹ ಪ್ರೀತಿಯು ಒಮ್ಮೊಮ್ಮೆ ಅನುಮಾನ ಎಂಬ ರೋಗಕ್ಕೆ ಬಲಿಯಾಗಿ ಬಡವಾಗುವುದುಂಟು. ಪ್ರೀತಿಗೆ ಬೀಳದವರು ಯಾರಿಲ್ಲ ಹೇಳಿ, ಯುವಕ-ಯುವತಿಯರು, ಗಂಡ-ಹೆಂಡತಿಯರ ನಡುವಿನ ಜೀವನದ ಕೊಂಡಿಯೇ ಪ್ರೀತಿ. ಇಂತಹ ಪ್ರೀತಿಗೆ ಒಂದು ಮಿಸ್ ಕಾಲ್ ಇಲ್ಲವೇ ಮೆಸೆಜ್ ಸಂಸಾರವನ್ನೆ ಹಾಳು ಮಾಡಿಬಿಡುತ್ತದೆ. ಇವೆಲ್ಲ ಅಂಶಗಳನ್ನು ಒಳಗೊಂಡ ಸುಮುದುರ ಹಾಗೂ ರೋಮ್ಯಾಂಟಿಕ್ ಸಿನಿಮಾವೇ ‘ಒಂದೇ ಒಂದು ಸಾರಿ’.
ಶ್ರೀ ಮುತ್ತು ಪಿಲಂಸ್ ಬ್ಯಾನರಡಿಯಲ್ಲಿ ಪ್ರವೀಣ್ಕುಮಾರ್ ಕೊಂಚಾಡಿ ‘ಏಕಮೇವ’ ಸಿನಿಮಾ ನಿರ್ಮಿಸಿ [...]
published on Dec.15, 2011, under News

ಎಷ್ಟೋ ಚಿತ್ರಗಳು ಪ್ರೇಕ್ಷಕರ ಮನ್ನಣೆಗೆ ಪಾತ್ರವಾಗಿದ್ದರೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರುವುದಿಲ್ಲ. ಹಾಗೇ ಒಂದಷ್ಟು ಚಿತ್ರಗಳು ಸುಮಾರಾಗಿದ್ದರೂ, ಕಲೆಕ್ಷನ್ ಫುಲ್ ಆಗಿರುತ್ತದೆ. ಮೊದಲಿನ ಕೆಟಗರಿಗೆ ಸೇರಿದ ಸಿನಿಮಾವೊಂದು ಈ ವಾರ ಮರು ಬಿಡುಗಡೆಯಾಗುತ್ತಿದೆ. ಬರಿ ಚಿತ್ರತಂಡಕ್ಕೆ ಅಷ್ಟೇ ಅಲ್ಲದೇ ಚಿತ್ರ ನೋಡಿದ ಪ್ರತಿಯೊಬ್ಬರಿಂದಲೂ ಭೇಷ್ ಎನಿಸಿಕೊಂಡಿತ್ತು. ಮೊದಲಿದ್ದ ಶೀರ್ಷಿಕೆ ಸಮೇತ ಚಿತ್ರದಲ್ಲೂ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ ಚಿತ್ರತಂಡ. ಅದೇ ಮತ್ತೆ ಬನ್ನಿ ಪ್ರೀತ್ಸೋಣ. ಮೊದಲು ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಎಂದಿತ್ತು. ಆ್ಯಮ್ ಸಾರಿಯನ್ನು ಬದಿಗಿಟ್ಟು [...]
Use the form below to search the site:
Still not finding what you're looking for? Drop a comment on a post or contact us so we can take care of it!
Categories on chitravarte...
All entries, chronologically...