Chitra Vaarte

"ಯಕ್ಕಾ" ಬಿದ್ದರೆ ಸೋಲು ಇಲ್ಲ

published on Mar.12, 2010, under Interview

naganath_joshi ನನಗೆ ಇಸ್ಪೀಟ್ ಆಡಲಿಕ್ಕೆ ಬರುವುದಿಲ್ಲ. ಆದರೂ ನನ್ನ ಸ್ನೇಹಿತರಿಂದ "ಯಕ್ಕಾ" ಎಂದರೆ ಏನು ಎಂದು ತಿಳಿದುಕೊಂಡು "ಎಕ್ಕಾ" ಎಂಬ ಟೈಟಲ್ ಕೊಟ್ಟು ಸಿನಿಮಾ ಮಾಡಿದ್ದೇನೆ. "ಯಕ್ಕಾ" ಎಂದರೆ ಇಸ್ಪೀಟ್ ಆಟ. ಇಸ್ಪೀಟ್ ಆಟದಲ್ಲಿ ಏಸ್ ಅಂದರೆ ಎ ಬಂದರೆ ಸೋಲು ಇಲ್ಲ ಎಂದರ್ಥ. ಇದು ನನ್ನ ಎರಡನೇ ಚಿತ್ರ. ಮೊದಲ ಚಿತ್ರ "ಜಾಲ" ಎನ್ನುತ್ತಾರೆ "ಯಕ್ಕಾ" ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ನಾಗನಾಥ ಜೋಶಿ ಅವರು.

"ಯಕ್ಕಾ" ಚಿತ್ರದ ಕಾನ್ಸೆಪ್ಟ್ ನ್ನು ಮೂರು ರೀತಿಯಲ್ಲಿ ಹೇಳಲಿಕ್ಕೆ ಪ್ರಯತ್ನ ಮಾಡಿದ್ದೇನೆ. ಒಂದು "ಯಕ್ಕಾ" ಎಂಬ ಟೈಟಲ್ ನಟನ ಹಾಗೂ ನಟಿಯ ಹೆಸರು ಬರಬೇಕೆಂಬುದು ನನ್ನ ಆಸೆ ಇತ್ತು. ಹಾಗೆ ಆ ಹೆಸರುಗಳು ಬಂದಿವೆ ಕೂಡ. ನಟನ ಹೆಸರು ಯಶವಂತ್ ಹಾಗೂ ನಟಿಯ ಹೆಸರು ಕುಸುಮಾ ಎಂದು ಬರುತ್ತದೆ.

 

ಎರಡನೇಯದಾಗಿ ಇಡೀ ಚಿತ್ರದ ಕಥೆ "ಯಕ್ಕಾ" ಅನ್ನೋದನ್ನ ಹೇಳಬೇಕು. ಮೂರನೇಯದಾಗಿ ಇಸ್ಪೀಟ್ ಆಟ ಆಡೋದರಿಂದ ಜೀವನಾನೇ ಹಾಳಾಗಿ ಹೋಗುತ್ತದೆ. ಅದೇ ಪ್ರೀತಿಯಿಂದ ಉತ್ತಮ ಜೀವನವನ್ನ ನಿರೂಪಿಸಿಕೊಳ್ಳಬಹುದು ಎಂಬುದನ್ನ ಚಿತ್ರದ ಮೂಲಕ ಸಂದೇಶ ನೀಡಲು ಪ್ರಯತ್ನ ಮಾಡಿದ್ದೇವೆ ಈ ಎಲ್ಲ ಕಾರಣದಿಂದ "ಯಕ್ಕಾ" ಎಂಬ ಹೆಸರನ್ನೇ ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ನಾಗನಾಥ್ ಜೋಶಿ.

 

ಕಲ್ಯಾಣ್ ಕುಮಾರ್ ಅವರ ಮಗ ಭರತ್ ಕಲ್ಯಾಣ್ ಚಿತ್ರದ ಹೀರೋ. ಇವರು ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನ ಮಾತಾಡಿದ್ದಾರೆ. ಹಾಗೂ ಇವರೇ ಡಬ್ಬಿಂಗ್ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಇನ್ನೊಬ್ಬ ನಟ ಕೂಡ ಇದ್ದಾರೆ. ಇವರು ಉತ್ತರ ಕರ್ನಾಟಕದವರು. ರಮೇಶ್ ಪವಾರ್ ಅಂತ. ಆದರೆ ಇವರು ಬೆಂಗಳೂರು ಭಾಷೆ ಮಾತಾಡಿದ್ದಾರೆ. ಆದರೆ ಇವರ ಡಬ್ಬಿಂಗ್ ಬೇರೆಯವರು ಮಾಡಿದ್ದಾರೆ.

 

ಇನ್ನು ನಟಿ ಶುಭಾಷಿನಿ ಹಾಸನದವರು. ಇದು ಇವರ ಪ್ರಥಮ ಚಿತ್ರ ಎಂದು ನಾವಂದುಕೊಂಡಿದ್ದೇವೆ. ಆದರೆ ಇದಕ್ಕೂ ಮುಂಚೆ ಶುಭಾಷಿನಿ ಬೇರೆ ಚಿತ್ರದಲ್ಲಿ ಅಭಿನಯಿಸಿದ್ದಾರಂತೆ ಆ ಚಿತ್ರ ಇನ್ನೂ ರಿಲೀಸ್ ಆಗಿಲ್ಲವಂತೆ. ಕೌಟಿಂಬಿಕ ಚಿತ್ರಗಳನ್ನು ಮಾಡಲು ನಾನು ಇಷ್ಟ ಪಡುತ್ತೇನೆ. ನಾನು ಸಿನಿಮಾಕ್ಕಿಂತ ಹೆಚ್ಚಾಗಿ ಧಾರಾವಾಹಿಗಳನ್ನ ಮಾಡಿದ್ದೇನೆ. ಮೊದಲಿಗೆ "ಮಾಯಾಮೃಗ" ನಂತರದಲ್ಲಿ "ಜ್ವಾಲಾಮುಖಿ", "ಕನ್ನಡಿ", "ಮಹಾಮಾಯೆ", "ನಂದಗೋಕುಲ", "ಕಿಚ್ಚು", "ಸ್ವಾಭಿಮಾನ", "ಎಚ್ಚರ" ಇನ್ನೂ ಹಲವಾರು ಧಾರಾವಾಹಿಗಳನ್ನ ಮಾಡಿದ್ದೇನೆ. ಮುಂದಿನ ತಿಂಗಳಲ್ಲಿ ಒಂದು ಧಾರಾವಾಹಿ ಮಾಡುವುದಿದೆ ಎನ್ನುತ್ತಾರೆ.

 

naganath_joshi_01

"ಯಕ್ಕಾ"ದ ನಂತರ ಬೇರೆ ಆಫರ್ ಗಳೇನಾದರೂ ಇದಾವಾ ಅಂತ ಕೇಳಿದ್ದಕ್ಕೆ, ಇವತ್ತಿಗೂ ನನ್ನ ಹತ್ತಿರ ಟ್ಯಾಲೆಂಟ್ ಇದೆ. ನಾನು ಯಾವಾಗಲೂ ನಂಬೋದು ಟ್ಯಾಲೆಂಟ್ ನ್ನ. ಎಂಥದೆ ಬಂದರು ಸಿನಿಮಾ ಮಾಡ್ತಿನಿ. ಚಿತ್ರದಲ್ಲಿ ಟ್ಯಾಲೆಂಟ್ ಯಾವ ರೀತಿ ಉಪಯೋಗಿಸತಿವಿ ಎನ್ನುವುದು ಮುಖ್ಯ. ನಮ್ಮ ಟ್ಯಾಲೆಂಟ್ ಜೊತೆ ಜೀವನಾನು ನಡೆಸಬೇಕಲ್ಲವೆ. ನಿರ್ಮಾಪಕರಲ್ಲಿ ಆಫರ್ ಕೇಳಿಕೊಂಡು ಹೋಗುತ್ತೇನೆ. ನಾನು ಇವತ್ತಿಗೂ ಕೂಡ ಒಬ್ಬ ಭಿಕ್ಷುಕ. ಶ್ರಮದ ಮೂಲಕ ಪ್ರಾಮಾಣಿಕತೆಯಿಂದು ದುಡಿದು ಮುಂದೆ ಬರಲು ಪ್ರಯತ್ನಿಸುತ್ತೇನೆ ಎನ್ನುವುದು ನಾಗನಾಥ್ ಜೋಶಿ ಅವರ ಹಂಬಲ.

 

"ಯಕ್ಕಾ" ಎಂಬ ಟೈಟಲ್ ನ್ನು ತಮ್ಮ ಚಿತ್ರಕ್ಕೆ ಕೊಡಬೇಕೆಂದು ನಿರ್ದೇಶಕ ಸೂರಿ ಅವರು ಬಂದಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸುವುದಾಗಿತ್ತು. ಆದರೆ ಮೊದಲು ನಾನು "ಯಕ್ಕಾ" ಮಾಡುವುದಾಗಿ ರಿಜಿಸ್ಟ್ರೇಷನ್ ಮಾಡಿಸಿಯಾಗಿತ್ತು ನಂತರ ಸುದ್ದಿ ತಿಳಿದು ಸೂರಿ ಸುಮ್ಮನಾದರು. ಈಗ ತಮ್ಮ ಚಿತ್ರಕ್ಕೆ "ಜಾಕಿ" ಎಂಬ ಟೈಟಲ್ ಕೊಟ್ಟಿದ್ದಾರೆ.

 
ಚಿತ್ರದ ಹಾಡು, ಸಂಗೀತ ತುಂಬಾ ಚೆನ್ನಾಗಿದೆ. ಒಟ್ಟು ಐದು ಹಾಡುಗಳಿದ್ದು, ಹಾಡುಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಒಂದು ಹಾಡಂತೂ ತುಂಬಾ ಚೆನ್ನಾಗಿದೆ. ನನ್ನ ಸ್ನೇಹಿತರು ಹಾಡುಗಳು ತುಂಬಾ ಸೊಗಸಾಗಿವೆ ಎನ್ನುತ್ತಾರೆ. ಮತ್ತೊಬ್ಬ ವ್ಯಕ್ತಿ ಫೋನ್ ಕಾಲ್  ಮಾಡಿ ಸ್ವರವು ಇರದೆ ರಾಗವು ಇರದು ಈ ಹಾಡು ನಿಜವಾಗಲೂ ತುಂಬಾ ಚೆನ್ನಾಗಿದೆ ಎಂದು ಹೇಳಿದರು ಎನ್ನುತ್ತಾರೆ. ಎಂ.ಎನ್. ಕೃಪಾಕರ್ ಅವರ ಸಂಗೀತ ಚಿತ್ರಕ್ಕಿದೆ. "ಯಕ್ಕಾ" ವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದಾರೆ.

 

-ಸವಿತಾ ಹುಲಕೋಟಿ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...