Chitra Vaarte

News

ಚಾರ್ ಮಿನಾರ್ ಶುರು

by on May.06, 2012, under Blogs, News, rchandru

Charminar

ಆರ್ ಚಂದ್ರು ಮತ್ತವರ ಟೀಮ್ಗೆ ಶುಭ ಹಾರೈಸಲು ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ದುನಿಯಾ ವಿಜಯ್, ದರ್ಶನ್ಫ್  ಆದಿಯಾಗಿ ಅನೇಕ ಜನ ಅವತ್ತು ಕಂಠೀರವ ಸ್ಟುಡಿಯೊಗೆ ಆಗಮಿಸಿದ್ದರು. ಅವರೆಲ್ಲರ ಸಮ್ಮುಖದಲ್ಲಿ ತನ್ನ ಚಿತ್ರ ಚಾರ್ಮಿನಾರ್ಗೆ ಮುಹೂರ್ತ ನೆರವೇರಿಸಿದ್ದಾರೆ ಚಂದ್ರು.
 
ತಾಜ್ಮಹಲ್ ಚಿತ್ರದ ಮೂಲಕ ನಿರ್ದೇಶಕನಾಗಿ ಕಾಣಿಸಿಕೊಂಡ ಚಂದ್ರು ಈಗ ಚಾರ್ ಮಿನಾರ್ ಮೂಲಕ ನಿರ್ಮಾಪಕರು ಆಗಿದ್ಫ್ದರೆ. ಹಾಗಾಗಿ ಚಂದ್ರುವಿಗೆ ವೈಯುಕ್ತಿಕವಾಗಿ ಚಾರ್ ಮಿನಾರ್ ಮಹತ್ವದ ಚಿತ್ರ. ತಮ್ಮ ಚಿತ್ರದ ನಾಯಕರಾಗಿ ಅವರು ಆಯ್ಕೆ ಮಾಡಿಕೊಂಡಿರುವುದು ನೆನಪಿರಲಿ  [...]

Leave a Comment more...

ಏಕ್ ದಿನ್ ಕಾ ಸುಲ್ತಾನ್!

by on May.06, 2012, under News

Toney

‘ಟೋನಿ ನಮ್ಮ ಟೋನಿ…’ ಎಂಬ ಹಾಡೊಂದು ಶಿವರಾಜ್ಕುಮಾರ್ ಅಭಿನಯದ ‘ಗಂಧದ ಗುಡಿ 2′ ರಲ್ಲಿದೆ. ಹಿಂದೊಮ್ಮೆ ಅಂಬರೀಶ್ ಅಭಿನಯದಲ್ಲಿ ‘ಟೋನಿ’ ಎಂಬ ಹೆಸರಿನ ಚಿತ್ರವೂ ಬಂದು ಹೋಗಿದೆ. ಈಗ ಮತ್ತೆ ಟೋನಿ ನೆನಪಾಗಲು ಕಾರಣ ಒಲವೇ ಮಂದಾರ ಎಂಬ ಚಿತ್ರ ನಿರ್ದೇಶಿಸಿದ ಜಯತೀರ್ಥ. ಅತ್ತ ಕಮರಷಿಯಲ್ಲೂ ಅಲ್ಲದ ಇತ್ತ ಸಂಪೂರ್ಣ ಕಲಾತ್ಮಕವೂ ಉತ್ತಮ ಶೈಲಿಯ ಸಿನಿಮಾವನ್ನು ನಿರ್ದೇಶಿಸಿದ್ದರು. ಚಿತ್ರ ಚೆನ್ನಾಗಿತ್ತು,  ನೂರು ದಿನದ ಪ್ರದರ್ಶನವೂ ಕಂಡಿತು. ಆದಾಗ್ಯೂ ಜಯತೀರ್ಥಗೆ ಮತ್ತೊಂದು ಚಿತ್ರ ನಿರ್ದೇಶಿಸಲು ಅವಕಾಶ ತೆಗೆದುಕೊಂಡಿದ್ದು   ಈಗಲೇ. [...]

Leave a Comment more...

ಚಾರ್ಮಿನಾರ್ ಚಂದ್ರು !

by on Apr.01, 2012, under Blogs, News, rchandru

Charminar

ತಾಜ್ ಮಹಲ ನಿಂದ ಭರವಸೆ ಮೂಡಿಸಿದ ಚಂದ್ರು, ನಂತರ ಶಿವರಾಜ್ ಕುಮಾರ್ ಅಭಿನಯದ ಮೈಲಾರಿ ಮೂಲಕ ಇನ್ನೂ ಹತ್ತು ಹೆಜ್ಜೆ ಎತ್ತರಕ್ಕೇರಿದ್ದರು. ಕೋಕೋ ಕೂಡಾ ಐವತ್ತು ದಿನಗಳ ಪ್ರದರ್ಶನ ಕಂಡ ಚಿತ್ರ. ಅದಾಗಿ ಐದನೇ ಪ್ರಯತ್ನವಾಗಿ ಚಂದ್ರು ಚಾರ್ ಮಿನಾರ್ ಎಂಬ ಸಿನಿಮಾಕ್ಕೆ ಈಗ ಕೈಹಾಕಿದ್ದಾರೆ. ಒಳ್ಳೆಯ ಮುಹೂರ್ತ ನೋಡಿಕೊಂಡು ‘ಚಾರ್ ಮಿನಾರ್’ ನ ಹಾಡುಗಳ ರಾಗ ಮುದ್ರಣಕ್ಕೆ ಸಮಯ ಹುಡುಕಿದ್ದ ಚಂದ್ರು, ಅದೇ ದಿನ ಚಾರ್ ಮಿನಾರ್ ಮೂಲಕ ಪರಿಚಯವಾಗುತ್ತಿರುವ ಹೊಸಾ ಸಂಗೀತ ನಿರ್ದೇಶಕನ ಪರಿಚಯವನ್ನೂ [...]

Leave a Comment more...

ಯುಗಾದಿಯಂದು ನರಸಿಂಹನ ಅವತಾರ

by on Mar.23, 2012, under News

Narasimha_Ravichandran_Nikisha

ಈ ವಾರ ತೆರೆ ಕಾಣುತ್ತಿರುವ ಚಿತ್ರಗಳಲ್ಲಿ ‘ನರಸಿಂಹ’ ಮುಖ್ಯವಾದ್ದು. ರವಿಚಂದ್ರನ್ ಅಭಿನಯದ ಚಿತ್ರವೊಂದು ಬಹಳ ದಿನಗಳ ನಂತರ ತೆರೆ ಕಾಣುತ್ತಿದ್ದು, ಕುತೂಹಲ ಹೆಚ್ಚಾಗಿದೆ. ‘ಕಳ್ಳಮಳ್ಳಸುಳ್ಳ’ದಲ್ಲಿ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರದಲ್ಲಿದ್ದರು. ಆದರೆ ಆ ಚಿತ್ರ ಅವರ ಟಿಪಿಕಲ್ ಮಾದರಿಯದ್ದಾಗಿರಲಿಲ್ಲ. ಹಾಗಾಗಿ ರವಿಚಂದ್ರನ್ ಅಭಿಮಾನಿಗಳಿಗೆ ಅರ್ಧ ತೃಪ್ತಿ ಮಾತ್ರ ಲಭಿಸಿತ್ತು. ನರಸಿಂಹ ಯುಗಾದಿ ಹಬ್ಬದ ಮನರಂಜನೆಯ ಮಜಾ ನೀಡಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.
 
ನಟ, ಬರಹಗಾರ ಮೋಹನ್ ನಿರ್ದೇಶಿಸಿರುವ ನರಸಿಂಹ ಚಿತ್ರ ಸುಮಾರು ನೂರಾ ಇಪ್ಪತ್ತೈದು ಚಿತ್ರಮಂದಿರಗಳಲ್ಲಿ ತೆರೆ [...]

Leave a Comment more...

`ಸ್ನೇಹಿತರು’ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ

by on Mar.22, 2012, under News

Nikhita-Snehitaru

ರೇಖಾಜಗದೀಶ್ ಅರ್ಪಿಸುವ, ಸೌಂದರ್ಯ ಜಗದೀಶ್ ಪಿಲಂಸ್ ಲಾಂಛನದಲ್ಲಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ `ಸ್ನೇಹಿತರು’ ಚಿತ್ರಕ್ಕಾಗಿ ರಾಂನಾರಾಯಣ್ ಅವರು ಬರೆದಿರುವ `ತಿಂಡಿ ಆಯ್ತಾ ಸಾರ್, ಕಾಪಿ  ಆಯ್ತಾ ಸಾರ್, ಊಟ ಆಯ್ತಾ ಸಾರ್, ಹೇಗಿದ್ದೀರಾ ಸಾರ್` ಎಂಬ ಹಾಡಿಗೆ ವಿಜಯರಾಘವೇಂದ್ರ, ತರುಣ್, ಸೃಜನ್ನ್ಫ್ಶ್  ಲೋಕೇಶ್ , ರವಿಶಂಕರ್, ಬಿರಾದಾರ್, ಚಿದಾನಂದ್, ಮನದೀಪ್ರಾಯ್, ಗುರುರಾಜ ಹೊಸಕೋಟೆ ಮುಂತಾದವರು ಹೆಜ್ಜೆ ಹಾಕಿದರು. ಮದನ್ಹರಿಣಿ ನೃತ್ಯ ಸಂಯೋಜಿಸಿದ ಈ ಹಾಡಿನ ಚಿತ್ರೀಕರಣ ಬೆಂಗಳೂರು ಸುತ್ತುಮುತ್ತ ನಡೆಯಿತು.
 
`30-40 ಸೈಟಿದ್ರೆ, ಸಚಿನ್ಗಿಂತ ಹೈಟ್ ಇದ್ರೆ [...]

Leave a Comment more...

ಡವ್: ಪ್ರೀತಿಯ ಸಂಕೇತ

by on Mar.03, 2012, under News

Dove- (211)

ಒಂದು ಸಿನಿಮಾಕ್ಕೆ ಹೇಗೆ, ಎಲ್ಲಿಂದ ಪ್ರಚಾರ ಆರಂಭಿಸಬೇಕು ಎಂಬುದನ್ನ ಕರಗತ ಮಾಡಿಕೊಂಡ ಬಿ ಕೆ ಶ್ರೀನಿವಾಸ್ ಚಿತ್ರರಂಗದಲ್ಲಿ ತಮ್ಮದೆ ಹೆಗ್ಗುರತನ್ನು ಸ್ಥಾಪಿಸಲು ಹೊರಟಿರುವದಂತು ಸತ್ಯ. ಪತ್ರಕರ್ತರೊಂದಿಗೆ ಆತ್ಮೀಯ ಸಂಬಂಧ ಹೊಂದಿದಲ್ಲದೆ ಸ್ವತಃ ಬರಹಗಾರರು ಆದ ಬೆಂಕೋಶ್ರೀ ಅಲೆಮಾರಿ ಬಿಡುಗಡೆಗೆ ಮುನ್ನವೆ ಡವ್ ಚಿತ್ರಕ್ಕೆ ಸಂಗೀತ ಕಾರ್ಯವನ್ನು ಆರಂಭಿಸಿದ್ದಾರೆ.  ‘ಇವತ್ತು ಒಳ್ಳೇ ದಿನ, ಇವತ್ತೇ ಹಾಡಿನ ಧ್ವನಿ ಮುದ್ರಣ ಮಾಡಿಕೊಂಡು ಬಿಡೋಣ. ಮಿಕ್ಕಿದ್ದನ್ನ ಆಮೇಲೆ ಮಾಡಿದ್ರಾಯ್ತು ಅಂತ ನಮ್ಮ ನಿರ್ದೇಶಕ ಸಂತು ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ [...]

Leave a Comment more...

ಮುಂಜಾನೆ ಹಾದಿ ಸುಗಮ

by on Mar.02, 2012, under News

DSC_2664

ಎಸ್.ನಾರಾಯಣ್ ಖುಷಿ ಮೂಡ್ನಲ್ಲಿದ್ದಾರೆ. ಕಾರಣ ಅವರ ಕನಸಿನ ಕೂಸು ಮುಂಜಾನೆ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಶೈಲೂ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಾರಾಯಣ್ ಅವರಿಗೆ ಮುಂಜಾನೆ ಮಹತ್ವಾಕಾಂಕ್ಷೆಯ ಚಿತ್ರ. ಎಲ್ಲಕ್ಕಿಂತ ಮುಖ್ಯವಾಗಿ ಬಿಡುಗಡೆಗೂ ಮುನ್ನವೇ ನಾರಾಯಣ್ ಗೆಲುವಿನ ದಡದಲ್ಲಿದ್ದಾರೆ. ಒಂದರ ಹಿಂದೊಂದರಂತೆ ಅದ್ದೂರಿ ಸಿನಿಮಾಗಳನ್ನು ನಿರ್ಮಿಸಿ ನಿರ್ದೇಶಿಸುತ್ತಿರುವ ಇವರಿಗೆ ಈಗಂತು ಸಿಕ್ಕಾಪಟ್ಟೆ ಡಿಮ್ಯಾಂಡೋ ಡಿಮ್ಯಾಂಡು.
 
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಂಜರಿ ಫಡ್ನೀಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಹಿಂದೆ ಚೆಲುವಿನ ಚಿತ್ತಾರ, ಶೈಲೂ ಚಿತ್ರದಲ್ಲಿ [...]

Leave a Comment more...

ಇಂದಿನಿಂದ ‘ಸಂಕ್ರಾಂತಿ’ ಸಡಗರ

by on Mar.02, 2012, under News

Sankranthi

ಮೆಗಾ ಹಿಟ್ಸ್ ಫಿಲಂಸ್ ಅವರ ಆರ್.ಎಸ್. ಗೌಡ ನಿರ್ಮಾಣದ ಮುಸ್ಸಂಜೆ ಮಹೇಶ್ ನಿರ್ದೇಶನದ ಭಾವನೆಗಳ ತೇರು, ಮನಸು ಮನಸುಗಳ ಹಬ್ಬ ಈ ಸಂಕ್ರಾಂತಿಯಲ್ಲಿ ಪ್ರೇಕ್ಷಕರನ್ನು ಮುದಗೊಳಿಸಲಿದೆ. ‘ಗಿಲ್ಲಿ’ ಚಿತ್ರದ ನಂತರ ಗುರುರಾಜ್ ಜಗ್ಗೇಶ್ ನಾಯಕರಾಗಿರುವ ‘ಸಂಕ್ರಾಂತಿ’ ಚಿತ್ರದ ನಾಯಕಿ ರೂಪಶ್ರೀ. ಹೆಸರಾಂತ ಪೋಷಕ ನಟ ಡಾ. ಕೆ.ಎಸ್. ಅಶ್ವತ್ ಅವರ ಮೊಮ್ಮಗ ಸ್ಕಂದ ಈ ಚಿತ್ರದಿಂದ ಪರಿಚಯವಾಗುತ್ತಿದ್ದಾರೆ.
 
ಬಿ.ಎ. ಮಧು ಅವರ ಸಂಭಾಷಣೆ ಇರುವ ಈ ಚಿತ್ರ ತಾಯಿ ಮಗನ ಬಾಂಧವ್ಯದ ಕುರಿತು ಸಿನಿಮಾದಲ್ಲಿ ಪ್ರಸ್ತಾಪವಿದೆ. ವಿದೇಶದಿಂದ ಸ್ವದೇಶಕ್ಕೆ [...]

Leave a Comment more...

ಕರ್ನಾಟಕ ಸುತ್ತಿ ಬಂದ `ನಮ್ಮಣ್ಣ ಡಾನ್’ ಈ ವಾರ ತೆರೆಗೆ

by on Feb.17, 2012, under News

Nam Anna- (103)

ಲವ್ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ಅವರು ನಿರ್ಮಿಸಿರುವ `ನಮ್ಮಣ್ಣ ಡಾನ್’ ಚಿತ್ರತಂಡ ಪ್ರಚಾರಕ್ಕಾಗಿ ಮೊದಲ ಹಂತದಲ್ಲಿ ಗುಲ್ಬರ್ಗ, ವಿಜಾಪುರ, ಬಾದಾಮಿ ಮುಂತಾದ ಕಡೆ ಹೋಗಿ ಬಂದಿತ್ತು. ನಂತರ ಹಾಸನ, ಮಂಗಳೂರು, ಚೆನ್ನರಾಯಪಟ್ಟಣಗಳ ತೆರೆಳಿದ್ದ ಚಿತ್ರತಂಡ ಕೊನೆಯದಾಗಿ ಧಾರವಾಡ, ಶಿವಮೊಗ್ಗ, ದಾವಣಗೆರೆ ಮುಂತಾದೆಡೆ ಪ್ರಯಾಣ ಬೆಳೆಸಿತು.
 
ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಬ್ಲೂಟೂತ್ ಮೂಲಕ ಹಾಡುಗಳ ರವಾನೆ, ಮೈಲಾರಲಿಂಗೇಶ್ವರನ ಜಾತ್ರೆಗೆ ಭೇಟಿ ಹಾಗೂ ತಿಪಟೂರಿನಲ್ಲಿ ಯುವಕರೊಂದಿಗೆ ನಟ ರಮೇಶ್ಅರವಿಂದ್ ಅವರಿಂದ ಬೈಕ್ ಸವಾರಿ. ಚಿತ್ರತಂಡ ಹೋದ ಕಡೆಯಲ್ಲಾ ಅಭಿಮಾನಿಗಳಿಂದ ಆದರದ ಸ್ವಾಗತ. [...]

Leave a Comment more...

ಜಾತ್ಯತೀತ ಪ್ರೇಮಕಥೆಯನ್ನು ಹೇಳಲು ಹೊರಟಿದೆ ಗವಿಪುರ

by on Feb.17, 2012, under News

ವಿರಾಜ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಜಗನ್ನಾಥ ಹೆಗಡೆ ಅವರು ನಿರ್ಮಿಸಿರುವ `ಗವಿಪುರ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕರ್ನಾಟಕದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಸೂರಜ್ ನಾಯಕರಾಗಿರುವ ಈ ಚಿತ್ರದ ನಾಯಕಿಯಾಗಿ ಸೌಜನ್ಯ ಅಭಿನಯಿಸಿದ್ದಾರೆ.  ಶರತ್ ಲೋಹಿತಾಶ್ವ, ಸುಮಿತ್ರ, ಸಂಗೀತ, ಶಿವರಾಂ, ಆನಂದ್, ಟೆನ್ನಿಸ್ ಕೃಷ್ಣ, ಹರೀಶ್, ಗೌರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 
ಜೆ.ಜಿ.ಕೃಷ್ಣ ಛಾಯಾಗ್ರಾಹಕರಾಗಿರುವ ಈ ಚಿತ್ರದ ಸಂಗೀತ ನಿರ್ದೇಶಕರು ರಾಜೇಶ್ರಾಮನಾಥ್. ಸೌಂದರ್ರಾಜ್ ಸಂಕಲನ, ಮಾಲೂರು ಶ್ರೀನಿವಾಸ್ [...]

Leave a Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...