Chitra Vaarte

ಚಿತ್ರೋದ್ಯಮದತ್ತ ದಾಪುಗಾಲಿಡುತ್ತಿರುವ ಕಾರ್ಪೊರೇಟ್ ಕಂಪನಿಗಳು

published on Apr.26, 2010, under News, Special Feature

ರಿಲಯನ್ಸ್ ಸೇರಿದಂತೆ ರಾಜ್ಯ, ಹೊರ ರಾಜ್ಯ ಮತ್ತು ಹೊರ ದೇಶದ ಸಂಸ್ಥೆಗಳು ಚಿತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿವೆ. ಸ್ಯಾಂಡಲ್ವುಡ್, ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಹೊಸದೊಂದು ಕ್ರಾಂತಿ ಶುರುವಾಗಿದೆ. ಕನ್ನಡ ಒಳಗೊಂಡಂತೆ ದೇಶ-ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳು ಚಿತ್ರ ನಿರ್ಮಾಣಕ್ಕೆ ಮುಂದಾಗಿವೆ. ಜತೆಗೆ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು ಕೂಡ ಚಿತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಅಮೆರಿಕದ ಜನರಲ್ ಮೋಟಾರ್ಸ್ ಉದ್ಯೋಗಿ ಸದಾನಂದ ಅವರಲ್ಲದೆ, ನಾನಾ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಚಿತ್ರ ನಿರ್ಮಾಣದತ್ತ ಆಕರ್ಷಿತರಾಗಿದ್ದಾರೆ. ಕೆಲ ಸಂಸ್ಥೆಗಳು ವಾಣಿಜ್ಯ ಮತ್ತು ಕಲಾತ್ಮಕ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರೆ, ಕೆಲವರು ಕಲಾತ್ಮಕ ಚಿತ್ರಗಳತ್ತ ಒಲವು ಹೊಂದಿದ್ದಾರೆ.

 

ಕನ್ನಡದಲ್ಲಿ "ಹೌಸಫುಲ್" ಚಿತ್ರ ನಿರ್ಮಿಸಿದಂತಹ ಮುಂಬಯಿಯ ಮಾವೆರಿಕ್ ಸಂಸ್ಥೆಯು ಚಿತ್ರ ನಿರ್ಮಾಣದಲ್ಲಿ ತೊಡಗಿರುವ ಸಂಸ್ಥೆಯಾಗಿದ್ದು, "ಗೌತಮ್" ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಸಿನರ್ಜಿ ಇಮೇಜಸ್ ಎಂಬುದು ಮತ್ತೊಂದು ಸಂಸ್ಥೆಯು. ಅಲ್ಲಿಂದ ಶುರುವಾದ ಸಂಸ್ಥೆಗಳ ಚಿತ್ರ ನಿರ್ಮಾಣ ಕಾರ್ಯ ಮುಂದುವರೆದಿದೆ. ಸಾಫ್ಟವೇರ್ ಯುವಕರ ತಂಡವೊಂದು "35/100- ಜಸ್ಟ್ ಪಾಸ್" ಹಾಗೂ ನರೇಂದ್ರ ಮಂಗಲಾನಿ ಅವರಿಂದ "ವೆಂಕಟ ಇನ್ ಸಂಕಟ" ಚಿತ್ರ ನಿರ್ಮಿಸಿದೆ. ಸಾಫ್ಟವೇರ್ ಉದ್ಯಮಿಗಳಾದ ಹರ್ಷರಾಮ್ ಎಂಬುವವರು "ಬೆಟ್ಟದಪುರದ ದಿಟ್ಟ ಮಕ್ಕಳು" ರಘುನಾಥ ಅವರು "ಆಕ್ಸಿಡೆಂಟ್" ಚಿತ್ರ ನಿರ್ಮಿಸಿದರು. ಮುರಳೀಧರ ಹಾಲಪ್ಪ "ಸೈನೇಡ್" ಸಿನಿಮಾ ರೂಪಿಸಿದ್ದಾರೆ.

 

ಶ್ರೀಷಕುಮಾರ ಮತ್ತು ತಂಡದಿಂದ "ಸಿಹಿಮುತ್ತು" ಚಿತ್ರೀಕರಣ ನಡೆಯುತ್ತಿದೆ. ಮಲ್ಲಿಕಾರ್ಜುನ ಮತ್ತು ಚಿತ್ರ ತಂಡವು ಚಿತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಚೆನ್ನೈನ ಸಾಯಿಮೇರು ಎಂಬ ಸಂಸ್ಥೆ ಕೂಡ "ಪುಟ್ಟ" ಎಂಬ ಚಿತ್ರವೊಂದನ್ನು ಆರಂಭಿಸಿದೆ. ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಿಸುತ್ತಿರುವ ರಿಲಯನ್ಸ್ ಬಿಗ್ ಪಿಕ್ಚರ್ಸ್ರವರ, ಎಂ.ಎಸ್. ಸತ್ಯು ನಿರ್ದೇಶನದ ಇಜ್ಜೋಡು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಏಪ್ರೀಲ್-30 ರಂದು ಬೆಂಗಳೂರಿನ 5 ಚಿತ್ರಮಂದಿರಗಳಲ್ಲಿ ನಂತರ ರಾಜ್ಯಾದ್ಯಂತ ತೆರೆ ಕಾಣಲಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಗಾಂಧಿನಗರದ ಹೇಳಿಕೆ.

 

-ಕೃಪೆ: ವಿ.ಕೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...