Chitra Vaarte

ಚಿತ್ರ ಸಮೂಹದ ದಲ್ಲಿ ಶ್ಯಾಮ್ ಬೆನಗಲ್

published on Jun.01, 2010, under News

ShyamBenegal ಹಿಂದಿನ ವಾರ ಚಿತ್ರಸಮೂಹದ"ಚಿತ್ರವರ್ಷ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ ಹೆಸರಾಂತ ಸಿನಿಮಾ ನಿದೇ೯ಶಕ ಶ್ಯಾಮ್ ಬೆನಗಲ್ ಕಳೆದ ಭಾನುವಾರ ಚಿತ್ರಸಮೂಹದ ಸಂವಾದದಲ್ಲಿ ಭಾಗವಹಿಸಿ ಸಿನಿಮಾ ಆಸಕ್ತರಿಗೆ ತಮ್ಮ ಅನುಭವಧಾರೆ ಬಿಚ್ಚಿಟ್ಟರು.

 

ಬೆನಗಲ್ 1962 ರಲ್ಲಿಯೇ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿ ನಂತರ "ಅಂಕುರ್", "ನಿಶಾಂತ್" ಮುಂತಾದ ಸಿನಿಮಾಗಳ ಮೂಲಕ  ಭಾರತೀಯ ಚಿತ್ರರಂಗಕ್ಕೆ ಆಧುನಿಕ ಸ್ಪರ್ಷ ಕೊಟ್ಟು ಮಾದರಿಯಾದವರು. ಅವರ ಪ್ರಕಾರ ಸಿನಿಮಾದಲ್ಲಿ ಆಟ್೯ ಮತ್ತು ಕಮಷಿ೯ಯಲ್ ಎಂಬ ಪ್ರಭೇದವಿಲ್ಲ. ಪ್ರತಿಯೊಂದು ಸಿನಿಮಾವು ಆಟಿ೯ಸ್ಟಿಕ್ ಆಗಿದ್ದು ಹಣಗಳಿಕೆಯು ಅದರ ಉದ್ದೇಶವಾಗಿರಬೇಕು. ಅದೇ ಉತ್ತಮ ಹಾಗೂ ಯಶಸ್ವಿ ಸಿನಿಮಾ ಎನ್ನುತ್ತಾರೆ.

 

ಚಿತ್ರರಂಗ ವನ್ನು ಉದ್ಯಮವಾಗಿ ಪರಿಗಣಿಸಲಾಗಿದೆ. ಹಾಗೇ ಮಾದ್ಯಮಗಳ ನಡುವೆ ಪೈಪೋಟಿ ಸಹ ಸಾಕಷ್ಟಿದೆ. ಸಿನಿಮಾ ಒಂದು ಮಾಸ್ ಆಂಡ್ ಕಲ್ಚರ್ ಮೀಡಿಯಾ.  ಹಾಗೇ ಪ್ರತಿಯೊಂದು ಸಿನಿಮಾ ಮಾಡುವಾಗ ಜನರ ಅಭಿರುಚಿ ಗಮನದಲ್ಲಿ ಇಟ್ಟುಕೊಂಟು ತಾಂತ್ರಿಕವಾಗಿಯೂ ಉತ್ತಮ ನಿರೂಪಣೆ ಮಾಡುವುದು ಇಂದಿನ ಸವಾಲು. ಇಂದು ಟಿ.ವಿ. ಜಾಹಿರಾತುಗಳಂತೆ ಹೊಸ ಹೊಸ ತಾಂತ್ರಿಕ ಅಂಶಗಳನ್ನು  ಅಳವಡಿಸಿಕೊಂಡು 15   ರಿಂದ 35  ವರ್ಷದ ಯುವಕರಿಗೆ ರುಚಿಸುವಂತಹ ಸಿನಿಮಾ ಮಾಡುವುದನ್ನು ಕನ್ನಡದವರು ಕಲಿಯಬೇಕಿದೆ ಎಂದು ತಮ್ಮ ಸಲಹೆ ನೀಡುತ್ತಾರೆ.

 

ತಮ್ಮ 75 ರ ಇಳಿವಯಸ್ಸಿನಲ್ಲಿಯೂ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿ ಹೊಂದಿದ ಬೆನಗಲ್ ರವರು ಕನ್ನಡ ಚಿತ್ರರಂಗಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಕನಾ೯ಟಕದ ಆಜುಬಾಜಿನ ತೆಲುಗು-ತಮಿಳಿನವರು  ಅದ್ದೂರಿ ಸಿನಿಮಾ ನಿಮಿ೯ಸಿ ಕನ್ನಡದ ಮಾರುಕಟ್ಟೆಯಲ್ಲಿ ಪಾಲು ಪಡೆದುಕೊಂಡಿದ್ದಾರೆ. ಕನ್ನಡ ಸಿನಿಮಾ ನಿಮಿ೯ಸುವವರು ಕ್ವಾಲಿಟಿ ಸಿನಿಮಾ ನೀಡುವುದಲ್ಲದೇ ತಮ್ಮ ಸಿನಿಮಾಗಳ ಪ್ರೇಕ್ಷಕ ವರ್ಗವನ್ನು ಹೆಚ್ಚಿಸಿಕೊಳ್ಳುವಂತಹ ಚಟುವಟಿಕೆಗಳು ನಡೆಸಬೇಕೆಂದು ಸಲಹೆ ನೀಡಿದ್ದಾರೆ. ನಿಜವಾಗಿ ಗಾಂಧೀನಗರದವರಿಗೆ ಇಂತಹ ಸಂವಾದ- ಶಿಕ್ಷಣ ಸಾಕಷ್ಟು ಕಲಿಯಬೇಕಿದೆ. ಕಮಷಿ೯ಯಲ್ ಮತ್ತು ಆಟಿ೯ಸ್ಟಿಕ್ ಎರಡರಲ್ಲೂ ಸೈ ಎನಿಸಿರುವ ಕಮಲ್ ಹಾಸನ್ ನಂತವರು ತಮಿಳಿನ ಸಿನಿಮಾಗಳ ಬಗ್ಗೆ ಸಂವಾದ, ಶಿಬಿರಗಳ ಮೂಲಕ ವಿಶ್ವಮಟ್ಟದಲ್ಲಿ ಘನತೆ ಹೆಚ್ಚಿಸುವಂತೆ, ನಮ್ಮವರು ಆರ್ಟ ಮತ್ತು ಕಮಷಿ೯ಯಲ್  ಎಂದು ಬೇದಮಾಡದೇ ಉತ್ತಮ ಕನ್ನಡ ಚಿತ್ರಗಳನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದಾಗ ಮಾತ್ರ ಶ್ಯಾಮ್ ಬೇಟಿಗೆ ಹೆಚ್ಚು ಅರ್ಥಬರುತ್ತದೆ. 

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...