ಗಾಂಧಿಯ ಕಿರಿಕ್ ಮತ್ತು ಕ್ಷಮೆ
published on Jun.13, 2010, under News
ಗಾಂಧೀನಗರದಲ್ಲಿ ಇಂತಹ ಕಿರಿಕ್ ಆಗಾಗ ಆಗುತ್ತಲೇ ಇರುತ್ತವೆ. ಆದರೆ ಮೊನ್ನೆ ನಡೆದ ದಿನೇಶ್ ಗಾಂಧಿಯ ಅವಾಂತರ ತುಸು ಜಾಸ್ತೀಯೆ ಆಗಿದೆ. ಗಾಂಧೀ ಈ ಮೊದಲು "ಈ ಶತಮಾನದ ವೀರಮದಕರಿ" ಸಿನಿಮಾ ನಿಮಿ೯ಸಿ ಗೆಲುವು ಕಂಡಿದ್ದ. ಅದೇ ಹುಮ್ಮಸಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನೊಂದಿಗೆ ಸೇರಿ "ಹೂ" ಸಿನಿಮಾ ನಿಮಿ೯ಸಿ ಹಿಂದಿನವಾರ ತೆರೆಕಂಡಿತು. ಅದೇನೋ "ಹೂ" ಸಿನಿಮಾ ಲಯತಪ್ಪಿ ಪ್ರೇಕ್ಷಕನಿಗೆ ಬೇಸರಮೂಡಿಸಿದೆ. ಹಾಗೇ ಪತ್ರಿಕೆಗಳ ವಿಮಶೆ೯ಗಳು ಸಹ ತುಸು ಕಠಿಣವಾಗಿತ್ತು.
ಇದನ್ನೆಲ್ಲ ಗಮನಿಸಿದ ಗಾಂದಿಗೆ ಕೋಪ ನೆತ್ತಿಗೇರಿದೆ. ಕೂಡಲೇ ‘ಬೆಂಗಳೂರು ಮಿರರ್’ ಸಿನಿಮಾ ಪತ್ರಕರ್ತ ಶ್ಯಾಮ್ ಪ್ರಸಾದ ನಿಗೆ ಕರೆ ಮಾಡಿ ಬೇಕಾಬಿಟ್ಟಿ ಬೆದರಿಕೆ ಹಾಕಿಬಿಟ್ಟ. ಈ ಬೆಳವಣಿಗೆಯನ್ನು ಸಿನಿಮಾ ಪತ್ರಕರ್ತರೆಲ್ಲ ಒಗ್ಗೂಡಿ ಗಾಂಧಿಯನ್ನು ಖಂಡಿಸಿದಲ್ಲದೇ, ಆತನ ವಿರುದ್ದ ಎಪ್ ಐಆರ್ ಕೂಡ ದಾಖಲು ಮಾಡಲಾಯಿತು. ಸಿನಿಮಾ ವಂತು ವಾರದೊಳಗೆ ಥಿಯೇಟರ್ ನಿಂದ ಓಡುವುದು ಗ್ಯಾರಂಟಿ ಯಾಗುತ್ತಿದ್ದಂತೆ, ಗಾಂಧಿಗೆ ತನ್ನ ತಪ್ಪಿನ ಅರಿವಾಗಿದೆ. ಕೂಡಲೇ ಪತ್ರಿಕಾ ಘೋಷ್ಠಿ ಕರೆದು ಶ್ಯಾಮ್ ಪ್ರಸಾದ್ ನಲ್ಲಿ ಕ್ಷಮೆ ಕೋರಿದಲ್ಲದೆ, ಮುಂದೆ ಹೀಗೆ ನಡೆದು ಕೊಳ್ಳದಂತೆ ಮಾತುಕೊಟ್ಟಿದ್ದಾನೆ. ಪತ್ರಕರ್ತರು ಸಹ ಗಾಂಧಿಯ ಅವಾಂತರವನ್ನು ಕ್ಷಮಿಸಿ ಎಫ್ ಐಆರ್ ವಾಪಾಸು ಪಡೆದುಕೊಂಡಿದ್ದಾರೆ.

