Chitra Vaarte

"ಅದ್ದೂರಿ"ಯ ಮುಹೂರ್ತ

published on Sep.03, 2010, under News

Aaduri (145) ಅರ್ಜುನ್ ಗೆ ಅಂಬಾರಿ ಮೊದಲ ಚಿತ್ರ. ಆ ಚಿತ್ರದ ಮೂಲಕವೇ ಯುವ ನಿರ್ದೆಶಕನಾಗಿ ನಿರೀಕ್ಷೆ ಹುಟ್ಟಿಸಿದ. ಪುನೀತ್ ಕೂಡ ಈ ಸಿನಿಮಾ ನೋಡಿ ತನಗೂ ಒಳ್ಳೆ ಕಥೆ ಬರೆಯುವಂತೆ ಕೇಳಿಕೊಂಡಿದ್ದು ಹಳೆಸುದ್ದಿ. ಆದರೆ
ಅರ್ಜುನ್  ಇಂದು ರಾಧಿಕಾ ಪಂಡಿತ್ ಮತ್ತು ಧ್ರುವ ಸರ್ಜ  ಜೋಡಿಯ "ಅದ್ದೂರಿ"ಯಾಗಿ ಮುಹೂರ್ತ ಮಾಡಿದ್ದಾರೆ.

 

ಈಗಾಗಲೇ ಲಿಪ್ಟ್ ಕೊಡ್ಲಾ ಸಿನಿಮಾ ನಿರ್ಮಿಸಿ  ಯಶಸ್ಸನ್ನು ಕಂಡ ಶಂಕರ್ ರೆಡ್ಡಿ ಅದ್ದೂರಿ(ಗೆ) ಯಾಗಿ ಹಣ ಹೂಡುತ್ತಿದ್ದಾರೆ. ಆ ಅದ್ದೂರಿತನ ತೋರಿಸಲು ಮೊನ್ನೆ ಮುಹೂರ್ತದಲ್ಲಿ ಸ್ಟಾರ ಗಳ ಮೆರವಣಿಗೆಯೆ ಸಾಕ್ಷಿಯಾಗಿತ್ತು. ಕಂಠೀರವ ಸ್ಟೂಡಿಯೋದಲ್ಲಿ ಅದ್ದೂರಿಗೆ ಹಾರೈಸಲು ಬಂದವರಲ್ಲಿ ಪ್ರಮುಖ ಆಕರ್ಷಣೆ ಅರ್ಜುನ್ ಸರ್ಜ.  ವಯಸ್ಸು ಐವತ್ತರ ಗಡಿ ದಾಟುತ್ತಿದ್ದರು ಯುವಕರನ್ನು ನಾಚಿಸುವ ಅರ್ಜುನ್ , ತನ್ನ ಅಣ್ಣನ ಮಗ ಧ್ರುವಾ  ನಿಜವಾಗಲೂ ಕಷ್ಟಪಡುತ್ತಾನೆ. ಮೊದಲು ನಟನಾಗುವ ಇಚ್ಚೆಯನ್ನು ವ್ಯಕ್ತಪಡಿಸಿದಾಗ ಸಿಧ್ದತೆ ನಡೆಸು ಎಂದಾಗ ಸತತ ಒಂದುವರೆ ವರ್ಷಗಳ ಕಾಲ ಅಭಿನಯ, ಡ್ಯಾನ್ಸ್, ಪೈಟಿಂಗ್, ಕತ್ತಿವರಸೆ ಮುಂತಾದವುಗಳ ಸಿದ್ದತೆ ನಡೆಸಿ ಒಂದು ಡಿ.ವಿ.ಡಿ. ತಂದು ಕೊಟ್ಟ. ಧ್ರುವಾ ನಿಜಕ್ಕೂ ದೆಡಿಕೇಟ್ ಮಾಡುವುದರಲ್ಲಿ ನನಗಿಂತ ಒಂದು ತೂಕ ಮೇಲೆ, ಎಂದು ಹರಸಿದರು.

 

ನಿರ್ದೆಶಕ ಅರ್ಜುನ್  ಅದ್ದೂರಿಯಲ್ಲಿ ಪೂರ್ತಿ ಅರ್ಜುನ್ ಮಯ ಮಾಡಿದ್ದಾರೆ. ಕಾರಣವಿಷ್ಟೆ ಸ್ವತಃ ತಮ್ಮ ಹೆಸರನ್ನೆ ಚಿತ್ರದ ನಾಯಕನ ಪಾತ್ರಕ್ಕೂ ಇಟ್ಟಿದ್ದಾರೆ. ಅಲ್ಲದೇ ಸಿನಿಮಾಕ್ಕೆ ಬಂದು ಹಾರೈಸಿದವರೂ ಅರ್ಜುನ್ ಸರ್ಜ. ಅದ್ದೂರಿಯ ಉಪನಮ ಅಚ್ಚು-ರಚ್ಚು ಲವ ಸ್ಫೋ ರಿ. ಅಚ್ಚು ಅಂದರೆ ಅರ್ಜುನ್ , ರಚ್ಚು ಅಂದರೆ ರಚನಾ.  ಅರ್ಜುನ್ s ಸಿನಿಮಾವೆಂದರೆ ಲವ್ ಅಂತು ಅದ್ದೂರಿಯಾಗಿಯೇ ಇರುತ್ತದೆ ಎನ್ನುವುದಕ್ಕೆ ಅಂಬಾರಿ ನಿರೂಪಿಸಿದೆ. ಹಾಗೇ ಅದ್ದೂರಿಯಲ್ಲು ಲವ್ವು ಪರ್ಪೆಕ್ಫ. ಇಲ್ಲಿ ಕಥೆ ರಿವರ್ಸ ಆರ್ಡರ್ನಲ್ಲಿ ಹೋಗುತ್ತದೆ. ಸಿನಿಮಾ ಕಥೆ ಕಲ್ಪನೆಯಾದರೂ ಪಾತ್ರಗಳು ನೈಜವಾದದ್ದು. ಅಂದರೆ ಗೆಳೆಯ ರಘು ಮತ್ತು ಪೂಜಾ ಪಾತ್ರಗಳನ್ನೆ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ. ಅಲ್ಲದೇ ಈ ಸಿನಿಮಾಕ್ಕಾಗಿ ತಿಂಗಳುಗಟ್ಟಲೇ ರಿಹರ್ಸಲ್ ಮಾಡಿದ್ದು ಸರಾಗವಾಗಿ ಊಟಿ,ಕುಶಾಲ್  ನಗರ ಮುಂತಾದ ಕಡೆ ಶೂಟಿಂಗ್ ನಡೆಯುತ್ತದೆ, ಎಂದರು.

 

ಇಲ್ಲಿ ನಾನು ಹೈ-ಪೈ ಹುಡುಗಿ. ತುಂಬಾ ರಿಚ್ ಡ್ರೆಸ್ ನನ್ನದು. ಈ ಸಿನಿಮಾಕ್ಕಾಗಿ ಜಾಸ್ತಿ ರಿಹರ್ಸಲ್ ಮಾಡಿದ್ದೇನೆ. ಇದರಿಂದ ಇನ್ನಷ್ಟು ಅಭಿನಯ ಪಕ್ವತೆ ಕಾಣಲು ಸಾಧ್ಯ. ಮೊದಲಿನಿಂದಲೂ ನಟನೆಗೆ ಒತ್ತು ಕೊಡುವ ನಾನು ನಿರ್ದೆಶಕರು ಬಯಸಿದರೆ ಎಷ್ಟು ಭಾರಿ ರಿಹರ್ಸಲ್ ಮಾಡಲು ಸಿದ್ದ ಎನ್ನುತ್ತಾರೆ, ರಾಧಿಕಾ ಪಂಡಿತ. ದ್ರುವಾ ಸರ್ಜ   ಕೂಡ ಕತ್ತಿವರಸೆ, ಕುದುರೆ  ಸವಾರಿಯಂತಹ ಸಾಹಸಗಳನ್ನು ರೆಡಿಯಿದ್ದು, ಪ್ರೇಮ್ ತರಭೇತಿ ಸಂಸ್ಥೆಯಲ್ಲಿ ಪಳಗಿದವನು. ಒಳ್ಳೆ ಅವಕಾಶ ಬಂದಿರುವುದರಿಂದ ತುಂಬಾ ದೆಡಿಕೇಟ್ ವರ್ಕ ನೀಡುತ್ತೇನೆ ಎಂದು ಭರವಸೆ ನೀಡುತ್ತಾನೆ. ಒಟ್ಟಿನಲ್ಲಿ ಅದ್ದೂರಿಯಾಗಿ ಸಿನಿಮಾ ತರಲು ಮೂರುವರೆ ಕೋಟಿ ಹೂಡುವ ಶಂಕರ್ ರೆಡ್ಡಿಯವರ ಎರಡನೇ ಸಿನಿಮಾ ಮುಹೂರ್ತದಿಂದಲೇ ನಿರೀಕ್ಷೆ ಹುಟ್ಟಿಸಿರುವುದು ಸುಳ್ಳಲ್ಲ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...