Chitra Vaarte

ಅಜ್ಜನ ಗೆಟಪ್ ನಲ್ಲಿ 9 ರ ಪೋರ

published on May.12, 2010, under News

ekameva2 ಇತ್ತೀಚೆಗೆ "ಪಾ" ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ 11ರ ಹರೆಯದ ಹುಡುಗನ ಪಾತ್ರದಲ್ಲಿ ಮಿಂಚಿದ್ದು ಹಳೆಯ ಮಾತು. ಈಗ ಇಲ್ಲೋಬ್ಬ 9 ರ ಪೋರಾ 75 ವಯಸ್ಸಿನ ಮುದುಕನ ಪಾತ್ರ ಮಾಡಿದ್ದಾನೆ. ಅಷ್ಟೇ ಅಲ್ಲದೇ ಈ ಚಿರಂಜೀವಿ ಬಾಲಕನಾಗಿಯಲ್ಲದೇ, 25 ವಯಸ್ಸಿನ ಯುವಕ, 50 ರ ಮಧ್ಯವಯಸ್ಕನ ಗೆಟಪ್ ನಿಂದ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಲು ಮುಂದಾಗಿದ್ದಾನೆ.

 

ekameva ಪ್ರವೀಣ ಕೊಂಚಾಡಿ ನಿರ್ದೇಶಿಸಿದ ಈ ಸಿನಿಮಾ ಈಗ ಗಿನ್ನೀಸ್ ದಾಖಲೆಗೆ ಸೇರ್ಪಡೆಯಾಗುವ ಹಂತದಲ್ಲಿದೆ. ಈ ಸಿನಿಮಾದಲ್ಲಿ ಮಾ.ಚಿರಂಜೀವಿಯಬ್ಬನೆ  ಪಾತ್ರಧಾರಿ. ಬಾಲಿವುಡ್ ತಾರೆ ಹೇಮಾ ಮಾಲಿನಿ ಪರ್ಸನಲ್ ಮೇಕಪ್ ಮನ್ ಸಮಿಕ್ ಜೂಕರ್ ಬಂದು ಈ ಬಾಲಕನನ್ನು ವಿವಿಧ ಗೆಟಪ್ ಬದಲಿಸಿ ಹೋಗಿದ್ದಾರೆ. ದಿನಕ್ಕೆ ಮೂರು-ನಾಲ್ಕು ಗಂಟೆಗಳ ಕಾಲ ಮೇಕಪ್ ಮಾಡಿಸಿಕೊಳ್ಳುತ್ತಿದ್ದ ಚಿರಂಜೀವಿ ಯನ್ನು ಮುದುಕನನ್ನಾಗಿ ಮಾಡಲು ಖರ್ಚು ಮಾಡಿದ್ದು ಬರೋಬ್ಬರಿ ಏಳು ಲಕ್ಷ. ಪ್ರವೀಣಕುಮಾರ್ ಕೊಂಚಾಡಿಯವರೇ ಸ್ವತಃ ನಿರ್ಮಿಸಿದ ಈ ಸಿನಿಮಾದ ಒಂದು ಹಾಡು ಚಿತ್ರಿಸಲು ಎಂಟು ಲಕ್ಷ ಖರ್ಚು ಮಾಡಿದ್ದಾರೆ.

 

ಈಗಾಗಲೇ "ಎಕಮೇವ" ಬಿಡುಗಡೆಯ ಹಂತಕ್ಕೆ ಬಂದಿದ್ದು, ಸ್ಯಾಟಿಲೈಟ ರೈಟ್ಸ್ ಕೂಡ ಉತ್ತಮ ಬೇಡಿಕೆಯಿರುವುದು ಪ್ರವೀಣ್ ರವರು ತಿಳಿಸುತ್ತಾರೆ. ಇವರು  ನಿರ್ಮಿಸಿದ ಸಿನಿಮಾ "ಒಂದೇ ಒಂದು ಸಾರಿ" ಕೂಡ ಬಿಡುಗಡೆಗೆ ಕಾಯುತ್ತಿದೆ. ಒಂದೇ ವೇಳೆ ಎರಡು ಸಿನಿಮಾ ನಿರ್ಮಿಸುತ್ತಿರುವ ಪ್ರವೀಣ ಮುಂದೆ ಪುನೀತ್ ಕಾಲ್ ಷೀಟ್ ಪಡೆಯಲು ಕಥೆ ರೆಡಿಮಾಡಿಕೊಂಡಿದ್ದು ಅವರ ಇನ್ನೊಂದು  ವಿಶೇಷ

1 Comment for this entry

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...