ಪರಭಾಷ ಸಿನಿಮಾಗಳ ಹಾವಳಿಗೆ ಸೆಡ್ಡು ಹೊಡೆದ `ಸಿದ್ಲಿಂಗು’ ಟೀಮ್
published on Jan.12, 2012, under News
ಕನ್ನಡ ಚಿತ್ರರಂಗದವರು ಅಭಿಮಾನ ಶೂನ್ಯರಲ್ಲ. ನಮಗೂ ತಾಕತ್ತಿದೆ. ತೆಲುಗು-ತಮಿಳು ಚಿತ್ರರಂಗಕ್ಕೆ ಕಡಿಮೆಯಿಲ್ಲದಂತೆ ಚಿತ್ರಗಳನ್ನು ನೀಡುತ್ತ ಬಂದಿದ್ದೇವೆ. ನಮ್ಮ ಸಿನಿಮಾಗಳು 25 ರಿಂದ 30 ಕೋಟಿಯನ್ನು ನಮ್ಮ ನೆಲದಲ್ಲಿಯೇ ಗಳಿಕೆ ಮಾಡುತ್ತಿವೆ. ಪರಭಾಷ ಸಿನಿಮಾಗಳ ವ್ಯಾಮೋಹ ಬಿಟ್ಟು ಕನ್ನಡ ಚಿತ್ರಗಳನ್ನು ಗೆಲ್ಲಿಸಲು ಸಹಾಯ ಮಾಡಿ ಇನ್ನಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಿಸಲು ಉತ್ತೇಜನ ನೀಡಿ ಎಂದು ಸಿದ್ಲಿಂಗು ಟೀಮ್ ಕನ್ನಡ ಚಿತ್ರೋದ್ಯಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಹೊಸ ವರ್ಷದ ಉತ್ಸಾಹದಲ್ಲಿ ಸಿದ್ಲಿಂಗು ಬಿಡುಗಡೆ ಮಾಡಲು ಹೊರಟ ಚಿತ್ರತಂಡಕ್ಕೆ ಹತ್ತಿರ 100 ಚಿತ್ರಮಂದಿರಗಳನ್ನು ಘೋಷಿಸಿತು. ಆದರೆ ಕೆಲವು ಕನ್ನಡಿಗರೆ ದುರಾಸೆಗೆ ಬಿದ್ದು ತೆಲುಗು-ತಮಿಳು ಸಿನಿಮಾಗಳನ್ನು 100 ಚಿತ್ರಮಂದಿರಗಳಿಗೂ ಹೆಚ್ಚು ಬಿಡುಗಡೆ ಮಾಡುವ ಉದ್ದೆಶದಿಂದ ಸಿದ್ಲಿಂಗು ಮತ್ತು ಕೋ..ಕೋ..ಸಿನಿಮಾಗಳಿಗೆ ಥಿಯೇಟರ್ ಸಿಗದಂತೆ ಸಂಚು ರೂಪಿಸಿತು. ವೃತ್ತಿಯಲ್ಲಿ ಲಾಯರ್ ಆದ ಸಿದ್ಲಿಂಗು ನಿರ್ಮಾಪಕ ಸಿದ್ದರಾಜು ಕೊ..ಕೋ.. ನಿರ್ಮಾಪಕ ಆದಿ ನಾರಯಣ್ ರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿ ಆರ್ರಬಿಟೇಷನ್ ನ್ಯಾಯಲಯದ ಮುಂದಿಟ್ಟಿತು. ಈ ನ್ಯಾಯಲಯವು ಪರಭಾಷಾ ಸಿನಿಮಾಗಳಿಗೆ 30 ಥಿಯೇಟರ್ಗಳಿಗೆ ಸೀಮಿತಗೊಳಿಸಿ ಕನ್ನಡ ಚಿತ್ರಗಳಿಗೆ ಹೆಚ್ಚು ಥಿಯೇಟರ್ ದೊರೆಯುವಂತೆ ತೀರ್ಮಾನ ಹೊರಡಿಸಿತು.
ಸಿದ್ಲಿಂಗು ಸಿನಿಮಾ ಈ ವಾರ 80 ಕ್ಕೂ ಹೆಚ್ಚು ಥಿಯೇಟರ್ಸ್ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಲ್ಲದೇ, ಇನ್ನಿತರ ಕನ್ನಡ ನಿರ್ಮಾಪಕರಿಗೂ ಮಾದರಿಯಾಯಿತು. ಸಿದ್ಲಿಂಗು ನಿರ್ದೇ ಶಕ ವಿಜಯ್ ಪ್ರಸಾದ್ ನಿಜ ಜೀವನದ ಅನುಭವಗಳನ್ನೆ ಕಥೆಯಾಗಿ ಹೆಣೆದು ಉತ್ತಮ ಪ್ರೇಮ ಕಾವ್ಯವನ್ನು ಸೃಷ್ಟಿಸಿದ್ದು ಸಿನಿಮಾ ಉತ್ತಮ ಪ್ರದರ್ಶನ ಕಾಣುವ ದೃಷ್ಟಿಯಿಂದ ಚಿತ್ರತಂಡ ಹೆಚ್ಚಿನ ಪ್ರಚಾರದೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಲೂಸ್ ಮಾದ ಯೋಗೇಶ್ ತನ್ನ ಬದುಕಿನ 3 ಹಂತಗಳಲ್ಲಿ ವಿವಿಧ ಗೆಟಪ್ನಲ್ಲಿ ಬರುತ್ತಿದ್ದು ಸದಾ ತರುಣಿ ಸುಮನ್ ರಂಗನಾಥ್ ಮತ್ತು ರಮ್ಯಳೊಂದಿಗೆ ಚಿತ್ರಜೀವನದಲ್ಲಿಯೇ ಬೆಸ್ಟ್ ಅಭಿನಯದ ಮೂಲಕ ಬರುತ್ತಿದ್ದಾರೆ.
ಸಿದ್ಲಿಂಗು ತಾರಾಬಳಗದಲ್ಲಿ ಸುಮನ್ ರಂಗನಾಥ್, ಅಚ್ಯುತರಾವ್, ಗಿರಿಜಾಲೋಕೇಶ್, ರೇಣುಕಾರಾಧ್ಯ, ರಂಗಾಯಣರಘು, ಶರಣ್, ಎಚ್.ಎಮ್.ಟಿ ವಿಜಯ್, ಕೆ.ಸಿ.ಶ್ರೀಧರ್, ವತ್ಸಲಾ ಮೋಹನ್ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಡಿಫéರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಉದಯ ಹೆಗಡೆ ಸಂಕಲನ `ಸಿದ್ಲಿಂಗು’ ಚಿತ್ರಕ್ಕಿದೆ.