ಸೊಲ್ಲ… ಸೊಲ್ಲ…. ಮುರುಳಿ ಅಬ್ಬಾಸ್
published on Mar.13, 2010, under Interview
"ಸೊಲ್ಲ ಸೊಲ್ಲ ಇನಿಕ್ಯುಂ" (ಹೇಳು ಹೇಳು ಸಿಹಿಮಾತನ್ನು) ಹೇಳಲು ನಿದೇ೯ಶಕ ಮುರುಳಿ ಅಬ್ಬಾಸ್ ಕನಾ೯ಟಕಕ್ಕೆ ತಮ್ಮ ಸಿನಿಮಾವನ್ನು ತಂದಿದ್ದಾರೆ.
ಆರ್ಯ-2 ಖ್ಯಾತಿಯ ನವದೀಪ್ ಹಾಗೂ ಮಧುಮಿತಾ ಹಾಗೂ ಕನ್ನಡಿಗ ಪ್ರಕಾಶ್ ರಾಜ್ ನಟಿಸಿರುವ ಈ ಚಿತ್ರದ ಮೂಲಕ ಹದಿಹರೆಯದವರಿಗೆ ಪ್ರೇಮದ ಪಾಠ ನಡೆಯುತ್ತಿದೆ. "ಸೊಸೊಇ" ಮುರುಳಿಯವರ ಎರಡನೆಯ ಚಿತ್ರ. ಹತ್ತು ವಷ೯ಗಳ ಹಿಂದೆ "ರಾಶಿ" ನಿದೇ೯ಸಿದ ಈ ಚಿತ್ರ ಅಜೀತ್ ಗೆ ಮೊದಲ ಆಕ್ಷನ್ ಚಿತ್ರವಾಗಿದ್ದು ಪ್ರಕಾಶ್ ರಾಜ್ ಮೊದಲಬಾರಿಗೆ ತಮಿಳು ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿಸಿದ ಕೀತಿ೯ ಮುರುಳಿಯವರದು. ತಮಿಳುನಾಡಿನಲ್ಲಿ ಎವರೇಜ್ ಗೆಲವು ಪಡೆದ "ಸೊಸೊಇ" ಈಗ ಬೆಂಗಳೂರಿನಲ್ಲಿ 8 ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡ ಸಂದಬ೯ದಲ್ಲಿ ಚಿತ್ರವಾತೆ೯ ಯೊಂದಿಗೆ ಮುರುಳಿಯವರು ಮಾತನಾಡುತ್ತ, "ಸೊಲ್ಲ ಸೊಲ್ಲ ಇನಿಕ್ಯುಂ" ಲವ್ಲಿ ಆಂಡ್ ಯುತ್ ಪುಲ್ ಲವ್ ಸ್ಟೋರಿ. ಲವ್ ಪೆಲ್ಯುರ್ ನಿಂದಾಗಿ ಹೀರೋ ತನ್ನ ಬದುಕನ್ನು ಹಾಳುಮಾಡಿಕೊಳ್ಳದೇ ಇನ್ನೊಂದು ಚೆಲುವೆಯೊಂದಿಗೆ ಪ್ರೀತಿಯ ಮಧುರತೆಯ ಕ್ಷಣಗಳೇ ಈ ಸಿನಿಮಾದ ಕಥಾಸಾರ" ಎನ್ನುತ್ತಾರೆ.
" ಬಹಳ ಹಿಂದೆಯೇ ಹೆಚ್ಚು ಹೆಚ್ಚು ಸಿನಿಮಾ ನಿದೇ೯ಶಿಸಬೇಕೆಂದು ಚಿತ್ರರಂಗಕ್ಕೆ ಬಂದೆ. "ರಾಶಿ" ಸಿನಿಮಾದ ನಂತರ ಮನೆಯ ಜವಬ್ದಾರಿ ಹೆಚ್ಚಾದರಿಂದ ಬಹಳಷ್ಟು ಗ್ಯಾಪ್ ಬಿತ್ತು. ಆ ಮೊದಲು ಮಣಿರತ್ನಂ ರವರ ಸೂಪರ್ ಹಿಟ್ ಸಿನಿಮಾಗಳಾದ "ರೋಜಾ", "ದಳಪತಿ" ಹಾಗೂ "ತಿರುಡು ತಿರುಡಂ" ನಂತಹ ಸಿನಿಮಾಗಳಲ್ಲಿ ಸಹ ನಿದೇ೯ಶಕನಾಗಿ ಕೆಲಸ ಮಾಡಿದೆ. "ರಾಶಿ" ನಂತರ ಬಹಳ ಇಷ್ಟಪಟ್ಟು ಮಾಡಿದ ಸಿನಿಮಾ "ಸೊಲ್ಲ ಸೊಲ್ಲ ಇನಿಕ್ಯುಂ". ನಮ್ಮ ಸಿನಿಮಾ ಬಿಡುಗಡೆ ವೇಳೆ ಕಮಲ್ ಹಾಸನ್ ರವರ "ಉನ್ನಿಪರ್ಉಳವನ್" ಹಾಗೂ ಶಂಕರರ್ ನಿದೇ೯ಶನದಂತಹ ದೊಡ್ಡ ದೊಡ್ಡ ಬ್ಯಾನರ್ ನ ಸಿನಿಮಾಗಳ ಪೈಪೋಟಿ ಎದುರಿಸಬೇಕಾಯಿತು. ಆದರೂ 78 ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡ ನಮ್ಮ ಸಿನಿಮಾ ಸಾಧರಣ ಗೆಲುವು ಪಡೆದಿದ್ದರಿಂದ ನನಗೆ ಇನ್ನು ಹೆಚ್ಚು ಸಿನಿಮಾ ನಿದೇ೯ಶಿಸಲು ಸ್ಪೂತಿ೯ ನೀಡಿದೆ",ಎಂದು ಮುರುಳಿ ಹೇಳುತ್ತಾರೆ.
"ಎಮ್ ಸಿನಿಮಾಸ್ " ನಿಮಿ೯ಸಿದ ಈ ಸಿನಿಮಾಕ್ಕೆ ಖಚು೯ ಮಾಡಿದ ವೆಚ್ಚ ಮೂರು ಕೋಟಿ. ಮಣಿರತ್ನಂ ನೊಂದಿಗೆ ಮಾಡಿದ ಕೆಲಸದ ಅನುಭವದಿಂದಾಗಿ ಷೂಟಿಂಗ್ ನಲ್ಲಿ ಹೆಚ್ಚು ಟೆಕ್ನಿಕ್ ಬಳಸಿಕೊಂಡು ಕಡಿಮೆ ವೆಚ್ಚದಲ್ಲಿಯೇ ಉತ್ತಮ ಸಿನಿಮಾ ನಿಮಿ೯ಸಿದೆವು. ಹಾಗಾಗಿ ಈ ಸಿನಿಮಾದಲ್ಲಿ 68 ಪಾತ್ರಗಳನ್ನು ದುಡಿಸಿಕೊಂಡು ಈ ಸಿನಿಮಾವನ್ನು ೫೮ ದಿನಗಳಲ್ಲಿಯೇ ಚಿತ್ರಿಕರಣ ಮುಗಿಸಿದೆವು. ನಮ್ಮ ಟೀಮ್ ನಲ್ಲಿ ಮೊದಲಬಾರಿ ನಾಯಕ-ನಾಯಕಿ ನವದೀಪ್ ಹಾಗೂ ಮಧುಮಿತಾ ರೊಂದಿಗೆ ಅನುಭವಿ ನಟರಾದ ಪ್ರಕಾಶ್ ರಾಜ್ ಹಾಗೂ ಆಶೀಷ್ ವಿಧ್ಯಾಥಿ೯ ಯವರ ಅಭಿನಯವೇ ಸಿನಿಮಾಕ್ಕೆ ಪ್ಲಸ್ ಪಾಯಿಂಟ್. ಅದರಲ್ಲೂ ಪ್ರಕಾಶ್ ರಾಜ್ ರವರ ಕಾಲ್ ಷೀಟ್ ಸಿಕ್ಕಿದ್ದು ನನ್ನ ಹೆಗ್ಗಳಿಕೆ. ಅಲ್ಲದೇ ನನ್ನ ಸ್ನೇಹಿತೠ ಕೂಡ. ಅವರಿಂದು ಭಾರತ ಚಿತ್ರರಂಗದ ಮೇರು ನಟ. ಹಾಗಾಗಿ ಈ ಸಿನಿಮಾ ಕನಾ೯ಟಕವಲ್ಲದೇ ತೆಲುಗು ಅವತರಣಿಕೆ ಹೈದರಬಾದ್ ನಲ್ಲಿ ಸಹ ಹಿಟ್ ಆಗುವ ಭರವಸೆಯನ್ನು, ಮುರುಳಿ ನೀಡುತ್ತಾರೆ.
ತಮ್ಮ ಸಿನಿಮಾದ ಪ್ರಮೋಷನ್ ಗೆ ನಿಮಾ೯ಪಕರ ಜೊತೆ ಸಹಕರಿಸುತ್ತಲೇ, ಇನ್ನೆರಡು ಸ್ಕ್ರಿಪ್ಟ್ ರಚಿಸಿಕೊಂಡು ನಿಮಾ೯ಪಕರ ತಲಾಷ್ ಮಾಡುತ್ತಿರುವ ಮುರುಳಿ ಹೇಳುತ್ತಿರುವುದೇನೆಂದರೆ " ನಾನು ರೆಡಿ ಮಾಡಿದ ಸ್ಕ್ರಿಪ್ಟ್ ಗಳಲ್ಲಿ ಒಂದು "ಸುಬ್ರಮಣ್ಯಪುರಂ"ದಂತಹೆ ಹಳ್ಳಿ ಬೇಸಡ್ ಸ್ಟೋರಿ, ಇನ್ನೊಂದು ಸಿಟಿ ಲವ್ ಸ್ಟೋರಿ. ಇವುಗಳಿಗೆ ನಿಮಾ೯ಪಕರು ಸಿಕ್ಕಿದ ತಕ್ಷಣ ಇನ್ನೊಂದು ಇನ್ನಿಂಗ್ಸ್ ಪ್ರಾರಂಭಿಸುವೆ. ಎನ್ನುತ್ತ "ತಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ" ಎನ್ನುತ್ತ ಗೆಲುವಿನ ನಗೆ ಬೀರಲು ಸಜ್ಜಾಗುತ್ತಿದ್ದಾರೆ.

