ಗೆಲುವಿನ ಖುಷಿಯಲ್ಲಿ ಸಿದ್ಲಿಂಗು
published on Jan.20, 2012, under News
ಸಿದ್ಲಿಂಗು ಸಕತ್ ಖುಷಿಯಲ್ಲಿದ್ದಾನೆ. ಕಾರಣ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತಿರುವ ‘ಸಿದ್ಲಿಂಗು’ ವಾರಕ್ಕೂ ಮೊದಲೇ ಹತ್ತಿರ ಹತ್ತಿರ 1 ಕೋಟಿಗಳಿಕೆ ಮಾಡಿದ ಅಂದಾಜಿದೆ. ಬೆಂಗಳೂರಿನ ಮೇನ್ "ಥಿಯೇಟರ್’ ತ್ರಿವೇಣಿಯಲ್ಲಿ ಈಗಾಗಲೇ 8 ಲಕ್ಷ ಷೇರು ಪಡೆದು ಹಿಂದಿನ ವಾರದ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಮುಂದಿದೆ. ಈ ಖುಷಿಯಲ್ಲಿ ಚಿತ್ರತಂಡ ಷೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆಯಬೇಕಿದ್ದ ಚಿತ್ರತಂಡ ಮೊನ್ನೆ ಗೆಲುವಿನ ಖುಷಿಯಲ್ಲಿ ಮಾಧ್ಯಮದವರೊಂದಿಗೆ ಪೂಜೆ ಮತ್ತು ಕುಂಬಳಕಾಯಿ ಒಡೆದು ದಾಖಲೆ ನಿರ್ಮಿಸಿತು.
ಚಿತ್ರದ ಪ್ರಮುಖ ಹೈಲೈಟ್ ಯೋಗಿ ಮತ್ತು ರಮ್ಯಳ ಅಭಿನಯ. ಹಾಗೆ ಮೆಸ್ಮರೈಸಿಂಗ್ ಹಾಡುಗಳೊಂದಿಗೆ ಕಾಮೆಡಿ ಡೈಲಾಗ್ಗಳು ಸಿದ್ಲಿಂಗು ವಿಗೆ ಸಿಕ್ಕಾಪಟ್ಟೆ ಮೌತ್ ಪಬ್ಲಿಸಿಟಿ ಸಿಕ್ಕಿದೆ. ನಿರ್ಮಾ ಪಕ ಸಿದ್ದರಾಜು ಬಿಡುಗಡೆಗೂ ಮೊದಲು ಮಾಡಿಕೊಂಡಿದ್ದ ಒತ್ತಡವನ್ನು ಬಿಡುಗಡೆಯಾದ ಎರಡು ದಿನಗೆಳೊಳಗಾಗಿ ಸಾಕಷ್ಟು ಇಳಿಸಿಕೊಂಡಿದ್ದರು. ಹಾಗಾಗಿ ಚಿತ್ರ ಹಾಕಿದ ಬಂಡವಾಳ ಮಾಡಿಕೊಡುವುದರ ಬಗ್ಗೆ ಅವರಿಗೂ ಆತಂಕಗಳೇನಿದ್ದಂತಿರಲಿಲ್ಲ. ಲಾಭ.?
ಅದು ಮಾತ್ರ ಇನ್ನಷ್ಟೇ ಗೊತ್ತಾಗಬೇಕು.
ಚಿತ್ರಕ್ಕಾಗಿ ಶ್ರಮ ಹಾಕಿದವರೆಲ್ಲರಿಗೂ ಸಿದ್ಧರಾಜು ಅವತ್ತೇ ಧನ್ಯವಾದಗಳನ್ನ ಹೇಳಿದರು. ಅದರಲ್ಲೂ ಯೋಗಿಯನ್ನ ಸಿದ್ಲಿಂಗುವಾಗಿ ಪರಿವರ್ತಿಸಿ ಆತನಿಂದ ಉತ್ತಮ ನಟನೆ ದುಡಿಸಿಕೊಂಡ ನಿರ್ದೇಶಕ ವಿಜಯ್ ಪ್ರಸಾದ್ರನ್ನ ಹಾಡಿ ಹೊಗಳಿದರು. ಒಟ್ಟು ಎಷ್ಟು ಚಿತ್ರ ಮಂದಿರಗಳಲ್ಲಿ ಸಿದ್ಲಿಂಗು ಪ್ರದರ್ಶನ ಕಾಣುತ್ತಿದ್ದಾನೆ, ಎಷ್ಟರಲ್ಲಿ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತದೆ, ಎರಡು ದಿನದ ಕಲೆಕ್ಷನ್ ಎಷ್ಟು; ಇದ್ಯಾವುದರ ಬಗ್ಗೆಯೂ ಸಿದ್ಧರಾಜು ತುಟಿ ಬಿಚ್ಚಲಿಲ್ಲ. ಆದರೆ ತಮ್ಮ ಹಿಂದಿನ ಚಿತ್ರ ಯಕ್ಷದ ರೀತಿ ನೆಲಕಚ್ಚುವುದಿಲ್ಲ ಎಂಬ ಆತ್ಮವಿಶ್ವಾಸವಂತೂ ಅವರಿಗಿತ್ತು.
ರಮ್ಯಾರನ್ನ ಚೇಂಬರ್ನಲ್ಲಿರುವ ಕೆಲವರು, ಕೆಲವು ಪತ್ರಿಕೆಗಳು, ಮಾಧ್ಯಮಗಳು ಆಡಿಕೊಂಡದ್ದನ್ನ ಕೇಳಿದ್ದೆ. ಆದರೆ ನಿಜಕ್ಕೂ ಆಕೆ ಖಂಡಿತಾ ಆ ರೀತಿಯಲ್ಲ ಅನ್ನೋದು ನನಗರಿವಾದದ್ದೇ ಸಿದ್ಲಿಂಗುವಿನಲ್ಲಿ ಅಭಿನಯಿಸಲು ಒಪ್ಪಿ ಆಕೆ ಬಂದಾಗ. ತುಂಬಾ ಸರಳ ಹಾಗೂ ಕೋ ಆಪರೇಟಿವ್ ನಟಿ ಆಕೆ. ದುಬಾರಿ ಸಂಭಾವನೆ ಕೇಳ್ತಾರೆ ಅನ್ನೋ ಆರೋಪ ಕೂಡಾ ಆಕೆ ಮೇಲಿತ್ತು. ಆದ್ರೆ ನಿಜಾ ಹೇಳ್ತೀನಿ, ನಮ್ಮ ಸಿದ್ಲಿಂಗುವಿನಲ್ಲಿ ಆಕೆ ಕೊನೆವರೆಗೂ ಕಾಣಿಸಿಕೊಳ್ತಾರೆ. ಡೇಟ್ಸ್ ಕೂಡಾ ಜಾಸ್ತಿ ಬೇಕಿತ್ತು. ಆದ್ರೆ ಹಾಗಂತ ರಮ್ಯಾ ಮನಸೋ ಇಚ್ಛೆ ಡಿಮ್ಯಾಂಡ್ ಮಾಡಲಿಲ್ಲ. ಕಥೆ ಹಾಗೂ ಪಾತ್ರ ಆಕೆಗಿಷ್ಟವಾದ ಕಾರಣ ಆಕೆಯ ನಾರ್ಮಲ್ ಸಂಭಾವನೆಗಿಂತ ಕಡಿಮೆ ಹಣಕ್ಕೆ ಈ ಚಿತ್ರದಲ್ಲಿ ಪಾತ್ರ ಮಾಡಿಕೊಟ್ಟಿದ್ದಾರೆ. ನಮ್ಮ ಸಿದ್ಲಿಂಗು ಚಿತ್ರತಂಡದಿಂದ ಆಕೆಗೆ ಎಷ್ಟು ಧನ್ಯವಾದ ಹೇಳಿದರೂ ಕಮ್ಮಿ ಎಂದರು ಸಿದ್ಧರಾಜು. ಬಹುತೇಕ ತನ್ನ ಆತ್ಮಕಥೆ ಅಂತಲೇ ಹೇಳಿಕೊಂಡು ಸಿದ್ಲ್ಲಿಂಗು ಸಿನಿಮಾ ಮಾಡಿದ್ದ ನಿರ್ದೇಶಕ ವಿಜಯ್ ಪ್ರಸಾದ್, ಆ ಆತ್ಮಕ್ಕೆ ಈಗ ಪ್ರೇಕ್ಷಕರಿಂದಲೂ ಅಷ್ಟೇ ಅಭೂತಪೂರ್ವ ಸ್ವಾಗತ ಸಿಕ್ಕಿರುವುದನ್ನ ನೋಡಿ ಮೂಕವಾಗಿರುವುದಾಗಿ ಹೇಳಿಕೊಂಡರು.
ಒಳ್ಳೇ ಚಿತ್ರವನ್ನ ಖಂಡಿತಾ ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ಭರವಸೆಯನ್ನ ನೆಚ್ಚಿಕೊಂಡು ಸಿದ್ಲಿಂಗು ತಂಡ ಕಾಯುತ್ತಿದೆ.
hi, my name is harish, i watched sidlingu movie thrice, its owesome, i liked the Yogi’s acting ramya and suman is evergreen beauty in acting and in beauty…i liked her most, super film,,,,