Chitra Vaarte

ಯಾರನ್ನು "ಸ್ವಯಂವರಿ"ಸುವಳು ಈ ಚೆಲುವೆ?

published on Mar.13, 2010, under Interview

sharmilamandre ಲವ್ ಮಾಡಿದ್ರೂ ಓಡಿ ಹೋಗಿ ಮದುವೆ ಆಗಬಾರದು. ತಂದೆ-ತಾಯಂದಿರನ್ನ ಒಪ್ಪಿಸಿಯೇ ಮದುವೆ ಆಗಬೇಕು ಅಂತಾ ಹಟಾ ತೊಟ್ಟು ಅದರಂತೆ ಪ್ರೀತಿಯಲ್ಲಿ ಎಲ್ಲರ ಮನಸ್ಸನ್ನ ಗೆದ್ದು, ಕಡೆಗೂ ಒಂದಾಗ್ತಾರೆ ಸಜನಿ (ಶರ್ಮಿಳಾ ಮಾಂಡ್ರೆ) ಮತ್ತು ಧ್ಯಾನ್. ಅಂದು "ಸಜನಿ"ಯಲ್ಲಿ ಹಾಗೆ ಒಂದಾಗಿದ್ದ ಸಜನಿ ಇಂದು "ಸ್ವಯಂವರ"ದಲ್ಲಿ ಯಾವ ರೀತಿ ಹುಡುಗರ ಮನಸ್ಸನ್ನ ಗೆಲ್ಲತಾಳೆ, ಯಾವ ಹುಡುಗನ ಜೊತೆ "ಸ್ವಯಂವರ"ಕ್ಕೆ ನಿಲ್ಲತಾಳೆ ಎನ್ನುವುದನ್ನ ಪ್ರೇಕ್ಷಕರು ಕಾದು ನೋಡಬೇಕಷ್ಟೆ.

 

ನನಗೆ ನಾನು ಮಾಡಿದ ಚಿತ್ರಗಳಲ್ಲಿ ಆತ್ಮತೃಪ್ತಿ ಇದೆ. ನಾನು ಚಿತ್ರಗಳ ಗೆಲುವಿನ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಯಾಕೆಂದರೆ ಚಿತ್ರಗಳನ್ನ ಒಪ್ಪಿಕೊಳ್ಳುವಾಗಲೇ ನನಗೆ ಗೊತ್ತಿರುತ್ತದೆ ಚಿತ್ರ ಹೇಗೆ ಬರುತ್ತದೆ ಎಂದು. ಪ್ರೇಕ್ಷಕರು ಮೆಚ್ಚಿಕೊಂಡರೆ ಸಾಕು  ಅದಕ್ಕಿಂತ ಖುಷಿ ಬೇರೆ ಇಲ್ಲ. ನನಗೆ ಅತಿಯಾದ ಆಸೆ ಇಲ್ಲ. ಇದ್ದುದರಲ್ಲಿಯೇ ತೃಪ್ತಿ ಪಡ್ತಿನಿ ಎಂದು ಎಣ್ಣೆಯಲ್ಲಿ ಸಾಸಿವೆ ಸಿಡಿದಂತೆ ಮಾತನಾಡುತ್ತಾರೆ. "ಸ್ವಯಂವರ" ಚಿತ್ರದ ಕುರಿತು ಶರ್ಮಿಳಾ ಮಾತಾಡಿದ್ದು ಹೀಗೆ.

 

"ಸ್ವಯಂವರ"ದಲ್ಲಿ ನಿಮ್ಮ ಪಾತ್ರ ಏನು ?
ಈ ಚಿತ್ರದಲ್ಲಿ ನಾನೊಬ್ಬಳು ಫ್ಯಾಶನ್ ಡಿಸೈನರ್. ಪಾತ್ರಾ ತುಂಬಾ ಮಾಡ್ರನಾಗಿದೆ. ಸ್ಟೈಲ್ ಚೆನ್ನಾಗಿದೆ. ಪಾತ್ರಾ ಮಾಡ್ರನಾಗಿದ್ದರೂ ಕೂಡ ಹುಡುಗಿ ಇಲ್ಲಿ ತುಂಬಾ ಸೂಕ್ಷ್ಮ ಸ್ವಭಾವದವಳಿರುತ್ತಾಳೆ. ಹೋಮ್ಲಿ ಇರುತ್ತಾಳೆ. ಒಟ್ಟನಲ್ಲಿ ಪಾತ್ರಾ ತುಂಬಾ ಚೆನ್ನಾಗಿದೆ.

 

ಇದು ಎಷ್ಟನೇ ಚಿತ್ರ ?
೭ನೇ ಚಿತ್ರ.

 

ಎಂಥ ಫಾತ್ರದಲ್ಲಿ ಅಭಿನಯಿಸಲು ಇಷ್ಟಪಡ್ತೀರಿ ?
ವಿಭಿನ್ನ ಪಾತ್ರದಲ್ಲಿ ನಟಿಸಲು ತುಂಬಾ ಇಷ್ಟ. ನನಗೆ ಹೊಂದುವಂಥ ಪಾತ್ರಗಳನ್ನಾದರೆ ಮಾಡುತ್ತೇನೆ. ತುಂಬಾ ಎಕ್ಸ್ ಪೋಸ್ ಮಾಡೋ ಚಿತ್ರಗಳಲ್ಲಿ ನಟಿಸುವುದಿಲ್ಲ.

 

"ಸ್ವಯಂವರ" ಚಿತ್ರದಲ್ಲಿ ನಿಮ್ಮ ಉಡುಗೆಗೆ ನೀವೆ ಡಿಸೈನ್ ಆಯ್ಕೆ ಮಾಡೀದೀರಾ ?
ಒಟ್ಟು ಮೂರು ಜನ. ನಿರ್ದೇಶಕರು, ನಾನು ಮತ್ತು ಫ್ಯಾಷನ್ ಡಿಸೈನರ್ ಯೋಗಿ ಅವರು. ನಾವ ಮೂರು ಜನ ಕುಳಿತುಕೊಂಡು ಪ್ಲ್ಯಾನ್ ಮಾಡಿದಿವಿ.

 

ಬಾಲಿವುಡ್ ನಲ್ಲಿ ಅವಕಾಶಾ ಸಿಕ್ಕರೆ ನಟಿಸ್ತಿರಾ ?
ಒಳ್ಳೆ ಅವಕಾಶಗಳು ಬಂದರೆ ಖಂಡಿತಾ ನಟಿಸ್ತಿನಿ. ಸುಮ್ನೆ ಬಾಲಿವುಡ್-ಬಾಲಿವುಡ್ ಎಂದು ಅನೇಕರು ಹೋಗ್ತಾರೆ. ಆದ್ರೆ ಅಲ್ಲಿ ಏನು ಆಗುತ್ತೋ ಏನೋ ಗೊತ್ತಿಲ್ಲ. ಆ ತರಾ ಆಗೋಕೆ ನಂಗಿಷ್ಟಾ ಇಲ್ಲಾ.

 

sharmila01

ಯಾವ ಚಿತ್ರ ತುಂಬಾ ಇಷ್ಟಾ ಆಗಿದೆ ?
"ಬಂಧನ"

 

ಯಾವ ನಟ-ನಟಿಯರು ಇಷ್ಟ ?
ಭಾರತಿ, ಲಕ್ಷ್ಮಿ, ಮಾಲಾಶ್ರೀ, ಅನಂತ್ ನಾಗ್, ಶಂಕರ್ ನಾಗ್.

 

ನಿಮ್ಮ ಮೊದಲ ಚಿತ್ರಕ್ಕೂ ಈ ಚಿತ್ರಕ್ಕೂ ಏನು ವ್ಯತ್ಯಾಸ ಇದೆ ?
ಮೊದಲ ಹಾಗೂ ಎರಡನೇ ಚಿತ್ರದಲ್ಲಿ ಯಾರ ಪರಿಚಯವೂ ಇರುವುದಿಲ್ಲ. ಎಲ್ಲ ಹೊಸ ವಾತಾವರಣ. ಅನುಭವ ಇರುವುದಿಲ್ಲ. ಎಲ್ಲೋ ಒಂದು ಕಡೆ ಭಯ ಇದ್ದೇ ಇರುತ್ತದೆ. ಇಲ್ಲಿ ಕಲಿತದ್ದು ಜಾಸ್ತಿ. ಆದರೆ ಇದು ನನ್ನ ೭ನೇ ಚಿತ್ರವಾದ್ದರಿಂದ ಅನುಭವ ಇರುತ್ತದೆ. ಭಯಾ ಇರುವುದಿಲ್ಲ. ಆತ್ಮವಿಶ್ವಾಸ ಇರುತ್ತದೆ. ಸರಳವಾಗಿ ನಟಿಸಬಹುದು.

 

ಏನ್ ಓದ್ತಾ ಇದೀರಾ?
ಬಿಬಿಎ ಕರೆಸ್ ಪಾಂಡೆನ್ಸ್ ಮಾಡ್ತಾ ಇದೀನಿ.

 

ಮದುವೆ ಬಗ್ಗೆ ನಿಮ್ಮ ಅಭಿಪ್ರಾಯಾ ?
ನಮ್ಮ ಜೀವನದಲ್ಲಿ ಮದುವೆ ಅನ್ನೋದು ತುಂಬಾ ಅವಶ್ಯಕ. ನನ್ನ ಪ್ರಕಾರ ಪ್ರತಿಯೊಬ್ಬರಿಗೂ ಮದುವೆ ಬೇಕೆ ಬೇಕು. ಮದುವೆ ಇಲ್ಲದೇ ಜೀವನ ಶೂನ್ಯ ಅನಿಸಿಬಿಡುತ್ತದೆ. ಹರೆಯದ ವಯಸ್ಸಲ್ಲಿ ನಾವು ಹೇಗೋ ಮಜಾ ಮಾಡ್ತಾ ಕಾಲಾ ಕಳೆಯಬಹುದು. ಆದರೆ ವೃದ್ಧಾಪ್ಯದಲ್ಲಿ ನಮಗೆ ಸಂಗಾತಿ ಬೇಕೆ ಬೇಕು.

 

ಲವ್ ಮ್ಯಾರೇಜ್ ಇಷ್ಟಾನಾ? ಅರೆಂಜಾ? ಯಾಕೆ ?
ಲವ್ ಮ್ಯಾರೇಜ್. ಯಾಕೋ ಗೊತ್ತಿಲ್ಲ. ಚಿಕ್ಕಂದಿನಿಂದಲೂ ಲವ್ ಮ್ಯಾರೇಜ್ ಅಂದ್ರೇನೆ ತುಂಬಾ ಇಷ್ಟ. ಅಪ್ಪ-ಅಮ್ಮಂದು ಕೂಡ ಲವ್ ಮ್ಯಾರೇಜೆ. ಲವ್ ಮಾಡಿದ್ರೆ ಓಕೆ. ಇಲ್ಲಾಂದ್ರೆ ಅರೆಂಜ್ ಕಮ್ ಲವ್ ಮಾಡ್ತಿನಿ. ಮದುವೆ ಅರೆಂಜ್ ಆದ ಮೇಲೆ ಲವ್ ಮಾಡಬಹುದಲ್ಲಾ.

 

ಸುಂದರವಾದ ಹುಡುಗನ್ನ ಇಷ್ಟ ಪಡ್ತೀರಾ ಹೇಗೆ ?
ನಾನು ಸೌಂದರ್ಯಕ್ಕೆ ಯಾವತ್ತೂ ಬೆಲೆ ಕೊಡುವವಳಲ್ಲ. ಅವನು ನನ್ನನ್ನ ತುಂಬಾ ಪ್ರೀತಿ ಮಾಡಬೇಕು. ನನ್ನ ಮನಸ್ಸನ್ನು ಅರಿತು ನಡಿಬೇಕು. ನನ್ನ ಕೆಲಸಕ್ಕೆ ಗೌರವ ಕೊಡಬೇಕು. ಯಾವುದೇ ರೀತಿಯ ಅನುಮಾನಾ ಇರಬಾರದು. ಅರ್ಥಾ ಮಾಡಿಕೊಂಡಾಗಾ ಬಾಳು ಜೇನಲ್ಲವೆ.

ಸಲಹೆ
ನಾನು ಎಲ್ಲ ಹುಡುಗಿಯರಿಗೂ ಒಂದು ಏನ ಹೇಳೋಕೆ ಇಷ್ಟ ಪಡ್ತಿನಿ ಅಂದ್ರೆ ಯಾರೂ ಖಾಲಿ ಕುಳಿತುಕೊಳ್ಳಬೇಡಿ. ಚೆನ್ನಾಗಿ ಕಲಿಯಿರಿ. ನಿಮ್ಮ ಕೈಯಲ್ಲಿ ಯಾವುದಾದರೂ ಒಂದು ಡಿಗ್ರಿ ಇರಲಿ. ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ. ಮತ್ತೊಂದು ವಿಷಯ ನನ್ನ ಪ್ರೀತಿ ವಿಫಲವಾಯಿತೆಂದು ಎಂದೂ ಕೊರಗಬೇಡಿ. ಹಳೆಯದನ್ನ ಮರೆತುಬಿಡಿ. ಇಂಥ ಸಮಯದಲ್ಲಿ ಆದಷ್ಟು ಕೆಲಸದಲ್ಲಿ ಕಾರ್ಯನಿರತರಾಗಿ. ಪ್ರೀತಿಯಲ್ಲಿ ನನಗೆ ಮೋಸವಾಯಿತೆಂದು ಅಳುತ್ತಾ ಕುಳಿತ್ರೆ ಏನು ಪ್ರಯೋಜನ ಇಲ್ಲ. ಇದರಿಂದ ನಿಮ್ಮ ಜೀವನಾನೇ ಹಾಳಾಗುತ್ತೆ. ಸಿಗದ ಪ್ರೀತಿಗೆ ಯಾಕೆ ಕೈ ಚಾಚಬೇಕು. ನಮ್ಮ ನ್ನು ತುಂಬಾ ಪ್ರೀತಿಸುವವರನ್ನು ಮದುವೆಯಾದರೆ ಜೀವನಾ ಎಷ್ಟು ಚೆನ್ನಾಗಿರುತ್ತೆ ಅಲ್ಲವಾ. ನಮ್ಮನ್ನ ಕಳಕೊಂಡ ಅವರಿಗೆ ಒಂದಲ್ಲ ಒಂದು ದಿನ ಪಶ್ಚಾತ್ತಾಪಾ ಆಗೇ ಆಗುತ್ತೆ. ಆಗ ಅವರಿಗೆ ಪ್ರೀತಿಯ ಅರಿವಾಗುತ್ತೆ. ಏನಂತೀರಾ.

 

sharmila ಮುಂದಿನ ಭವಿಷ್ಯದ ಕುರಿತು ಯೋಜನೆ ಏನು?
ಜೀವನ ತುಂಬಾ ದೊಡ್ಡದಿದೆ. ಅಷ್ಟು ಬೇಗನೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಸಾಧ್ಯಾನು ಇಲ್ಲ. ಇವತ್ತು ಹೀಗಿದ್ದ ನಾವು ನಾಳೆ ಹೇಗಿರ್ತಿವೋ ಗೊತ್ತಿಲ್ಲ. ನಮ್ಮ ಹಣೆಬರದಲ್ಲಿ ಏನು ಬರೆದಿದೆಯೋ ಅದೇ ಆಗೋದು. ನನಗೆ "ಸ್ವಯಂವರ"ದಲ್ಲಿ ಒಬ್ಬ ನಟನ ಪಾತ್ರಾ ತುಂಬಾ ಇಷ್ಟ ಆಗಿದೆ. ಆ ತರಾ ಹುಡುಗಾ ನನ್ನ ನಿಜ ಜೀವನದಲ್ಲಿ ಬೇಕು ಅಂತಾ ಅನಿಸುತ್ತೆ. ಆದರೆ ಅದೇ ತರಾ ಇರೋ ಹುಡುಗಾ ಸಿಗಬೇಕಲ್ಲಾ. ಇಂದಿನ ಜೀವನಾ ತುಂಬಾ ನಾಜೂಕಾಗಿದೆ. ಮುಂದೆ ನಮ್ಮ ಜೀವನಾ ಹೇಗಿರುತ್ತೋ ಗೊತ್ತಿಲ್ಲ.

 

ಗ್ಲಾಮರ್ ಬಗ್ಗೆ ನಿಮ್ಮ ಅಭಿಪ್ರಾಯ ?
ಗ್ಲಾಮರ್ ಕೆಲವು ಕಡೆ ಮಾತ್ರ ಅನುಕೂಲ ಆಗುತ್ತದೆ. ಗ್ಲಾಮರ್ ಗೆ, ವಲ್ಗರ್ ಗೆ ತುಂಬಾ ವ್ಯತ್ಯಾಸ ಇದೆ. ನನ್ನ ಪಾತ್ರ "ಸ್ವಯಂವರ"ದಲ್ಲಿ  ಗ್ಲಾಮರ್ ಆಗಿದೆ. ಆದರೆ ವಲ್ಗರ್ ಆಗಿಲ್ಲ. ತುಂಬಾ ಎಕ್ಸ್ ಪೋಸ್ ಮಾಡಲ್ಲ.

 

ಎಂಥ ಉಡುಗೆ ಇಷ್ಟ ?
ಜೀನ್ಸ್-ಕುರ್ತಾ

 

ಎಂಥ ತಿಂಡಿ ಇಷ್ಟ ?
ಚೈನೀಸ್, ಬಿಸಿಬೇಳೆ ಬಾತ್ ಜೊತೆ ಚಿಪ್ಸ್.

 

ಸೌಂದರ್ಯದ ಗುಟ್ಟು ?
ಸೌಂದರ್ಯ ಯಾವತ್ತೂ ಶಾಶ್ವತವಲ್ಲ. ಒಳ್ಳೆ ಮನಸ್ಸು ಇರಬೇಕು. ೫-೧೦ ವರ್ಷದ ತನಕ ಮಾತ್ರ ಸೌಂದರ್ಯ ಇರುತ್ತದೆ. ಸೌಂದರ್ಯಕ್ಕೆ ಎಂದೂ ಮಾರು ಹೋಗಬಾರದು. ವ್ಯಕ್ತಿತ್ವಕ್ಕೆ ಮಹತ್ವ ಕೊಡಬೇಕು.

 

-ಸವಿತಾ ಹುಲಕೋಟಿ

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...