Chitra Vaarte

ನಾಗತಿ ಮೇಷ್ಟ್ರ ಪಾಠಶಾಲೆ

published on Jul.10, 2010, under News

012 ಕನ್ನಡ ಚಿತ್ರರಂಗದ ಮೇಷ್ಟ್ರು ಎಂಬುದು ಅವರ  ಚಿತ್ರರಂಗದ ಸಾಧನೆಗೆ ಸಂದ ಗೌರವ. ಆ ಗೌರವಕ್ಕೂ ಮೊನ್ನೆ ಮಸಿ ಬಳಿದವರು ಒಬ್ಬ ಬಾಲಿಷ ವಿಧ್ಯಾಥಿ೯ನಿ. ಇಂತಹ ವಿಧ್ಯಾಥಿ೯ನಿ ಒಬ್ಬರಿದ್ದರೇನಂತೆ ಚಿತ್ರರಂಗದ ಕೃಷಿಗೆ ಈಗಾಗಲೇ ನೂರಾರು ವಿಧ್ಯಾಥಿಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಹುಟ್ಟುಹಾಕಿದ್ದಾರೆ. ಅವರೆಲ್ಲ ಈಗ ಚಿತ್ರರಂಗದಲ್ಲಿ ತೊಡಗಿದಕ್ಕಿಂತ ರಾಜ್ಯದಾದ್ಯಂತ ಕನ್ನಡಚಿತ್ರರಂಗ ಒಂದು ಮಾಸ್ ಕಲ್ಚರ್ ಆಗಿ ಬೆಳೆಯಲು ಇದು ಸಹಾಯಕವಾಗಿದಂತು ಸುಳ್ಳಲ್ಲ. ಹಾಗೇ ಮೇಷ್ಟ್ರು ಮತ್ತೊಮ್ಮೆ  ರಾಜ್ಯಮಟ್ಟದ ಚಲನಚಿತ್ರ ಕಥಾ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ಈ ಶಿಬಿರ  ಮೈಸೂರಿನಲ್ಲಿ ಅಗಸ್ಟ್ 11 ರಿಂದ 15 ರವರೆಗೆ ನಡೆಯಲಿದೆ.

 

ಕಳೆದ ಬಾರಿ ಈ ಶಿಬಿರಕ್ಕೆ ಹದಿನೈದು ಸಾವಿರದಷ್ಟು ಅಜಿ೯ಗಳಲ್ಲಿ ಕೇವಲ ನೂರರಷ್ಟು ವಿಧ್ಯಾಥಿ೯ಗಳನ್ನು ಮಾತ್ರ ಆಯ್ಕೆಮಾಡಿಕೊಂಡಿದ್ದರು. ಈ ವರ್ಷ ಕೂಡ ಹೊಸಬರು  ವಯಸ್ಸಿನ ಮಿತಿಯಿಲ್ಲದೆ ಅಅಜಿ೯ಗಳನ್ನು ಹಾಕಬಹುದು. ಐದು ದಿನ ನಡೆಯುವ ಈ ಶಿಬಿರ ಪ್ರತಿನಿತ್ಯ ಬೆಳೆಗ್ಗೆ ೯ ರಿಂದ ಸಂಜೆ 6 ರವರೆಗೆ ನಡೆಯುತ್ತದೆ. ಊಟ-ವಸತಿಗಳ ವೆಚ್ಚವನ್ನು  ಶಿಬಿರಾಥಿ೯ಗಳೆ ಭರಿಸಿಕೊಳ್ಳಬೇಕಾಗುತ್ತದೆ.

 

ಕೇವಲ ಜ್ನಾನಾರ್ಜನೆಯನ್ನೆ ಮುಖ್ಯ ಉದ್ದೇಶವಿಟ್ಟುಕೊಂಡು ನಡೆಯುವ ಈ ಶಿಬಿರಕ್ಕೆ ಅಜಿ೯ಗಳನ್ನು   ಈ   ವೆಭಸೈಟ್ www.nagathihalli.com   ಮೂಲಕ ಪಡೆದು ಜುಲೈ 17 ರೊಳಗೆ ಸಲ್ಲಿಸಬೇಕು. ವಿಳಾಸ: ವ್ಯವಸ್ಥಾಪಕರು,ರಾಜ್ಯಮಟ್ಟದ ಚಲನಚಿತ್ರ ಕಥಾ ಶಿಬಿರ, ನಂ.3,ಕಲ್ಯಾಣಿ ಗಾರ್ಡನ್, ಬನಶಂಕರಿ 1ನೇ ಹಂತ, ಬೆಂಗಳೂರು-50, ದೂರವಾಣಿ:080-26767161.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...