ಪವರ್ಪುಲ್ "ಭದ್ರ’ ಉತ್ತರ ಕರ್ನಾಟಕದವರಿಗೆ ಇಷ್ಟವಾಗುತ್ತಾನಂತೆ
published on Aug.14, 2011, under Interview, News
ಕನ್ನಡ ಚಿತ್ರಗಳು ಎಷ್ಟೇ ರಭಸವಾಗಿ ಬೆಂಗಳೂರಿನಲ್ಲಿ ಬಿಡುಗಡೆಯಾದರು, ಗೆಲುವಿನ ದಡ ಸೇರಬೇಕಾದರೆ ಉತ್ತರ ಕರ್ನಾಟಕದ ಮಾರ್ಕೆಟ್ ಬಹು ಮುಖ್ಯ. ಸಿನಿಮಾ ನಿರ್ದೇಶಕನಾದವನು ಸಮಸ್ತ ಕನ್ನಡ ಚಿತ್ರ ರಸಿಕರನ್ನು ಗಮನದಲ್ಲಿಟ್ಟುಕೊಂಡೆ ಸಿನಿಮಾ ನಿರ್ಮಿಸಬೇಕು. ‘ಭದ್ರ’ ಕೂಡ ತುಂಬ ಆಕ್ಷನ್ ಮೂವಿ. ಪ್ರಜ್ವಲ್ ತನ್ನ ಅಭಿಮನಿಗಳ ಮನತಣಿಸುವಲ್ಲಿ ಬೇಕಾದ ಪೈಟ್ಸ್,ಕಾಮೆಡಿ ಹಾಗೂ ಇಂಪಾದ ಹಾಡುಗಳೊಂದಿಗೆ ಚಿತ್ರ ನಿರ್ದೇಶಿಸಿದ್ದೇನೆ, ಎನ್ನುತ್ತಾರೆ ಮಹೇಶ್ ರಾವ್.
ಮಹೇಶ್ ರಾವ್ ‘ಭದ್ರ’ ಮೂರನೇ ಚಿತ್ರ. ಮೊದಲ ಸಿನಿಮಾ ಧಿಮಾಕಿನ ನಂತರ ಪ್ರಲ್ವಲ್ನೊಂದಿಗೆ ‘ಮುರುಳಿ ಮೀಟ್ಸ್ ಮೀರಾ’ ನಿರ್ದೇ ಶಿಸಿ ಪ್ರೇಕ್ಷಕರ ಗಮನ ಸೆಳೆದವರು. ತೆಲುಗಿನ ‘ರಣಂ’ ಸಿನಿಮಾದ ರಿಮೇಕ್ ಹಕ್ಕನ್ನು ಪಡೆದ ಎನ್.ಕುಮಾರ್ ನೇರವಾಗಿ ಮಹೇಶ್ರವರಿಗೆ ನಿರ್ದೇಶಿಸುವ ಜವಬ್ದಾರಿ ನೀಡಲು ಕಾರಣವೇ ಇವರ ಪ್ರತಿಭೆ. ಪ್ರತಿಭೆ ಮತ್ತು ಸಿನಿಮಾ ನಿರ್ಮಾಣದ ಜೊತೆಗೆ ವಿತರಣೆ ವ್ಯವಹಾರದ ಗಟ್ಟಿಗನೊಂದಿಗೆ ‘ಭದ್ರ’ ಈ ವಾರ ನೂರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ನೊಂದಿಗೆ ಡೈಸಿ ಷಾ ನಟಿಸಿರುವ ಸಿನಿಮಾ ವರಮಹಾಲಕ್ಷ್ಮಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ರಜೆಗೆ ಬೋನಸ್ ರೀತಿಯಲ್ಲಿ ಸಿನಿಮಾ ಬಂದಿದೆ.
ನಿಜಕ್ಕೂ ಈ ವಾರ ಜೋಗಯ್ಯ’ ಬಿಡುಗಡೆ ಯಾಗಬೇಕಿತ್ತು. ‘ಭದ್ರ’ ರೆಡಿಯಾದರೂ ಶಿವಣ್ಣನ ನೂರನೆ ಸಿನಿಮಾದ ಎದುರು ಬರುವುದು ಸರಿಯಲ್ಲಿ ಇನ್ನೂ ತಿಂಗಳ ಕಾಯೋಣ ಎಂದು ಕುಮಾರಣ್ಣ ಕಾಯುತ್ತಿದ್ದ. ಜೋಗಯ್ಯ ಬರುವುದು ಲೇಟಾಗುತ್ತೆ ಎಂದ ಕ್ಷಣವೆ ಕುಮಾರ್ ಭದ್ರ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿ ವ್ಯವಹಾರದ ಚಾಣಕ್ಷತೆ ಮೆರೆದಿದ್ದಾರೆ. ಅಂದ ಹಾಗೇ ಈ ವಾರದ ಗಟ್ಟಿ ಸಿನಿಮಾವಾಗಿ ಬರುತ್ತಿರುವ "ಭದ್ರ’ ಉತ್ತರ ಕರ್ನಾ ಟಕ ಮಾತ್ರವಲ್ಲದೆ ಎಲ್ಲಾ ಕೇಂದ್ರಗಳಿಗೂ ಇಷ್ಟವಾಗುವ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮಹೇಶ್ ರಾವ್.
ಮಹೇಶ್ ರಾವ್ರ ಹಿಂದಿನ ಎರಡು ಸಿನಿಮಾಗಳು ಸ್ವಮೇಕ್ ಆಗಿದ್ದವು. ಈ ಸಿನಿಮಾ ರಿಮೇಕ್ ಆಗಿದ್ದರಿಂದ ಬಹಳ ಚಾಲೆಂಜಿಗ್ ಆಗಿ ನಿರ್ದೇಶಿಸಿದ್ದಾರಂತೆ. ರಿಮೇಕ್ ಆದರೂ ನಮ್ಮವರಿಗೆ ಬೇಕಾದ ಹಾಗೆ ‘ಭದ್ರ’ನ್ನು ತಿದ್ದಿ ತೀಡಿದ್ದಾರೆ. ತೆರೆಯ ಮೇಲೆ ಸನ್ನಿವೇಶಗಳು ವೀಕ್ಷಕರ ಸಂಚಿಲತರಾಗುವಂತೆ ಮಾಡಬೇಕು. ಜಾಕಿ ಮತ್ತು ಕೆಂಪೆಗೌಡ ಸಿನಿಮಾಗಳು ತೆರೆಯ ಮೇಲೆ ಹೊಸ ಭಾಷ್ಯವನ್ನೆ ಬರೆದು ಹಲವಾರು ಕೋಟಿಗಳನ್ನು ಗಳಿಸಿದವು. ಆ ಹಾದಿಯಲ್ಲಿ ‘ಭದ್ರ’ನು ನಡೆದು ನಿರ್ಮಾಪಕರಿಗೆ ಲಕ್ಷ್ಮಿಯನ್ನು ನನಗೆ ಕೀರ್ತಿ ಯನ್ನು ತಂದು ಕೊಡುತ್ತಾನೆಂದು, ನಿರ್ದೇಶಕ ಮಹೇಶ್ ಹೇಳುತ್ತಾರೆ. ಚಿತ್ರದಲ್ಲಿ ಸತ್ಯಜಿತ್, ಶರಣ್, ಬುಲೆಟ್ ಪ್ರಕಾಶ್, ಕಾಶಿ, ಗಿರೀಶ್, ಸಂಪತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಶ್ರೀಗುರು ಸಂಗೀತ ನೀಡಿದ್ದಾರೆ. ಜೈಆನಂದ್ ಛಾಯಾಗ್ರಹಣ, ಶ್ರೀಕಾಂತ್ ತೆಂಗಿನತೋಟ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಉಮೇಶ್ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಶಂಕರ್ ಬಿಲ್ಲೆಮನೆ ಸಂಭಾಷಣೆ ಬರೆದಿದ್ದಾರೆ.


Wachable movie, Prajwal still needs to be improve in acting.