Chitra Vaarte

ಆರ್.ಚಂದ್ರು – ನಿಮ್ಮ ಪ್ರೋತ್ಸಾಹದ ಮಾತುಗಳೆ ನನ್ನ ಬ್ಲಾಗ್ಗೆ ಪ್ರೇರಣೆ

published on Jan.10, 2012, under Blogs, rchandru

R-Chandruಪ್ರಿಯ  ಕನ್ನಡ ಸಿನಿಮಾ ಪ್ರೇಕ್ಷಕರೆ, ನಿಮ್ಮೊಂದಿಗೆ ಆತ್ಮೀಯತೆಯಿಂದ ಇರಲು ನನ್ನದೇ ಆದ ಬ್ಲಾಗ್ ಪ್ರಾರಂಭಿಸಿದೆ. ಶಿವಣ್ಣನಿಂದ ಉದ್ಘಾಟನೆಗೊಂಡು ಸಿನಿಮಾದ ಹೊರತಾಗಿ ಇನ್ನೀತರ ನನ್ನ ಯೋಚನೆಗಳನ್ನು ಹಂಚಿಕೊಳ್ಳಲು ಇದು ಉತ್ತಮ ಮಾಧ್ಯಮ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ನಂಬಿಕೆ ಬಹುಬೇಗನೆ ಸುಳ್ಳಾಯಿತು. ಒಮ್ಮೆ ಇದ್ದಕ್ಕಿದ್ದಂತೆ ಅನೇಕ ವೆಬ್ಸೈಟ್ಗಳಲ್ಲಿ ನನ್ನ ಸಿನಿಮಾದ ಬಗೆಗಿನ ಪ್ರತಿಕ್ರಿಯೆ ಓದಿದಾಗ ದಿಗಿಲಾಯಿತು. ಕೆಲವೊಂದು ಹೊಗಳಿಕೆ-ತೆಗಳಿಕೆಯ ಪ್ರತಿಕ್ರಿಯೆಗಳು ಪೂರಕವಾಗಿ ನಾನು ಸ್ವೀಕರಿಸಿದರೂ, ಹಲವರ ಪ್ರತಿಕ್ರಿಯೆಗಳು ಬಹಳ ಕೀಳುಮಟ್ಟದವಾಗಿದ್ದವು. ನಿಜಕ್ಕೂ ನಾನಂದು ತುಂಬ ಬೇಸರಪಟ್ಟುಕೊಂಡೆ.

 

ಪ್ರಿಯ ಪ್ರೇಕ್ಷಕರೆ, ನನ್ನ 4 ನೇ ಚಿತ್ರ ಕೋ..ಕೋ..ತೆರೆಗೆ ಬರುವ ಈ ಸಮಯದಲ್ಲಿ ನನ್ನ ಕೆಲವೊಂದು ಸೀನ್ಗಳನ್ನು ಕಟ್ ಮಾಡಲು ಸೆನ್ಸರ್ ಮಂಡಳಿ ಆದೇಶಿಸಿತು. ಈ ಸಂಗತಿಯನ್ನು ನಾನು ಪೂರಕವಾಗಿ ಸ್ವೀಕರಿಸಿದೆ. ಅದೇ ವೆಬ್ ಮಾದ್ಯಮಕ್ಕೆ ಯಾವ ಸೆನ್ಸರ್ ಇದೆ? ಎಂದು ನನ್ನಲ್ಲಿಯೇ ಹಲವು ಬಾರಿ ಪ್ರಶ್ನಿಸಿಕೊಳ್ಳುತ್ತಿದ್ದೆ.  ಈ ವಿಷಯವನ್ನು ಒಮ್ಮೆ ನನ್ನ ಗೆಳೆಯರೊಂದಿಗೆ ಚರ್ಚಿಸುತ್ತಿದ್ದಾಗ ಕೇಂದ್ರ ಸರಕಾರ ಈ ದಿಕ್ಕಿನಲ್ಲಿ ಯೋಚಿತ್ತಿರುವುದು ಶ್ಲಾಘನೀಯವೆನಿಸುತ್ತಿದೆ. ಮುಂದೆ ವೆಬ್ ಮಾಧ್ಯಮದ ಮೂಲಕ ಇನ್ನಷ್ಟು ಸಂಗತಿಗಳನ್ನು ಚರ್ಚಿಸಲು ಈ ಮಾಧ್ಯಮವನ್ನು ಖಂಡಿತ ಬಳಸಿಕೊಳ್ಳುತ್ತೆನೆ. ಪ್ರಿಯ ಪ್ರೇಕ್ಷಕರೇ, ನನ್ನ ಮೈಲಾರಿ ಚಿತ್ರಕ್ಕೆ ನೀಡಿದ ನಿಮ್ಮ ಪ್ರತಿಕ್ರಿಯೆ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಆ ಉತ್ಸಾಹದ ಫಲವೇ ಈ ಕೋ..ಕೋ..

 

KhoKho-Kitty-Priyamani

ಕೊ,.ಕೊ.. ಸಿನಿಮಾದಲ್ಲಿ ಸಾಕಷ್ಟು  ಬಹು ಭಾಷಾ ಪ್ರತಿಭಾನ್ವಿತರ ಸಮ್ಮಿಳನವಾಗಿದೆ. ರಮಣ ಗೋಗುಲರ ಸಂಗೀತ ಕನ್ನಡಿಗರ ಎಲ್ಲರ ಮನೆ-ಮನದಲ್ಲಿ ಸ್ವೀಕಾರ ಮಾಡಿಕೊಂಡಿದ್ದಾರೆ. ಹಿಂದಿನ ಸಿನಿಮಾಗಳಂತೆ ನನ್ನ 4ನೇ ಸಿನಿಮಾವನ್ನು ಗೆಲ್ಲಿಸಿಕೊಡುತ್ತೀರಾ ಎಂಬ ವಿಶ್ವಾಸ ನನ್ನದು. ಸಂಜು-ವೆಡ್ಸ್ ಗೀತಾ ಗೆಲುವಿನ ಉತ್ಸಾಹದಲ್ಲಿ ಶ್ರೀನಗರ ಕಿಟ್ಟಿ ನನ್ನ ಕೋಚ್ನಲ್ಲಿ ಕೋ..ಕೋ..ಆಟವಾಡಿದ್ದಾನೆ. ಅಟದ ಫಲಿತಾಂಶ ನನ್ನ ಕೈಯಲಿಲ್ಲ. ಅದು ನಿಮಗೆ ಬಿಟ್ಟದ್ದು. ಈ ಚಿತ್ರದ ಇನ್ನೊಂದು ಹೈಲೈಟ್ ಪ್ರಿಯಾ ಮಣಿ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಪ್ರಿಯಾಮಣಿ ಒಂದು ಸುತ್ತು ಹೆಚ್ಚಿಗೆ ಕೋ..ಕೋ..ಆಟವಾಡಿದ್ದು ನಿಮಗೆ ಸಿನಿಮಾ ನೋಡಿದ ಮೇಲೆ ಅನುಭವಕ್ಕೆ ಬರಬಹುದು. ನಿಮ್ಮ ಅನುಭವವನ್ನು ನನ್ನ ಬ್ಲಾಗ್ ಮೂಲಕ ಹಂಚಿಕೊಳ್ಳುತ್ತೀರಿ ಎಂಬ ಆಶಯ ನನ್ನದು.

 

ಕನ್ನಡ ಚಿತ್ರರಂಗ ದಿನದಿನಕ್ಕೂ ಹೆಚ್ಚೆಚ್ಚು ಬೆಳೆಯುತ್ತಿದೆ. ಇನ್ನೀತರ ಭಾಷೆಗಳ ಸಿನಿಮಾಗಳ ಬೆಳವಣಿಗೆ ಕಂಡಾಗ ನಮ್ಮ ಮನಸ್ಸು ಕುಗ್ಗುತ್ತದೆ. ನಮ್ಮ ವಿಚಾರಗಳನ್ನು ಜಗತ್ತಿಗೆ ತೆರೆದುಕೊಳ್ಳಲು ಸುಲಭ ಮಾರ್ಗವೆಂದರೆ ವೆಬ್ ಮೀಡಿಯಾ ಅನ್ನೋದು

ದೂಸರಾ ಮಾತಿಲ್ಲ. ಈ ಮೂಲಕ ನನ್ನ ಪ್ರತಿ ಸಿನಿಮಾದ ಬಗೆಗೆ ಹೊರನಾಡು ಕನ್ನಡಿಗರು ಮತ್ತು ಪ್ರಪಂಚದ ಚಿತ್ರಪ್ರೇಕ್ಷಕರನ್ನು ತಲುಪಲು ನನ್ನ ಬ್ಲಾಗ್ ಮೂಲಕ ಈಗ ಅಂಬೆಗಾಲಿಡುತ್ತೇನೆ. ಇದಕ್ಕೆ ಸಾಥ್ ನೀಡಲು ಚಿತ್ರವಾರ್ತೆ.ಕಾಮ್ ತಂಡ ಕೈಜೋಡಿಸಿದೆ. ಸ್ಪೂರ್ತಿ ನೀಡಲು ನೀವಿದ್ದೀರಾ..ಇನ್ನೇನು ನನಗೆ ಭಯ.. ಇನ್ನೂ ಮುಂದೆ ತಿಂಗಳಿಗೆ ಎರಡು ಬಾರಿಯಾದರೂ ನನ್ನ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಹ್ಯಾಪಿ ಸಂಕ್ರಾಂತಿ..

 

ಇಂತಿ ನಿಮ್ಮವ

ಆರ್.ಚಂದ್ರು

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...