Chitra Vaarte

ಜೋಗಯ್ಯ ಬಲು ಜೋರು

published on Jul.17, 2010, under News

jogaiah ಕನ್ನಡ ಚಿತ್ರರಂಗದತ್ತ ದೇಶ ಮತ್ತೊಮ್ಮೆ  ಗಮನಹರಿಸುವಂತೆ ಜೋಗಯ್ಯ ಕ್ರೇಜ್ ಹುಟ್ಟಿಸಿದ್ದಾನೆ. ಇತ್ತೀಚೆಗೆ ಕಮಲ್ ಹಾಸನ್ ಚಿತ್ರರಂಗಲ್ಲಿ ಐವತ್ತು ವರ್ಷ ಪೂರೈಸಿದಕ್ಕಾಗಿ ಚೆನೈ ನ ಸ್ಟೇಡಿಯಂ ನಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರೇ ಬಂದು ಕಮಲ್ ಸಾಧನೆ ಬಗ್ಗೆ ಮಾತನಾಡಿದ್ದರು. ಅಂತಹ ವೇದಿಕೆಯನ್ನು ನೆನಪಿಸುವಂತೆ ಜೋಗಯ್ಯನ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಮೊನ್ನೆ(ಜುಲೈ 12) ಸಾಕ್ಷಿಯಾಯಿತು.

 

ಅಂದು ಜೋಗಯ್ಯನ ಮುಹೂರ್ತ ಮಾತ್ರ ವಿಶೇಷವಾಗಲಿಲ್ಲ. ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನ ನೂರನೆಯ ಸಿನಿಮಾದ ಕ್ಲಾಪ್, 49 ನೇ ಹುಟ್ಟಿದ ಹಬ್ಬ ಹಾಗೂ ಹ್ಯಾಟ್ರಿಕ್ ಹೀರೋ ಚಿತ್ರರಂಗಕ್ಕೆ ಬಂದು 24 ವರ್ಷ ಪೂರೈಸಿದ ದಿನವಾಗಿ ಕೂಡ ಆ ದಿನ ದಾಖಲಾಯಿತು. ಆ ಸುದಿನಕ್ಕೆ ಬಂದು ಹಾರೈಸಿ ಶಿವಣ್ಣನಿಗೆ ಬೆಳ್ಳಿ ಕಿರೀಟ ತೊಡಿಸಿದವರು  ನೆರೆಯ ಟಾಲಿವುಡ್ ಹುಲಿ ಚಿರಂಜೀವಿ. ಗೆಳೆಯನಿಗೆ ವಿಷ್ ಮಾಡಲು ಬಂದವರು ಕಾಲಿವುಡನ್ ಹೃದಯ ಸಾಮ್ರಾಟರಾದ  ದಳಪತಿ ವಿಜಯ್ ಮತ್ತು ಸ್ಮಾರ್ಟ ಹೀರೋ ಸೂರಿಯಾ. ಇವರ ಪಕ್ಕದಲ್ಲಿ ನಮ್ಮ ಅಪ್ಪು ಪುನೀತ್, ರಾಜ ವೈಭವಕ್ಕೆ ವಾತ೯ ಮಂತ್ರಿ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಸುತ್ತಲೂ ಸಾವಿರ ಸಾವಿರ ಸಿನಿಮಾ ಅಭಿಮಾನಿ ದೇವರುಗಳು. ಇಷ್ಟೆಲ್ಲ ಇದ್ದಮೇಲೆ ಜೋಗಯ್ಯನ ಚಾಲನೆಗೆ ಇನ್ನೇನು ಬೇಕಲ್ಲವೆ.

 

ಐದು ವರ್ಷಗಳ ಹಿಂದೆ ಜೋಗಿ ಸಿನಿಮಾದ ಬಿಡುಗಡೆಯ ದಿನ ನವರಂಗ ಥಿಯೇಟರಿನಲ್ಲಿ 2000 ಸಾವಿರಕ್ಕೆ ಬ್ಲಾಕ್ ಟಿಕೇಟ್ ಪಡೆದು ಅಭಿಮಾನಿಗಳು ವೀಕ್ಷಿಸಿದ್ದರು. ಇಂದು ಜೋಗಯ್ಯನ ಮುಹೂರ್ತ ನೋಡಲು ಸಾವಿರೋಪಾದಿಯ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಒಳಪ್ರವೇಷಕ್ಕಾಗಿ ಕಾದು ಕುಳಿತಿದ್ದರು. ಅವರಲ್ಲಿ ಕೆಲವರು ಮಾತ್ರ ಈ ಅದೃಷ್ಟ ಪಡೆದರು. ಅಲ್ಲದೇ ಪುಂಖಾನುಪುಂಖವಾಗಿ ಸ್ಟೇಡಿಯಂಗೆ ಈ ಅತಿರಥ ಮಹರಥರು ಬಂದಾಗ ಸ್ಟೇಡಿಯಂನ ಮೇಲ್ಚಾವಣೆ ಕಿತ್ತುಹೋಗುವಂತ ಚೀತ್ಕಾರ, ಮಾತೇ ಕೇಳಿಸದಂತಹ ವಾತವರಣ, ವಿಜಯ್ ಸರ್……..ಇಲ್ಲಿ, ಸೂರಿ…. ತಿರುಗಿ ನೋಡಿ ಹೀಗೆ ಸ್ಟೇಡಿಯಂ ಸುತ್ತ ಕುಳಿತ ಐದಾರು ಸಾವಿರ ಜನರು ಒಂದೇ ಸವನೆ ಕೂಗಿಕೊಂಡರೆ ಏನಾಗಬೇಡ…… ಅಂದರೆ ನಮ್ಮ ಜೋಗಯ್ಯ ಅಂದರೆ ತಮಾಷೆನಾ.

 

ಪ್ರೇಮ್ ಪಕ್ಕಾ ಪಬ್ಲಿಷಿಟಿ ಪಂಟ. ಕೆಲವರು ಜೋಗಯ್ಯನ ಮುಹೂರ್ತ ಖಚು೯ ಮಾಡಿದ ದುಡ್ಡಲ್ಲಿ  ಪೂತಿ೯ ಸಿತಿನಿಮಾ ನಿಮಿ೯ಸುವಂತಹ ನಿಮಾ೯ಪಕರು ನಮ್ಮಲ್ಲಿ ಸಾಕಷ್ಟಿದ್ದಾರೆ. ಆದರೆ ಪ್ರೇಮ್ ಪಿಕ್ಚರ್ ಹಾಗಲ್ಲ, ಕನ್ನಡದ ಕಂಪು ಜಗತ್ತಿನೆಡೆಯಲ್ಲ ಬೀರಬೇಕು, ನಮ್ಮ ಶಿವಣ್ಣನ ಸಾಧನೆಯನ್ನು ಜನರು ಕೊಂಡಾಡಬೇಕು ಹಾಗೂ ಜೋಗುಯ್ಯ ಅದ್ದೂರಿಯಾಗಿ ಪ್ರಾರಂಭವಾಗಬೇಕು ಎಂಬುದು ಪ್ರೇಮ್ ನ ಇಚ್ಚೆ. ಹಾಗಾಗಿ ಈ ಸಿನಿಮಾದ ಮೊದಲ ಟೇಕ್ ಗಾಗಿ ಇನ್ನೂರುಕ್ಕಿಂತಲೂ ಹೆಚ್ಚಿನವರ ಡೋಳ್ಳಿನ ನೃತ್ಯ, ಅಷ್ಟೇ ಸಂಖ್ಯೆಯ ಶಿವನ ನೃತ್ಯ ಅವರ ಮಧ್ಯೆ ನಮ್ಮ ಲೆಜೆಂಡ್ ಶಿವಣ್ಣನ ವೀರ ಸಾಮ್ರಾಟನ ಅವತಾರದಲ್ಲಿ ವೀರ ನೃತ್ಯಕ್ಕೆ ಕಣ್ಮುಂದೆ ಬಂದಾಗ ಇಡಿ ಕ್ರೀಡಾಂಗಣ ಒಂದು ಕ್ಷಣ ಬೆರಗಾಯಿತು. ಟಾಲಿವುಡ್ ದೊರೆ ಚಿರಂಜೀವಿ ಶಿವಣ್ಣನಿಗೆ ಅಪ್ಪುಗೆಯ ಅಭಿನಂದನೆ, ಪಾರ್ವತಮ್ಮನವರ ಮಗನೀಗೆ ನೀಡಿದ ಸಿಹಿಮುತ್ತು….. ಇನ್ನೇನು ಬೇಕು ಜೋಗಯ್ಯ ನಿಗೆ.

 

ನಿಜ ಪ್ರೇಮ್ ಮುಹೂರ್ತದ ಮೂಲಕವೇ ಸಾಧನೆ ಮಾಡಿದ್ದಾರೆ. ನಟಿ ಹಾಗೂ ಆತನ ಪತ್ನಿ ರಕ್ಷಿತಾಳನ್ನೆ ನಿಮರ್ಾಪಕಿಯನ್ನಾಗಿ ಮಾಡಿ ಒಂದು ಮಹಾಸಾಧನೆಗೆ ಹೊರಟಿದಂತು ಸುಳ್ಳಳ್ಳ. ಈ ಎಲ್ಲ ನೆನಪುಗಳು ಕನ್ನಡಿಗರ ಮನಸಲ್ಲಿ ಶಾಶ್ವತವಾಗಿ ನೆಲೆಯೂರಲು ಪ್ರೇಮ್ ಜೋಗಯ್ಯ ನನ್ನು ಪಕ್ಕಾ ಮಾಡಬೇಕು. ಇಷ್ಟೇ ಪ್ರಯತ್ನವನ್ನು ಸಿನಿಮಾದ ಒಂದೊಂದು ದೃಶ್ಯದಲ್ಲೂ ಕಾಣಿಸಬೇಕು. ಕನ್ನಡಿಗರೆಲ್ಲ ಬಂದು ಥಿಯೇಟರ್ ಗಳಿಗೆ ಬಂದು ನಾವ್ಯಾರಿಗೂ ಕಡಿಮೆಯಿಲ್ಲ ಎಂದು ಸಾರಿ, ಸಾರಿ… ಪಕ್ಕದ  ರಾಜ್ಯಗಳಿಗೆ ಕೇಳಿಸುವಂತೆ ಹೇಳಬೇಕು. ಅದಕ್ಕಾಗಿ ನಮ್ಮೆಲ್ಲರ ಸಪೋರ್ಟ, ಪ್ರೇಮ್ ಗಾಗಿ, ಶಿವಣ್ಣನಿಗಾಗಿ, ಅದೆಲ್ಲಕ್ಕೂ ಮುಖ್ಯವಾಗಿ ಕನ್ನಡಕ್ಕಾಗಿ. ಬೆಸ್ಟ ಆಪ್ ಲಕ್ ಪ್ರೇಮ್……..

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...