Chitra Vaarte

ಹಳ್ಳಿಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದೇ ನನಗೆ ಹೆಚ್ಚು ಇಷ್ಟ – ಭಾಮಾ

published on Dec.08, 2011, under Interview

Shyloo-Bhama-Ganeshಡರ್ಟಿ ಪಿಕ್ಚರ್ ನಿಂದ ಮಲೆಯಾಳಿ ಚೆಲುವೆ ವಿದ್ಯಾ ಬಾಲನ್ ಕೌಟುಂಬಿಕ ಪ್ರೇಕ್ಷಕರಿಂದ ಉಗಿಸಿ ಕೊಳ್ಳುತ್ತಿದ್ದರೆ, ಅಲ್ಲಿಂದಲೇ ಕನ್ನಡಕ್ಕೆ ಬಂದ ‘ಶೈಲೂ’ಸಿನಿಮಾದ ಚೆಲುವೆ ಭಾಮಾ ಮಾತಿನಿಂದಲೇ ಬೇಷ್ ಎನಿಸಿಕೊಳ್ಳುತ್ತಿದ್ದಾಳೆ. ಕನ್ನಡಕ್ಕೆ ಮೊದಲ ಸಲ ಸಿನಿಮಾ ಮೂಲಕ ಪರಿಚಯವಾಗಿ ಈಗ ಶೈಲೂವಿನ ಪಾತ್ರದ ಮೂಲಕ ಗಟ್ಟಿನೆಲೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಹೆಚ್ಚು ಹೆಚ್ಚು ಹಳ್ಳಿ ಗೆಟಪ್ನಲ್ಲಿಯೇ ಸಿನಿಮಾದಲ್ಲಿ  ಕಾಣಿಸಿಕೊಂಡರು, ತನ್ನ ಪ್ರತಿಭೆಯಿಂದಲೆ ಮೇಲೆ ಬರುತ್ತೇನೆ ಎನ್ನುವ ವಿಶ್ವಾಸ ಈ ಹುಡುಗಿಯದು. ಮೊನ್ನೆ ಶೈಲೂ ಪ್ರಮೋಷನ್ಗೆ ಬಂದಾಗ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ…

ಪ್ರಶ್ನೆ: ನೀವು ವಿದ್ಯಾಬಾಲನ್ ಡರ್ಟಿ ಸಿನಿಮಾದಲ್ಲಿ ನಟಿಸಿದ್ದನ್ನು ಸಮರ್ಥಿಸಿಕೊಳ್ಳುತ್ತೀರಾ?
ಬಾಮಾ: ನೋ…ನೆವರ್, ನನಗೆ ಹಳ್ಳಿಹುಡುಗಿಯ ಪಾತ್ರದಲ್ಲಿ ನಟಿಸುವುದೇ ಇಷ್ಟ. ಹಳ್ಳಿ ಹುಡುಗಿಯರು ತೊಡುವ ಬಟ್ಟೆ ಇನ್ನೂ ಹೆಚ್ಚು ಇಷ್ಟ.

 

ಪ್ರ: ಶೈಲೂ ವಿನಲ್ಲಿ ಅಭಿನಯದ ಬಗೆಗಿನ ಅನುಭವ?
ಭಾಮಾ: ಗ್ರೇಟ್ ಎಕ್ಷ್ಪೀರಿಯನ್ಸ, ನಾರಾಯಣ್ ಸರ್ನಂತಹ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ಅವರಿಂದ ಹೆಚ್ಚು ಹೆಚ್ಚು ಸಿನಿಮಾದ ಬಗ್ಗೆ ಕಲಿಯುತ್ತಿದ್ದೇನೆ.

 

ಪ್ರ: ನಾರಾಯಣ್ ಜೊತೆ ಕೆಲಸ ಮಾಡುವಾಗ ಕಷ್ಟ ಎನಿಸುತ್ತ?
ಭಾಮಾ: ನನಗೆ ಎಂದೂ ಅಂತಹ ಭಾವನೆ ಬಂದಿರಲಿಲ್ಲ. ಶೈಲೂವಿನ ಷೂಟಿಂಗ್ನ ಹೆಚ್ಚು ಭಾಗ ಮುನ್ನೂರಿನಂತಹ ಬೆಟ್ಟ ಗುಡ್ಡವಿರುವ ಪ್ರದೇಶದಲ್ಲಿ ತುಂಬ ಕಷ್ಟಪಟ್ಟು ಷೂಟಿಂಗ್ ಮಾಡಿದ್ದೇವೆ. ಅವರೆಂದು ನನ್ನ ಮನಸ್ಸಿಗೆ  ಬೇಸರವಾಗದ ರೀತಿಯಲ್ಲಿ ನನ್ನಿಂದ ಅಭಿನಯವನ್ನು ಹೊರ ತೆಗೆದಿದ್ದಾರೆ. ಅವರ ಜೋತೆ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಹೆಸರು ಅಪ್ಪಯ್ಯ, ಇಲ್ಲಿಯೂ ಹಳ್ಳಿ ಹುಡುಗಿಯ ಪಾತ್ರವೆ(ನಗುತ್ತಾ).

 

Shyloo-Bhama

ಪ್ರ: ಮಳೆಯಾಳದಲ್ಲಿ ಎಷ್ಟು ಸಿನಿಮಾದಲ್ಲಿ ನಟಿಸಿದ್ದೀರಿ?
ಭಾಮಾ: ಎಲ್ಲ ಭಾಷೆಯಲ್ಲಿ ಸೇರಿ ಒಟ್ಟು 18 ಇರಬೇಕು. ಮಳೆಯಾಳಿ ಸಿನಿಮಾಗಳೆ ಹೆಚ್ಚು.

 

ಪ್ರ: ಕನ್ನಡ ಸಿನಿಮಾದಲ್ಲಿ ಹೆಚ್ಚು ಸಂಭಾವನೆ ನಿಮಗೆ ಸಿಗುತ್ತಿದ್ದೀಯಾ? ತೆಲುಗು-ತಮಿಳು ಚಿತ್ರದತ್ತ ನಿಮ್ಮ ಚಿತ್ತ…?
ಭಾಮಾ:   ತೆಲುಗು ತಮಿಳಿನಲ್ಲಿ ಹೆಚ್ಚು ಸಂಭಾವನೆ ಸಿಗುತ್ತದೆ ನಿಜ, ಆದರೆ ಕನ್ನಡ, ಮಳೆಯಾಳಿಯಲ್ಲಿಯು ಕಡಿಮೆಯೇನಿಲ್ಲ. ಶೈಲೂ ಸಿನಿಮಾವನ್ನು ನಾನು ಹೆಚ್ಚು  ಕಾತುರತೆಯಿಂದ ಕಾಯುತ್ತಿದ್ದೇನೆ. ಈ ಸಿನಿಮಾ ನನಗೆ ವಿಶೇಷ ಬ್ರೇಕ್ ನೀಡುತ್ತದೆ ಎನ್ನುವ  ವಿಶ್ವಾಸವಿದೆ.

 

ಪ್ರ: ನೀವು ಸಿನಿಮಾದಿಂದ ಸಿನಿಮಾಕ್ಕೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ?
ಭಾಮಾ: ಸಿದ್ಧತೆಗಳೇನಿಲ್ಲ, ಆದರೆ ಆಬ್ಸರ್ವ ಮಾಡುತ್ತೇನೆ. ಸಿನಿಮಾ ಮಾತ್ರವಲ್ಲ ದಿನನಿತ್ಯದ ಸಮಾಜವನ್ನು ಗಮನಿಸುತ್ತೇನೆ. ಚಿತ್ರರಂಗದಲ್ಲಿ ನಾನು ಹೆಚ್ಚು ಕಲಿಯುತ್ತಿರುವುದು ಹಾಗೂ ಗಮನಿಸುತ್ತಿರುವುದು ಕೇರಳ ಚಿತ್ರರಂಗದ ಜಗದಿ ಶ್ರೀಕುಮಾರ್ ಅಭಿನಯವನ್ನ. ಅವರ ಸಿನಿಮಾಗಳನ್ನು ಹೆಚ್ಚೆಚ್ಚು ನೋಡುತ್ತೇನೆ.

 

ಭಾಮಾ ಅಂದಿನ ಪತ್ರಕಾ ಘೋಷ್ಠಿಗೆ ಲೇಟಾಗಿ ಬಂದರೂ, ಷಮಿಸಿ(ಕ್ಷಮಿಸಿ) ಎಂದು ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತಾಳೆ. ಒಂದುವರೆ ವರ್ಷದ ಚಿತ್ರರಂಗದ ಅನುಭವ ಅವಳಿಗೆ ಸಾಕಷ್ಟು ಕನ್ನಡ ಕಲಿಸಿದೆ. ಏನೇ ಕನ್ನಡದಲ್ಲಿ ಮಾತನಾಡಿದನ್ನು ಅರ್ಥಮಾಡಿಕೊಳ್ಳುವ ಭಾಮಾ, ಶೈಲೂ ಅವಳಿಗೆ ಬ್ರೇಕ್ ನೀಡುವುದೆ ಎಂಬುದನ್ನು ಇಂದಿನಿಂದ ಪ್ರೇಕ್ಷಕ ನಿರ್ಧರಿಸುತ್ತಾನೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...