Chitra Vaarte

Special Feature

ಬರ್ತಡೇ ಬಾಯ್(ಯೋಗಿ) ಮನೆಯಲ್ಲಂದು ಜಾಗರಣೆ

by on Jul.05, 2011, under Special Feature

Rajesh Ganpathi with Yogish

ಜುಲೈ 6 ಯೋಗೇಶ್ ಹುಟ್ಟಿದ ದಿನ. ದುನಿಯಾ ಸಿನಿಮಾದಲ್ಲಿ ಚಿಕ್ಕ ಪಾತ್ರದ ಮೂಲಕವೇ ಜನಪ್ರಿಯನಾದ ಯೋಗಿಗೆ ಇಂದು ಅಸಂಖ್ಯಾತ ಅಭಿಮಾನಿಗಳ ಬಳಗವಿದೆ.  ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಡಜನ್ಗಟ್ಟಲೇ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿ, ಜನಮನ್ನಣೆ ಗಳಿಸಿದಲ್ಲದೇ ಈ ವರ್ಷ ರಾಜ್ಯ ಪ್ರಶಸ್ತಿಗೂ ಭಾಜನರಾದ ಹಿರಿಮೆ  ಯೋಗಿಗೆ ಸಲ್ಲುತ್ತದೆ. ಹಾಗಾಗಿ ಯೋಗಿಗೆ ಹುಟ್ಟುಹಬ್ಬ ಎಂದರೆ ಮನೆಯಲ್ಲಂದು ಜನರ ಜಾತ್ರೆಯಲ್ಲದೆ, ಜಾಗರಣೆಯು ನಡೆದಿರುತ್ತದೆ.
 
ಯೋಗೇಶ್ ಪ್ರತಿ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಅಕ್ಕಪಕ್ಕದ ಮನೆಯವರು,ಗೆಳೆಯರು ಹಾಗೂ ಅಭಿಮಾನಿಗಳೊಂದಿಗೆ  ಆಚರಿಸಿಕೊಳ್ಳುತ್ತಾರೆ. ಷೂಟಿಂಗ್ ಇಲ್ಲದ ದಿನಗಳಲ್ಲಿ [...]

Leave a Comment more...

ಆರ್.ಚಂದ್ರುರವರ ಸಿನಿಮಾ(ಕೋ..ಕೋ..) ಹುಟ್ಟುವ ಸ್ಥಳ

by on May.26, 2011, under Interview, Special Feature

R-Chandru-Rajesh

ಕಳೆದ ಒಂದೆರಡು ತಿಂಗಳಿನಿಂದ ಆರ್.ಚಂದ್ರುರವರ ಸಂದರ್ಶನಕ್ಕಾಗಿ ಹತ್ತಾರು ಭಾರಿ ಪೋನಾಯಿಸುತ್ತಿದ್ದೆ. ಆ ಪೋನು ರಿಂಗಾಗುತಿತ್ತೆ ವಿನಃ ಉತ್ತರ ಬರುತ್ತಿರಲಿಲ್ಲ. ನಾನು ಆರ್.ಚಂದ್ರು  ಇದ್ದವರು ಈಗ  ಬಿ(ಬ್ಯುಸಿ) ಚಂದ್ರು ಆಗಿದ್ದಾರೆ ಎಂದು ಸುಮ್ಮನಾಗಿದ್ದೆ. ಇತ್ತೀಚೆಗೆ ಕೊ..ಕೊ..ಮ್ಯೂಸಿಕ್ ಮುಹೂರ್ತದಲ್ಲಿ ಚಂದ್ರುರವರ ಸಿಕ್ಕಾಗ ಸಂದರ್ಶನಕ್ಕೆ ಸಮಯ ಕೇಳಿದ್ದೆ. ಅವರ ಕಛೇರಿ ಬೆಂಗಳೂರಿನ ಶಂಕರ  ಮಠ  ರಸ್ತೆ ಸಮೀಪವಿದೆ. ತಾಜ್ ಮಹಲ್ ಸಿನಿಮಾದಿಂದಲೂ ಅವರ ಸಿನಿಮಾ ಚಟುವಟಿಕೆ ತಾಣವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.
 
ಅವರೊಂದಿಗೆ ಒಂದು ದಿನ ಮುಂಜಾನೆ ಕುಳಿತು ಮಾತನಾಡುವಾಗ ತಲೆಯಲ್ಲಿ ಎನೇನೋ ಯೋಚನೆಗಳು [...]

Leave a Comment more...

ಶ್ರೀನಿವಾಸರಂತಹ ಉತ್ಸಾಹಿ ನಿರ್ಮಾಪಕರು ಉಳಿದರೆ, ಚಿತ್ರರಂಗ ಬೆಳೆದೀತು…

by on May.19, 2011, under Special Feature

Srinivas

ಮೂರುವರ್ಷಗಳ ಹಿಂದೆ ನಾನು ಚಿತ್ತಾರ ಜ್ಯೋತಿ ಪತ್ರಿಕೆಗಾಗಿ ನಿರ್ಮಾಪಕ ಶ್ರೀನಿವಾಸರನ್ನು ಭೇಟಿಯಾಗಿದ್ದೆ. ಆಗ ಅವರ ಮಂದಾಕಿನಿ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದರು. ಚೌಲ್ಟ್ರಿ,ಹೋಟೆಲ್, ಕನ್ಸ್ಟ್ರಕ್ಷನ್ ಮುಂತಾದ  ಉದ್ಯಮಗಳ ಒತ್ತಡದ ನಡುವೆಯು ತಮ್ಮ ‘ಮಂದಾಕಿನಿ’ಸಿನಿಮಾ ಪ್ರೊಡಕ್ಷನ್ ಬಗ್ಗೆ ಹೆಚ್ಚಿನ ಮುತುರ್ವಜಿ ವಹಿಸಿದ್ದರು. ಆಗಲೇ ಮೂರು ಕೋಟಿ ಹಣ ಸುರಿದು ಬಾಲ್ಯ ಸ್ನೇಹಿತ ರಮೇಶ್ ಸುರವೆ  ಕ್ರಿಯೇಟಿವಿಟಿಗೆ ಸಾಕಷ್ಟು ಸ್ವಾತಂತ ನೀಡಿದ್ದರು. ಅಲ್ಲದೇ ಕನ್ನಡ ಚಿತ್ರರಂಗದಲ್ಲಿ ಸಾಧಿಸಲು ಸಾಕಷ್ಟು ಕನಸುಗಳನ್ನು ಶ್ರೀನಿವಾಸ್ ಹೊತ್ತಿದ್ದರು.
 
ಆದರೆ ನಿರ್ದೇಶನ ಮತ್ತು ಗಾಂಧೀನಗರದ ಅಸಹಕಾರದಿಂದ ‘ಮಂದಾಕಿನಿ’ [...]

Leave a Comment more...

ಇದು `ಪೂಜಾ’ ಸಮಯ

by on Mar.19, 2011, under Special Feature

ಸಂಜನಾ ಗಾಂಧಿ ಎಂದರೆ ಎಲ್ಲರ ನೆನಪು ಐದು ವರ್ಷ ಹಿಂದೆ ಸರಿಯುತ್ತೆ. ಅದೇ ಮಳೆಯಲ್ಲಿ ನೆನೆದ ಹುಡುಗಿ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ `ಕುಣಿದು ಕುಣಿದು’ ಬಂದಾಕೆ. ಚಿತ್ರರಂಗ ಅವರನ್ನು ಪೂಜಾ ಎಂದಿತು. ಅವರೀಗ ಇಪ್ಪತ್ತೈದರ ಸಂಭ್ರಮವನ್ನು ದಾಟಿ ಮುನ್ನುಗ್ಗುತ್ತಿದ್ದಾರೆ. ಆದರೆ ಯಾರಿಗೂ ತಿಳಿದಿಲ್ಲವೇನೋ.
 
ಲವ್ಲೀ ಹುಡುಗಿ ಪೂಜಾ ಜನುಮ ದಿನ  ಅಂತ ನೀವು ತಿಳಿದುಕೊಂಡರೆ ಅದು ಖಂಡಿತಾ ತಪ್ಪು. ಇಲ್ಲಿ ಹೇಳ ಹೊರಟಿರುವುದು ಪೂಜಾ ಗಾಂಧಿ ಚಿತ್ರಗಳ ಬಗ್ಗೆ. `ಮುಂಗಾರು ಮಳೆ’ಯಲ್ಲಿ ನೆನೆಯುವುದರೊಂದಿಗೆ ಸ್ಯಾಂಡಲ್ವುಡ್ನಲ್ಲಿ [...]

Leave a Comment more...

ಚಿತ್ರೋದ್ಯಮದತ್ತ ದಾಪುಗಾಲಿಡುತ್ತಿರುವ ಕಾರ್ಪೊರೇಟ್ ಕಂಪನಿಗಳು

by on Apr.26, 2010, under News, Special Feature

ರಿಲಯನ್ಸ್ ಸೇರಿದಂತೆ ರಾಜ್ಯ, ಹೊರ ರಾಜ್ಯ ಮತ್ತು ಹೊರ ದೇಶದ ಸಂಸ್ಥೆಗಳು ಚಿತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿವೆ. ಸ್ಯಾಂಡಲ್ವುಡ್, ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಹೊಸದೊಂದು ಕ್ರಾಂತಿ ಶುರುವಾಗಿದೆ. ಕನ್ನಡ ಒಳಗೊಂಡಂತೆ ದೇಶ-ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳು ಚಿತ್ರ ನಿರ್ಮಾಣಕ್ಕೆ ಮುಂದಾಗಿವೆ. ಜತೆಗೆ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು ಕೂಡ ಚಿತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಅಮೆರಿಕದ ಜನರಲ್ ಮೋಟಾರ್ಸ್ ಉದ್ಯೋಗಿ ಸದಾನಂದ ಅವರಲ್ಲದೆ, ನಾನಾ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಚಿತ್ರ ನಿರ್ಮಾಣದತ್ತ ಆಕರ್ಷಿತರಾಗಿದ್ದಾರೆ. ಕೆಲ ಸಂಸ್ಥೆಗಳು ವಾಣಿಜ್ಯ ಮತ್ತು [...]

Leave a Comment more...

ಮೂರುವರೆ ದಶಕ ಪೂರೈಸುತ್ತಿರುವ ಪುನೀತ್

by on Mar.26, 2010, under Special Feature

Puneeth-Raam

ಮೊನ್ನೆ ತಾನೆ ೩೫ ರ ಹರೆಯಕ್ಕೆ ಕಾಲಿಟ್ಟ ಪುನೀತ್ ಕನ್ನಡ ಚಿತ್ರರಂಗದಲ್ಲಿ ಮೂರುವರೆ ದಶಕ ಪೂರೈಸುವತ್ತ  ಮುಖ ಮಾಡಿದ ಮೇರು ನಟ. ಇಂದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪುನೀತ್ ಅವರಿಗೊಂದು ವಿಶೇಷ ಸ್ಥಾನವಿದೆ. ಸರಳತೆ, ನೈಜತೆ, ಚಾತುರ್ಯ ಗಳನ್ನು ಮೈಗೂಡಿಸಿಕೊಂಡು ಅಪಾರ  ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಪುನೀತ್ ಎಲ್ಲ ಕನ್ನಡಿಗರ ಹೃದಯದಲ್ಲಿ .ಮನೆಮಾಡಿದ್ದಾರೆ.  ಅವರ ಚಿತ್ರ ಬಂದಿದೆ ಎಂದರೆ ಅಭಿಮಾನಿಗಳು ಒಂದು ಬಾರಿಯಾದರೂ  ಚಿತ್ರ ನೋಡಲೇಬೇಕೆಂದು ಥೇಟರಿಗೆ ಓಡಿಯೇ ಬಿಡುತ್ತಾರೆ.
 
ಪರ ಭಾಷಾ ಸಿನಿಮಾಗಳ ಸ್ಪಧೆ೯ಯ ನಡುವೆಯೂ ಪುನೀತ್ [...]

1 Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...