Chitra Vaarte

ಇನ್ನೇನಿದ್ದರೂ ಹರ್ಷನ ಸ್ಟೋರಿ

published on Jul.17, 2010, under News

krishnan_lovestory3 ತಿಂಗಳ ಕಳೆಯುವುದರೊಳಗಾಗಿ ಹತ್ತು-ಹದಿನೈದು ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಥಿಯೇಟರ್ ಚಲಾವಣೆಯಲ್ಲಿರುವುದು ಸದ್ಯಕ್ಕೆ "ಕೃಷ್ಣನ್ ಲವ್ ಸ್ಟೋರಿ. ಸಖತ್ತಾಗಿ ಇಪ್ಪತೈದು ದಿನಗಳನ್ನು ಪೂರೈಸಿದೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಇದು ನನ್ನ ಪಕ್ಕದ ಮನೆಯವನ ಲವ್ ಸ್ಟೋರಿ ಇದ್ದಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಾರಣವಿಷ್ಟೆ ನಿದೇ೯ಶಕ ಶಶಾಂಕ್ ಮೊದಲಿನಿಂದಲೂ ಇದು ಸತ್ಯಘಟನೆಯ ಪ್ರೇಮಗಾಥೆ. ಸ್ವಲ್ಪ ಸಿನಿಮೀಯವಾಗಿದೆ. ತಡೀರಿ ಸಿನಿಮಾ ತೆರೆಗೆ ಬರಲಿ, ಈ ಕಥೆಯ ಅನುಭವಿ ಹುಡುಗನನ್ನು ನಿಮ್ಮ ಮುಂದೆ ತೋರಿಸುತ್ತೇನೆ, ಎಂದು ಮಾತು ಕೊಟ್ಟಿದ್ದರು.

 

ಆ ಮಾತನ್ನು ಈ ವಾರ ಖರೇ ಮಾಡಿದ್ದಾರೆ. ಒಂದು ಕಡೆ ಗೆಲುವಿನ ಖದರ್, ಇನ್ನೊಂದೆಡೆ ಆಡಿದಂತೆ ತೋರಿಸುತ್ತಿರುವ ಖುಷಿಯಲ್ಲಿ ಈ ಕಥೆಯ ನಿಜವಾದ ಪ್ರೇಮಿಯನ್ನು ಮೀಡಿಯಾ ಮುಂದೆ ತೋರಿಸಿದರು. ಅವನ್ಯಾರು ಗೊತ್ತೆ ಹರ್ಷ. ಇವನು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾನೆ. ಮೊಗ್ಗಿನ ಮನಸ್ಸು  ನಿಂದಲೂ ಶಶಾಂಕನ ಸಾಥಿ. ಅದ್ಯಾವೋ ಗಳಿಗೆಯಲ್ಲಿ ಇವರಿಬ್ಬರು ಹೊರನಾಡಿಗೆ ಪ್ರವಾಸಕ್ಕೆ ಹೋದರೋ…. ಅಲ್ಲಿಯೇ ಈ ಹರ್ಷ ತನ್ನ ಕಥೆಯನ್ನು ಪಿಸುಗುಟ್ಟಿದ್ದಾನೆ. ಅವನ ಲವ್ ಗಲ್೯ ಹೀಗೆ ಓಡಿಹೋದಾಗಲೇ ಎಕ್ಸಿಡೆಂಟ್ ಆಗಿದ್ದು, ಇವನ ಲವರ್ ಬಾಯ್ ಪ್ರೆಂಡ್ ಸತ್ತಿದ್ದು, ನಂತರ ಅವಳು ಬೇರೊಬ್ಬನನ್ನು ಮದುವೆಯಾಗಿ ಹೊರರಾಜ್ಯದಲ್ಲಿ ಸೆಟ್ಲ್ ಆಗಿದ್ದು, ಹರ್ಷನ ಪ್ರೀತಿ ಮುಂದುವರೆದಿದ್ದು… ಎಲ್ಲವನ್ನು ಹೇಳಿಬಿಟ್ಟಿದ್ದಾನೆ. ಕೇಳಿಸಿಯೂ, ಕೇಳಿಸದ ರೀತಿಯಲ್ಲೂ ಕುಳಿತು ನಂತರ ಗೆಳೆಯನ ಪ್ರೀತಿಗೆ ಕೃಷ್ಣನ ಲವ್ ಸ್ಟೋರಿ ಮಾಡಿ ಗೆದ್ದು  ಈಗ ಭಾಗ 2 ಮಾಡಲು ಶಶಾಂಕ್ ಆಂಡ್ ಟೀಮ್ ಸಿದ್ದತೆ ನಡೆಸಿದ್ದಾರೆ.

 

ಕೆ.ಉದಯ್ ಮೆಹ್ತಾ ನಿರ್ಮಾಣದಲ್ಲಿ ಮೂಡಿದ ಈ ಹರ್ಷನ ಲವ್……ಅಲ್ಲಲ್ಲ…ಕೃಷ್ಣನ ಲವ್ ಸ್ಟೊರಿಯ ಭಾಗ 2ರಲ್ಲೂ ಅಜಯ್ ರಾವ್ ಅಭಿನಯಿಸುತ್ತಿದ್ದಾನೆ. ಕಥೆಯ ಮುಂದುವರೆಕೆಗೆ ಹರ್ಷನ ವರ್ತಮಾನದ ಕಥೆಯಿದೆ, ಇನ್ನೇರಡು  ಭಾಗ ಬಂದರು ಪ್ರೇಕ್ಷಕ ನೋಡಲು ತಯಾರಿದ್ದಾನೆ ಈ ಟೀಮಿಗೆ. ಹಾಗಾಗಿ ಸದ್ಯದಲ್ಲಿಯೇ ಭಾಗ-2  ನಿಮಾ೯ಣವಾಗುವದೊಂತು ಖಾತರಿಯಾಗಿದೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...