ಸೌಂದರ್ಯ ಜಗದೀಶ್ರವರ ಸಿನಿಮಾ ಕ್ರೇಜ್
published on Aug.22, 2010, under Interview, News
ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಹೋದರು ನಿಮಗೆ ಸೌಂದರ್ಯ ಕನ್ಸ್ಟ್ರಕ್ಷನ್ ಹೆಸರು ಕಾಣಬಹುದು. ಅವರ ಕೆಲಸದಲ್ಲಿನ ವೃತ್ತಿಪರತೆ ಅವರನ್ನು ಆ ಮಟ್ಟಕ್ಕೆ ಕೊಂಡೊಯ್ದಿದೆ. ಈಗ ಸೌಂದರ್ಯ ಜಗದೀಶ್ ಹೆಸರು ಮಾಡುತ್ತಿರುವುದು ಚಿತ್ರರಂಗದಲ್ಲಿ. ಮೊದಲು ಮಸ್ತ ಮಜಾ ಮಾಡಿ ಸಿನಿಮಾದಿಂದಲೇ ಗೆಲುವಿನ ರಥವನ್ನೇರಿ, ಈಗ ತಮ್ಮ ಮಗ ಮಾ.ಸ್ನೇಹಿತ್ ನನ್ನೆ ಬೆಳ್ಳಿತೆರೆಯಲ್ಲಿ ಪರಿಚಯಿಸುತ್ತಿರುವುದು ನಮಗೆ ತಿಳಿದಿದೆ. ಆದರೆ ಸೌಂದರ್ಯ ಪಿಲಂಸ್ ನ ಮುಂದಿನ ವಿಷನ್ ಎನೆಂದು ಕೇಳಿದರೆ ಜಗದೀಶ್ ಹೇಳುವುದು ಹೀಗೆ,,
"ನನಗೆ ಸಿನಿಮಾ ಒಂದು ಪ್ಯಾಷನ್. ನನ್ನ ವೃತ್ತಿ ಬೇರೆಯಾದರೂ, ಮೊದಲಿನಿಂದ ಚಿತ್ರ ಣಕ್ಕೆ ಪೈನಾನ್ಸ್ ಮಾಡುತ್ತಿದ್ದೆ. ಕನ್ನಡದಲ್ಲಿಯೂ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಇಲ್ಲಿ ಬಂದಿದ್ದೇನೆ.
ಅಪ್ಪು-ಪಪ್ಪು ನಮ್ಮ ಹೊಂ ಬ್ಯಾನರಿನ ಎರಡನೇಯ ಚಿತ್ರ. ಪ್ರತಿವರ್ಷ ಎರಡು ಸಿನಿಮಾ ಮಾಡುವ ಕನಸು ಹೊತ್ತು ಬಂದರೂ, ಒಂದನ್ನಂತು ಮಾಡುತ್ತೇನೆ. ಮುಂದು ಅನೇಕ ಕನ್ನಡ ಸಿನಿಮಾಗಳನ್ನು ತರು ತ್ತೇನೆ, ಎನ್ನುತ್ತಾರೆ ಜಗದೀಶ್.
ಮತ್ತೆ ಮಾತನ್ನು ಮುಂದುವರೆಸುತ್ತ, ನಾನೊಬ್ಬ ಚಿತ್ರ ನಿರ್ಮಾಣದ ಮುನ್ನ ಒಬ್ಬ ನಿದೇ ಶಕ ಮತ್ತು ನಟನ ಬಗ್ಗೆಯೂ ಯೋಚಿಸಿ ಅವರ ಕ್ರಿಯೇಟಿವಿಟಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಉತ್ತಮ ಚಿತ್ರಕ್ಕಾಗಿ ಬಜೆಟ್ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಅಪ್ಪು-ಪಪ್ಪು ವನ್ನು ಮಕ್ಕಳ ಚಿತ್ರ ಎಂದು ಪರಿಗಣಿಸದೇ ದೊಡ್ಡಬಜೆಟ್ನ ಸಿನಿಮಾವಿದು. ಮುಂದೆ ಈ ಸಿನಿಮಾವನ್ನು ತಮಿಳು-ತೆಲುಗಿಗೆ ರಿಮೇಕ್ ಮಾಡಿ ಬಿಡುಗಡೆ ಮಾಡುವ ಉದ್ದೇಶ, ತಮ್ಮದೆಂದು ಅವರ ಸಿನಿಮಾ ಪ್ರೀತಿಯನ್ನು ತೋರಿಸುತ್ತಾರೆ.
ಜಗದೀಶ್ರವರು ಈಗ ಪೂರ್ಣವಾಗಿ ಅಪ್ಪು-ಪಪ್ಪು ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು,ಮೈಸೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ಬಳ್ಳಾರಿಯಂತಹ ಜಿಲ್ಲಾಪ್ರದೇಶಗಳಲ್ಲಿ ಶಾಲಾಮಕ್ಕಳಿಗೆ ಅಪ್ಪು-ಪಪ್ಪು ಜಾಹಿರಾತು ಒಳಗೊಂಡ ಲಕ್ಷಗಟ್ಟಲೇ ನೋಟ್ಬುಕ್ ಹಂಚಿದ್ದಾರೆ. ಅಲ್ಲದೇ ಇತರ ಮಾದ್ಯಮದ ಪ್ರಚಾರಗಳೊಂದಿಗೆ ರಾಜ್ಯದ ಹಲವು ಭಾಗಗಳಲ್ಲಿ ಬಸ್ಬ್ಯಾನರ್ ಮೂಲಕವು ಅಪ್ಪು-ಪಪ್ಪು ಸಿನಿಮಾವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.

