Chitra Vaarte

ಗಾನಬಜಾನ ಚಿತ್ರತಂಡದ ಯಾತ್ರೆ

published on Jul.24, 2010, under News

GANABAJANA_3A ಈಗಾಗಲೇ ರಾಧಿಕಾ ಪಂಡಿತ್ ಅಭಿನಯಿಸಿದ ಕೃಷ್ಣನ ಲವ್  ಸ್ಟೋರಿ 50 ನೇ ದಿನದತ್ತ ಮುನ್ನುಗ್ಗುತ್ತಿದೆ. ಆಗಲೇ  ಗಾನ ಬಜಾನಾ ಕೂಡ ಭಜನೆಯನ್ನು ಶುರು ಮಾಡಿಕೊಂಡಿದೆ. ಇತ್ತೀಚೆಗೆ ಪ್ರೇಕ್ಷಕರ ಜೊತೆಗೆ ಪಿಕನಿಕ್ ಎಂಬ ಕಾರ್ಯಕ್ರಮನ್ನು ಆಯೋಜಿಸಲು ಈ ಟೀಮ್ ಯೋಜನೆಯನ್ನು ಹಮ್ಮಿಕೊಂಡಿತು. ಹಾಗೇ ಪ್ರೇಕ್ಷಕರು ನಿರೀಕ್ಷೆಗೂ ಮೀರಿ ಗಾನಾ ಬಜಾನ ಟೀಮಿನೋಮದಿಗೆ ಪಿಕನಿಕ್ ಹೋಗಲು ಸಿದ್ದವಾದರು. ಅವರಲ್ಲಿ ಕೆಲವರನ್ನು ಕರೆದುಕೊಂಡು ಜೇಡ್ ಗಾರ್ಡನ್ ನತ್ತ ಹೊರಟಿತು. ದಾರಿಯುದ್ದಕ್ಕೂ ಈ ಟೀಮು ಹರಟೆ, ಸಂತಸದೊಂದಿಗೆ ಕೆಲವು ಕ್ಷಣ ಕಳೆದರು.

 

ಈ ತಂಡದಲ್ಲಿ ರಾಧಿಕಾ ಪಂಡಿತ್ ಮುಖ್ಯ ಹೈಲೈಟ್ ಆಗಿದಲ್ಲದೇ, ತರುಣ ಈ ಸಭೆಗೆ ಮತ್ತೊಂದು ಮೆರುಗು.  ನಿದೇ೯ಶಕ ಪ್ರಶಾಂತ ನಿಮಾ೯ಪಕ ನವೀನ್ ಈ ಇಬ್ಬರ ಸಹೋದರರ ಜೋಡಿಯೊಂದಿಗೆ ಸಂಗೀತ ಜೋಶ್ವ ಶ್ರೀಧರ್ ಸಂಗಮದಲ್ಲಿ ಮಾತಿನ ಜೊತೆಗೆ ಸಂಗೀತ ಕಚೇರಿ ಸಹ ನಡೆಯಿತು.ಅಲ್ಲದೇ ನೆರೆದಿದ್ದ ಪೇಕ್ಷಕರು ತಮ್ಮ ನೆಚ್ಚಿನ ನಟನಟಿಯರ ಜೊತೆ ಮಾತಿನ ಸುರಿಮಳೆಯನ್ನೆ ಗೈದರು.  ಈ ನಡುವೆಯೇ  ಕಿರಣ ಮತ್ತು ಭರತರವರ ಹಾಡುಕುಣಿತವು ಜೋರಾಗಿತ್ತು. ಒಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಜನರೊಂದಿಗೆ ಬೆರೆತು ಆ ದಿನದ ಬಜಾನ ನಡೆದಿದ್ದೆ ದೊಡ್ಡ ಹೈಲೈಟ್.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...