Chitra Vaarte

Archive for February, 2012

ಕರ್ನಾಟಕ ಸುತ್ತಿ ಬಂದ `ನಮ್ಮಣ್ಣ ಡಾನ್’ ಈ ವಾರ ತೆರೆಗೆ

by on Feb.17, 2012, under News

Nam Anna- (103)

ಲವ್ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ಅವರು ನಿರ್ಮಿಸಿರುವ `ನಮ್ಮಣ್ಣ ಡಾನ್’ ಚಿತ್ರತಂಡ ಪ್ರಚಾರಕ್ಕಾಗಿ ಮೊದಲ ಹಂತದಲ್ಲಿ ಗುಲ್ಬರ್ಗ, ವಿಜಾಪುರ, ಬಾದಾಮಿ ಮುಂತಾದ ಕಡೆ ಹೋಗಿ ಬಂದಿತ್ತು. ನಂತರ ಹಾಸನ, ಮಂಗಳೂರು, ಚೆನ್ನರಾಯಪಟ್ಟಣಗಳ ತೆರೆಳಿದ್ದ ಚಿತ್ರತಂಡ ಕೊನೆಯದಾಗಿ ಧಾರವಾಡ, ಶಿವಮೊಗ್ಗ, ದಾವಣಗೆರೆ ಮುಂತಾದೆಡೆ ಪ್ರಯಾಣ ಬೆಳೆಸಿತು.
 
ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಬ್ಲೂಟೂತ್ ಮೂಲಕ ಹಾಡುಗಳ ರವಾನೆ, ಮೈಲಾರಲಿಂಗೇಶ್ವರನ ಜಾತ್ರೆಗೆ ಭೇಟಿ ಹಾಗೂ ತಿಪಟೂರಿನಲ್ಲಿ ಯುವಕರೊಂದಿಗೆ ನಟ ರಮೇಶ್ಅರವಿಂದ್ ಅವರಿಂದ ಬೈಕ್ ಸವಾರಿ. ಚಿತ್ರತಂಡ ಹೋದ ಕಡೆಯಲ್ಲಾ ಅಭಿಮಾನಿಗಳಿಂದ ಆದರದ ಸ್ವಾಗತ. [...]

Leave a Comment more...

ಜಾತ್ಯತೀತ ಪ್ರೇಮಕಥೆಯನ್ನು ಹೇಳಲು ಹೊರಟಿದೆ ಗವಿಪುರ

by on Feb.17, 2012, under News

ವಿರಾಜ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಜಗನ್ನಾಥ ಹೆಗಡೆ ಅವರು ನಿರ್ಮಿಸಿರುವ `ಗವಿಪುರ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕರ್ನಾಟಕದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಸೂರಜ್ ನಾಯಕರಾಗಿರುವ ಈ ಚಿತ್ರದ ನಾಯಕಿಯಾಗಿ ಸೌಜನ್ಯ ಅಭಿನಯಿಸಿದ್ದಾರೆ.  ಶರತ್ ಲೋಹಿತಾಶ್ವ, ಸುಮಿತ್ರ, ಸಂಗೀತ, ಶಿವರಾಂ, ಆನಂದ್, ಟೆನ್ನಿಸ್ ಕೃಷ್ಣ, ಹರೀಶ್, ಗೌರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 
ಜೆ.ಜಿ.ಕೃಷ್ಣ ಛಾಯಾಗ್ರಾಹಕರಾಗಿರುವ ಈ ಚಿತ್ರದ ಸಂಗೀತ ನಿರ್ದೇಶಕರು ರಾಜೇಶ್ರಾಮನಾಥ್. ಸೌಂದರ್ರಾಜ್ ಸಂಕಲನ, ಮಾಲೂರು ಶ್ರೀನಿವಾಸ್ [...]

Leave a Comment more...

ಬಾಲಿವುಡ್ ರೇಂಜಿನಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡ ಅಲೆಮಾರಿ

by on Feb.09, 2012, under News

Alemaari-AudioRelease

`ಅಲೆಮಾರಿ’ ಮುಹೂರ್ತದಿಂದಲೂ  ದೊಡ್ಡ ಸುದ್ಧಿಯನ್ನು ಮಾಡುತ್ತಿದೆ. ಹಾಗೇ ಆಡಿಯೋ ಬಿಡುಗಡೆ ಸಮಾರಂಬವನ್ನು ಅಷ್ಟೇ ಅಧ್ದೂರಿಯಾಗಿ ಹಮ್ಮಿಕೊಂಡು ಕನ್ನಡ ಚಿತ್ರರಂಗಕ್ಕೆ ಮಾದರಿ ಎನಿಸಿತು. ಇದಕ್ಕೆಲ್ಲ ಕಾರಣ ಬೆಂಕೋಶ್ರೀ ಎಂದೆ ಖ್ಯಾತರಾದ ಬಿ.ಕೆ.ಶ್ರೀನಿವಾಸ್ರವರು. ಕಳೆದ ವರ್ಷ ಜೋಗಯ್ಯ ಸಿನಿಮಾದ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸಿದ ಇವರು ಪ್ರತಿಹಂತದಲ್ಲೂ ಹೊಸತನದ ಮೂಲಕ ಗಾಂಧಿನಗರದಲ್ಲಿ  ಸಂಚಲನ ಮೂಡಿಸುತ್ತಾರೆ.
 
ಅಂದು ಸಮಾರಂಭಕ್ಕೆ ಮುಖ್ಯ ಅತಿಥಿಗಳು ದಿನನಿತ್ಯ ನಮಗೆ ಸಂಗೀತದ ರಸದೌತಣವನ್ನು ನೀಡುವ ಖ್ಯಾತ ನಿರ್ದೇಶಕರು.. ಸಾವಿರಾರು ಜನರ ಮಧ್ಯೆ `ಅಲೆಮಾರಿ’ಯ ಹಾಡುಗಳು ಅರಮನೆ ಮೈದಾನದಲ್ಲಿ ಲೋಕಾರ್ಪನೆಗೊಂಡವು. [...]

Leave a Comment more...

ಕೋಟಿ ಕೋಟಿ ರೂಪಾಯಿಯ ‘ಎಕೆ 56′

by on Feb.09, 2012, under News

AK 56- (131)

ಇದೇ ಹತ್ತನೇ ತಾರೀಖು ಓಂ ಪ್ರಕಾಶರವರ  ನಿರ್ದೇಶನದ ‘ಎಕೆ 56′ ಬಿಡುಗಡೆಯಾಗುತ್ತಿದೆ. ಸಿದ್ಧಾಂತ್ ಹಾಗೂ ಶಿರಿನ್ ನಾಯಕ ನಾಯಕಿ. ದಶಕದ ಹಿಂದೆ ಬಂದ ಎಕೆ 47ಗೂ ಇವತ್ತಿನ ಎಕೆ 56ಗೂ ಏನು ವ್ಯತ್ಯಾಸ?
 
‘ಇದೇ ಬೇರೆ. ಅದೇ ಬೇರೆ. ಹೆಸರು ಮಾತ್ರ ಕೊಂಚ ಅದಕ್ಕೆ ಹೋಲುವಂತಿದೆ ಬಿಟ್ಟರೆ, ಮಿಕ್ಕಂತೆ ಎಕೆ 56 ಬೇರೆಯದೇ ಆದ ಸಿನಿಮಾ’ ಎನ್ನುತ್ತಾರೆ ಓಂಪ್ರಕಾಶ್. ಹೆಸರಷ್ಟೇ ಅಲ್ಲ, ತೊಡಗಿಸಿರುವ ಬಂಡವಾಳವೂ ಅವತ್ತಿನ 47ನ್ನ ಹಿಂದಕ್ಕೆ ದಬ್ಬಿದೆ ಅನ್ನೋದು ಬಲ್ಲವರ ಮಾತು. ರಾಮು ಎಕೆ 47 [...]

Leave a Comment more...

ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿದ್ದಾನೆ ಚಿಂಗಾರಿ

by on Feb.09, 2012, under News

Darshan-Chingaari

ಕಳೆದ ವಾರ ಬಿಡುಗಡೆಯಾದ ದರ್ಶನ್ ಅಭಿನಯದ ಚಿಂಗಾರಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾರಥಿ ಚಿತ್ರ ಶತಕ ಬಾರಿಸಿದ ನಂತರ ಬಹು ನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದ ಚಿಂಗಾರಿ ಪ್ರೇಕ್ಷಕನಿಗೆ ಥ್ರಿಲ್ ನೀಡುತ್ತ  ಗೆಲುವಿನ ಪಯಣ ಮುಂದುವರೆದಿದೆ.
 
ಈವರೆಗೂ ಕಾಣಿಸಿಕೊಳ್ಳದಂತಹ ಪಾತ್ರ ನಿರ್ವಹಿಸಿರುವ ದರ್ಶನ್ಗೆ ಸಿನಿಮಾ ಬಿಡುಗಡೆಯಾಗುವ ಮೊದಲು ಕೊಂಚ ಅಂಜಿಕೆಯಿತ್ತಂತೆ. ಆದರೆ ಚಿತ್ರ ಬಿಡುಗಡೆಯಾಗಿ ಅದ್ಭುತ ಓಪನಿಂಗ್ ಪಡೆಯುವಲ್ಲಿ ಯಶಸ್ವಿಯಾದ್ದರಿಂದ ಇಡಿ ಚಿತ್ರತಂಡ ನಿರಾಳವಾಗಿದೆ. ಈ ಹಿಂದೆ ಗೆಳೆಯ, ಬಿರುಗಾಳಿ ಚಿತ್ರಗಳನ್ನು ನಿರ್ದೇಶಿಸಿದ್ದ ಹರ್ಷ ಕಳೆದೆರಡು ಚಿತ್ರಗಳಿಂದ [...]

Leave a Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...