ಚಾಲೆ೦ಜಿ೦ಗ್ ಸ್ಟಾರ್ ದರ್ಶನ್ ಜೊತೆ ಮಾತುಕತೆ
published on Sep.03, 2010, under Interview
ದರ್ಶನ್ ಸಿನಿಮಾ ಲೋಕಕ್ಕೆ ಮೊದಲು ಹೆಜ್ಜೆಯಿಟ್ಟಾಗ ಅವರ ನಾಮಬಲಕ್ಕೆ ತೂಗುದೀಪ್ ಎಂದಿತ್ತು. ತೂಗುದೀಪ್ ಶ್ರೀನಿವಾಸ್ ರ ಬ್ರಾಂಡ್ ದರ್ಶನ್ ನಿಗೆ ಸಹಾಯಕವಾಗಿತ್ತು. ಆದರೆ ಇಂದು ದರ್ಶನ್ ನನ್ನು ಚಾಲೆಂಜಿಂಗ್ ಸ್ಟಾರ್ ಎಂದೇ ಸಂಬೋದಿಸಲಾಗುತ್ತದೆ. ಈ ಪದಕ್ಕೆ ಅವರ ಪ್ರತಿಭೆ ಮತ್ತು ಮಾಧ್ಯಮದವರೊಂದಿಗೆ ಅವರ ಹಟ ಎರಡು ಸೇರಿದೆ. ಇಂದು ನಿರ್ಮಪಕರಿಗೆ ಅವರ ಕಾಲ್ಷೀಟ್ ಪಡೆಯುವುದು ಚಾಲೆಂಜಿಂಗ್ ವಿಷಯವೇ. ಶೌರ್ಯ ಬಿಡುಗಡೆಯಾಗಿ ಸಾಮಾನ್ಯ ರಿಸಲ್ಟ್ ಪಡೆದರೂ, ಇನ್ನೂ ಮೂರ್ನಾಲ್ಕು ಸಿನಿಮಾಗಳು ಹೆಸರು ಮಾಡುತ್ತಿವೆ. ಅವುಗಳಲ್ಲಿ ‘ಸಾರಥಿ’, ಪ್ರಿನ್ಸ್ ಮತ್ತು ಬಾಸ್ ಗಳ ಹೆಸರು ಸಾಕಷ್ಷು ಚಲಾವಣೆಯಲ್ಲಿವೆ.
ಶೌರ್ಯದ ಗೆಲುವಿನ ಖುಷಿಹಂಚಿಕೊಳ್ಳಲು ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ದಿಘೋಷ್ಟಿಗೆ ಸಾಧು ಕೋಕಿಲ, ದರ್ಶನ ನಿರ್ಮ್ ಪಕರ ಜೊತೆಯಾಗಿ ಬಂದಾಗ ನಮ್ಮ ಪತ್ರಿಕೆಗೆ ನೀಡಿದ ಸಂದರ್ಶನ ಹೀಗಿತ್ತು.
-ಸರ್, ಬಾಸ್ ಬಗ್ಗೆ ಹೇಳಿ?
ದರ್ಶನ್: ಶೌರ್ಯ ಕ್ಕಿಂತ ಮೊದಲು ಬಾಸ್ ಬರಬೇಕಾಗಿತ್ತು. ಸಿನಿಮಾದ ನನ್ನ ಕೆಲಸವೆಲ್ಲ ಮುಗಿದಿದೆ. ಬಾಸ್ ಬರುತ್ತದೆ ಎಂದು ನಾನು ಕಾದಿದ್ದೆ. ಸಿನಿಮಾವನ್ನು ತೆರೆಗೆ ತರುವುದು ನಿರ್ಮಾಪಕರಿಗೆ ಬಿಟ್ಟ ವಿಚಾರ. ಅವರು ಮನಸ್ಸು ಮಾಡಿರಲಿಲ್ಲ. ಶೌರ್ಯ ಬಿಡುಗಡೆಯಾಗಿದೆ.
-ಶೌರ್ಯ, ಶೌರ್ಯಂ ಸಿನಿಮಾದ ರಿಮೇಕ್. ಆ ಸಿನಿಮಾ ಮತ್ತು ಇದರಲ್ಲಿ ನೀವು ಕಂಡ ವಿಶೇಷತೆಗಳೇನು?
ದರ್ಶನ್: ನನ್ನ ಸಿನಿಮಾದ ಬಗ್ಗೆ ನಾನೇನು ಹೇಳುವುದಿಲ್ಲ. ನೀವೇ ಸಿನಿಮಾ ನೋಡಿ ಹೇಳಬೇಕು. ನೀವು ಶೌರ್ಯಂ ನೋಡಿದ್ದೀರಾ? ಎಂದು ಅವರೇ ಪ್ರಶ್ನೆಯಿಟ್ಟರು.
-ರಿಮೇಕ್ ಸಿನಿಮಾವನ್ನು ಒಪ್ಪಿಕೊಳ್ಳುವಾಗ ನೀವು ಆ ಸಿನಿಮಾವನ್ನು ಎಷ್ಟುಬಾರಿ ನೋಡುತ್ತೀರಾ?
ದರ್ಶನ್: ಆ ಸಿನಿಮಾವನ್ನು ನೋಡಿ ಮೊದಲು ಸ್ಟಡಿ ಮಾಡುತ್ತೇನೆ. ನಂತರ ನಿದೇಶಕರು ಮತ್ತು ಬ್ಯಾನರ್ ನೋಡಿ ಅಭಿನಯಿಸಲು ಒಪ್ಪಿಕೊಳ್ಳುತ್ತೇನೆ.
-ನೀವು ಕರ್ನಾಟಕದ ಗಡಿಭಾಗಗಳಲ್ಲಿ ನಿಮ್ಮ ಪ್ರೇಕ್ಷಕರ ಬಳಗವನ್ನು ಹೆಚ್ಚಿಸಿಕೊಳ್ಳುವಂತಹ ಪ್ರಯತ್ನ ಮಾಡುತ್ತಿಲ್ಲವಲ್ಲ?
ದರ್ಶನ್: ನನಗೂ ಆ ಭಾಗಗಳಲ್ಲಿ ನನ್ನ ಸಿನಿಮಾ ಪ್ರಮೋಟ್ ಮಾಡಲು ಇಚ್ಚಿಸುತ್ತೇನೆ. ನಿರ್ಮಾಪಕರು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ.
-ನಿಮ್ಮ ಹೊಂ ಬ್ಯಾನರಿನಲ್ಲೂ ಈ ಪ್ರಯತ್ನ ಮಾಡಿಲ್ಲವೇ?
ದರ್ಶನ್: ನಮ್ಮ ಹೊಂ ಬ್ಯಾನರಿನಲ್ಲಿ ನಾನೇ ಎಲ್ಲವನ್ನು ನಿಭಾಯಿಸುತ್ತೇನೆ.
-ನಿಮ್ಮ ತಮ್ಮ ನ ಬಳಿ ಈಗ ಎಷ್ಟು ಕಥೆಗಳನ್ನು ಕೇಳಿದಿರಾ?
ದರ್ಶನ್: ‘ಸಾರಥಿ’ ಕಥೆ ಮಾತ್ರ. ಒಂದು ಕಥೆ ಕೇಳಿದ ನಂತರ ಒಂದುವರೆ ವರ್ಷದವರೆಗೆ ಆತನ ಸುದ್ದಿಗೆ ಹೋಗುವುದಿಲ್ಲ. ‘ಪ್ರಿನ್ಸ್’ ಆದ ನಂತರ ನಮ್ಮ ಹೊಂ ಬ್ಯಾನರಿನಲ್ಲಿಯೇ ಸಿನಿಮಾ ಮಾಡುತ್ತೇವೆ. ಅಲ್ಲಿ ನನ್ನ ತಮ್ಮ ನಿರ್ಮಾಪಕ, ಎಂ.ಡಿ.ಶ್ರೀಧರ್ ನಿರ್ದೇಶಕ.
-ಸಾರಥಿ ಶೂಟಿಂಗ್ ಎಲ್ಲಿಗೆ ಬಂದಿದೆ?
ದರ್ಶನ್: ಬಹುತೇಕ ಟಾಕಿ ಪೋರ್ಷನ್ ಮುಗಿದಿದೆ. ಕೆಲವು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಕೆ.ಸಿ.ಎನ್ ಪ್ರೊಡಕ್ಷನ್ ತುಂಬಾ ಅಚ್ಚುಕಟ್ಟಾಗಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ನನ್ನ ತಮ್ಮನೇ(ದಿನಕರ್ ತೂಗುದೀಪ್) ನಿರ್ದೇಶಕರೂ ಆಗಿದ್ದರಿಂದ ತುಂಬ ನೀಟಾದ ಸಿನಿಮಾ ಮಾಡುತ್ತಿದ್ದೇವೆ. ಪ್ರಿನ್ಸ್ ಶೂಟಿಂಗ್ ಪ್ರಾರಂಭವಾಗುವ ಮುನ್ನ ನನ್ನ ಪಾಲಿನ ಕೆಲಸ ಮಾಡಿ ಮುಗಿಸುತ್ತೇನೆ.
-ಸಂದರ್ಶನ:ಎಪ್ಎನ್ ಬಿ ಟೀಮ್

