Chitra Vaarte

"ಐ ಆಮ್ ಸಾರಿ, ಕಿಲ್ ಪೈರಸಿ’ – ಚಿತ್ರಮಂದಿರಕ್ಕೆ ಬನ್ನಿ ಪ್ರೀತ್ಸೋಣ

published on Mar.14, 2011, under News, Photo Gallery

DSC00009 ಯಾವುದೇ ಪ್ರಾಜೆಕ್ಟ್ ಇರಲಿ, ಪ್ರೋಡಕ್ಟ್ ಆಗಲಿ, ಸಕ್ಸಸ್ ಕಾಣಬೇಕಾದರೆ ಉತ್ತಮ ಮಾರ್ಕರ್ಟಿಂಗ್ ನಿರ್ವಹಣೆ ಇರಬೇಕಾಗುತ್ತದೆ. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಇಲ್ಲ ಎಂಬ ಕೊರಗನ್ನು ಮೊನ್ನೆ ಮೊನ್ನೆ ಜಾಕಿ, ಸೂಪರ್,ಮೈಲಾರಿಯಂತಹ ಸಿನಿಮಾಗಳು ಸುಳ್ಳುಮಾಡಿವೆ. ಅಲ್ಲದೇ ಆಡಿಯೋ ಮಾರ್ಕೆ ಟ್ನಲ್ಲಿ ರವಿಚಂದ್ರನ್,ಹಂಸಲೇಖ ಜೋಡಿಯ ಪ್ರೇಮಲೋಕ ಕ್ಯಾಸೆಟ್ಗಳು 80 ಲಕ್ಷಕ್ಕೂ ಹೆಚ್ಚು ಖಾಲಿಯಾಗಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ಇತಿಹಾಸ. ಹಾಗಿದ್ದರೂ ಐ ಆಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ’ ಸಿನಿಮಾಕ್ಕೆ ಏಕೆ ಆಡಿಯೋ ಮಾರ್ಕೆಟ್  ಇಲ್ಲ?.

 

ಇದಕ್ಕೆಲ್ಲ ಎನೂ ಕಾರಣ ಗೊತ್ತೆ,  ಪೈರಸಿಯ ಹಾವಳಿ. ಹಾಗಾಗಿ ಹೊಸದಾಗಿ ಬಂದ director & producer ಆಡಿಯೋ ಬಿಕರಿಯಾಗಬೇಕೆಂದರೆ ಅದು ಸುಲಭದ ಮಾತಲ್ಲ.  ಇಂತಹ ಕಹಿ ಮಾರುಕಟ್ಟೆ ಸತ್ಯ ಕಂಡುಕೊಂಡ ನಮ್ಮಲ್ಲೋಬ್ಬರಾದ director & producer  ಈ ಪೈರಸಿಯನ್ನು ತೊಲಗಿಸಲು ಹೊಸ ತಂತ್ರವನ್ನು ಹೆಣೆದಿದ್ದಾರೆ. ಅವರ್ಯಾರು ಗೊತ್ತೆ, ‘ಐ ಆಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ’ ಎಂಬ ಬಹು ತಾರಗಣದ ಹೊಸ ಸಿನಿಮಾದ director ರವೀಂದ್ರ ಎಚ್. ಪಿ.ದಾಸ್. ಬಾಲಿವುಡ್ ಹಾಗೂ ಜಾಹಿರಾತು ಜಗತ್ತಿನಲ್ಲಿ ಪಳಗಿದ ರವೀಂದ್ರ ತಮ್ಮ ಸಿನಿಮಾವನ್ನು ತಾವೇ ನಿಮರ್ಿಸಿ, ಈಗ ರಾಜ್ಯದಾದ್ಯಂತ ಉತ್ತಮ ಮಾರುಕಟ್ಟೆ  ಮುಂದಾಗಿದ್ದಾರೆ. ತಮ್ಮ ಟೀಮ್ನ್ನು ಕಟ್ಟಿಕೊಂಡು ಎರಡು ವಾಹನಗಳ ಮೂಲಕ ರಾಜ್ಯದಾದ್ಯಂತ 15,000 ದಷ್ಟು ಸಿಡಿಗಳನ್ನು ಸಿನಿಮಾ ಪ್ರೇಕ್ಷಕರಿಗೆ ಉಚಿತವಾಗಿ ಕೊಡಲಿದ್ದಾರೆ. ಆ ಮೂಲಕ ಪ್ರೇಕ್ಷಕರನ್ನು ‘ಐ ಆಮ್ ಸಾರಿ, ಕಿಲ್ ಪೈರಸಿ, ಚಿತ್ರಮಂದಿರಕ್ಕೆ ಬನ್ನಿ ಪ್ರೀತ್ಸೋಣ’ ಎನ್ನುತ್ತಿದ್ದಾರೆ  ರವೀಂದ್ರ.

 

Picture 1 of 7

 

ಈ ಬಗ್ಗೆ ಮಾತನಾಡುತ್ತ ರವಿಂದ್ರ, ‘ಕನ್ನಡ ಚಿತ್ರರಂಗದಲ್ಲಿ ನಾನು ಕೊಳಕು ಪೈರಸಿಯಿಂದ ಬಹಳ ನೊಂದಿದ್ದೇವೆ. ನಮ್ಮ ಚಿತ್ರತಂಡ ಪೈರಸಿಯನ್ನು ವಿರೋದಿಸಿ "ಐ ಆಮ್ ಸಾರಿ’ ಮತ್ತೆ ಬನ್ನಿ ಪ್ರೀತ್ಸೋಣ’ ಸಿನಿಮಾ ಹಾಡುಗಳನ್ನು ಉಚಿತವಾಗಿ ನೀಡಲಿದ್ದೇವೆ. ಪ್ರೇಮ್, ಕರಿಷ್ಮಾತನ್ನಾ ಹಾಗೂ ಸಂಜನಾ ನಟಿಸಿ,ಕುತೂಹಲ ಹುಟ್ಟಿಸಿರುವ ಈ ಸಿನಿಮಾದ ಹಾಡುಗಳನ್ನು ನಾಡಿನ ಜನತೆ ಉಚಿತವಾಗಿ ಕೇಳಲು ”www.matthebannipreetsona.com ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಉಚಿತವಾಗಿ ಕೇಳಿ, ಎಂದು ಸಿನಿಮಾ ಪ್ರೇಕ್ಷಕರಿಗೆ ವಿನಂತಿಸಿಕೊಂಡಿದ್ದಾರೆ.  ಹಾಡುಗಳ ಧ್ವನಿಸುರುಳಿ ಸಿನಿಮಾಕ್ಕೆ  ಆಮಂತ್ರಣ ವಿದ್ದಂತೆ, ಹಾಡುಗಳು ಉತ್ತಮವಾಗಿದ್ದರೆ ಸಿನಿಮಾ ಕೂಡ ಚಿತ್ರಮಂದಿರದಲ್ಲಿ ಹೆಚ್ಚುದಿನಗಳು ಪ್ರದಶರ್ಿತವಾಗುತ್ತದೆ. ನಮ್ಮ ಸಿನಿಮಾಗಳು ಚೆನ್ನಾಗಿ ಬಂದಿರುವುದಕ್ಕೆ ಈ ಹಾಡುಗಳೇ ಸಾಕ್ಷಿ, ಎಂದು  ರವೀಂದ್ರ ಹೇಳುತ್ತಿದ್ದಾರೆ.

 

ಮತ್ತೆ ಬನ್ನಿ ಪ್ರೀತ್ಸೋಣ ಧ್ವನಿ ಸುರುಳಿಯಲ್ಲಿ ನಾಲ್ಕು ಬಿಟ್ಸ್ಗಳು ಸೇರಿದಂತೆ ಒಟ್ಟು 10 ಹಾಡುಗಳಿವೆ.  ರವೀಂದ್ರ ಎರಡು ಹಾಡುಗಳನ್ನು ರಚಿಸಿದ್ದು, ಡಾ.ನಾಗೇಂದ್ರ ಪ್ರಸಾದ್, ಅರಸು ಅಂತಾರೆ ಹಾಗೂ ಹಾಸನ್ ಆನಂದ್ ಮುಂತಾದವರು ಹಾಡಿದ್ದಾರೆ, ಕುಣಿ,ಕುಣಿ,ಕುಣಿ ಅರಸು ಅಂತಾರೆ,ಸುನಿಧಿ ಚೌಹಾಣ್ ಹಾಗೂ ರಾಜೇಶ್ ಕೃಷ್ಣನ್ ಹಾಡಿದ ಹಾಯಾಗಿ ಇರು ನೀ ಅಲ್ಲೇ’ ಎಂಬ ಹಾಡುಗಳು ಸಖತ್ ಆಗಿ ಕೇಳಿಸುತ್ತಿವೆ. ಈಗಾಗಲೇ ಈ ಸಿನಿಮಾದ ರೈಟ್ಸ್ನ್ನು ಪಂಜಾಬಿ, ಬಂಗಾಳಿ ಹಾಗೂ ಬೋಜಪುರಿ ಭಾಷೆಗಳ ರಿಮೇಕ್ ಹಕ್ಕನ್ನು ಪಡೆದಿದ್ದು, ಇದೇ ನಿಮರ್ಾಪಕರು ‘ಕೆಟ್ಟವನು’ಎಂಬ ಸಿನಿಮಾವನ್ನು ಆರಂಭಿಸಲಿದ್ದಾರೆ. ಈ ಸಿನಿಮಾದಲ್ಲಿ ಕೂಡ ಪ್ರೇಮ್ ನಟಿಸಲಿದ್ದು ಪ್ರಿಯಾ ಬೆಳ್ಳಿಯಪ್ಪ ಎಂಬುವರು ಈ ಸಿನಿಮಾದ director . ಒಟ್ಟಿನಲ್ಲಿ ಮೊದಲ ಬಾರಿಗೆ ಈ ಪೈರಸಿ ಮಾಪಿಯಾವನ್ನು ಮಟ್ಟಹಾಕಲು ಮಾಡಿದ ಪ್ರಯತ್ನದಿಂದ ಇವರ ಹಾಡುಗಳ ಮೂಲಕ ಸಿನಿಮಾ ಸಕ್ಸಸ್ ಆಗುವಲ್ಲಿ ಕನ್ನಡಿಗರೂ ಕೈಜೋಡಿಸುತ್ತಾರೆ, ಎಂಬುದು ಈ ಚಿತ್ರತಂಡದ ಆಶಯ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...