ಪರದೆಯ ಮೇಲೆ ‘ಪ್ರೇಮ ಚಂದ್ರಮ’
published on Apr.08, 2011, under News, Photo Gallery
ಈ ವಾರ ತೆರೆಯ ಮೇಲೆ ಹುಣ್ಣಿಮೆಯ ಸಮಯ. ಮಕ್ಕಳಿಗೆ ರಜೆ ಶುರುವಾಗುತ್ತಿದ್ದಂತೆ ‘ಪ್ರೇಮ ಚಂದ್ರಮ’ ಬಿಡುಗಡೆಯಾಗಿದೆ. ಸವಾರಿ ಮೂಲಕ ಭರವಸೆ ಮೂಡಿಸಿ ಬಾಲಿವುಡ್ ಹೀರೊಗಳಿಗೂ ಕಡಿಮೆಯಿರದ ರಘು ಮುಖರ್ಜಿ ಹಾಗೇ ಸುಮ್ಮನೆ’ ಯಿಂದ ಸುಮ್ಮನಿರದ ಕಿರಣ್ ಹಾಗೂ ಸ್ಯಾಂಡಲ್ವುಡ್ ಎವರ್ ಗ್ರೀನ್ ಕ್ವೀನ್ ರೇಖಾ ಈ ವಾರದಿಂದ ತೆರೆಯಲ್ಲಿ ಮೋಡಿ ಮಾಡಲು ಬರುತ್ತಿದ್ದಾರೆ.
ಯು.ಇ.ಗಣೇಶ್,ಜಿ.ಕೃಷ್ಣಪ್ಪ, ಜಿ.ಕುಮಾರ್, ಜಿ.ಎಸ್.ಜಗದೀಶ್ ಹಾಗೂ ಸುನೀಲ್ ಕುಮಾರ್ ಶಿಂಧೆ ನಿರ್ಮಿಸಿರುವ ಪ್ಯಾಮಿಲಿ ಪ್ಯಾಕೇಜ್ ನೀಡಿರುವುದಂತು ಸತ್ಯ. ವಿಭಿನ್ನ ಪ್ರೇಮಕಥೆಯನ್ನೊಳಗೊಂಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಬಾಯಲ್ಲೂ ಗುನುಗುನುಸುತ್ತಿವೆ. ಇತ್ತೀಚೆಗಷ್ಟೆ ಮಾಗಡಿ ರಸ್ತೆಯಲ್ಲಿರು ಇಂಜಿನೀಯರ್ ಕಾಲೇಜ್ ಒಂದರಲ್ಲಿ ವಿಶೇಷ ಸೆಟ್ನಲ್ಲಿ ಚಿತ್ರೀಕರಣ ಮಾಡಿ ಸಿನಿಮಾವನ್ನು ಇನ್ನಷ್ಟು ರಿಚ್ಆಗಿ ಮಾಡಿದ್ದಾರೆ. ಹಲವಾರು ಗೆಲುವಿನ ಸಿನಿಮಾಗಳು ಓಡುತ್ತಿದ್ದರು ಈ ಸಿನಿಮಾ ತನ್ನದೇ ವಿಭಿನ್ನತೆಯಿಂದಾಗಿ ಪ್ರೇಕ್ಷಕರನ್ನು ಹೆಚ್ಚು-ಹೆಚ್ಚು ಸೆಳೆಯುವಲ್ಲಿ ಯಶಸ್ವಿಯಾಗುವುದೆಂದು, ನಿರ್ಮಪಕರೆಲ್ಲ ಅಬ್ಬರದ ಪ್ರಚಾರದ ಮೂಲಕ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ.
ಮನಸ್ಸಿಗೆ ಹತ್ತಿರವಾಗುವಂತಹ ಈ ಸಿನಿಮಾವನ್ನು ರಾಜ್ಯದ ಸುಂದರ ತಾಣಗಳು ಹಾಗೂ ವಿದೇಶದ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ವಿ.ಹರಿಕಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಶಶಿಧರ್ಭಟ್(ಶಿರಸಿ) ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿರ್ಮರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

