ಬಪಾ(ಬಸಂತ್ ಕುಮಾರ್ ಪಾಟೀಲ್) ಗುಂಪಿನ ಹೊಸ ಕಾರ್ಯಚರಣೆ
published on May.12, 2010, under News
ಕನ್ನಡ ಚಿತ್ರರಂಗದ ಸಮಸ್ತ ಅಭಿವೃದ್ದಿಗೆ ಚಲನಚಿತ್ರಮಂಡಳಿ ಪ್ರೇಕ್ಷಕರ ಅಭಿಪ್ರಾಯಗಳನ್ನು ತಿಳಿಯಲು ರಾಜ್ಯದಾದ್ಯಂತ ಹಲವು ಕಮ್ಮಟಗಳನ್ನು ನಡೆಸಲು ಈ ವರ್ಷ ಮುಂದಾಗಿದೆ. ಚಿತ್ರರಂಗ ಸೋತು ಸೊರಗಿದ ಈ ದಿನಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ಬಸಂತ ಕುಮಾರ್ ಪಾಟೀಲ್ ತಮ್ಮ ಅವಧಿಯ ಅಜೆಂಡಾದಲಿ ಕಮ್ಮಟಗಳೊಂದಿಗೆ, ರಾಜ್ಯದಾದ್ಯಂತ ಥಿಯೇಟರ್ ನಿರ್ಮಾಣ, ಪ್ಯೆರಸಿ ಹಾವಳಿ ತಡೆಗಟ್ಟುವಿಕೆ ಯಲ್ಲದೇ ಮುಂದಿನ ಚಲನಚಿತ್ರನೀತಿಗಳನ್ನು "ಎಕಗವಾಕ್ಷಿ’ ರೂಪದಲ್ಲಿ ಜಾರಿಗೆ ತರಲು ಸಜ್ಜಾಗಿದೆ.
ಇಂದು ಹೆಚ್ಚು-ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿದ್ದರು ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರಸರಿಯುತ್ತಿದ್ದಾರೆ. ಕನ್ನಡ ಚಲನಚಿತ್ರೋದ್ಯಮ ಹಲವು ಉತ್ತಮ ನೀತಿಗಳನ್ನು ಅಳವಡಿಸಿಕೊಳ್ಳಲು ದಶಕಗಳಿಂದಲೂ ತಮ್ಮ ಲ್ಲಿರುವ ಬಿನ್ನಾಭಿಪ್ರಾಯಗಳಿಂದ ಒದ್ದಾಡುತ್ತಿದೆ. ಹಾಗಾಗಿ ಈಗ ಚಲನಚಿತ್ರಮಂಡಳಿ ರಾಜ್ಯದ ಹಲವೆಡೆ ಇಂತಹ ಕಮ್ಮಟಗಳನ್ನು ಏರ್ಪಡಿಸಿ ಜನರ ಅಹವಾಲುಗಳನ್ನು ಸ್ವೀಕರಿಸಲು ಮುಂದಾಗಿದೆ. ನಗರದ ಮೆಜೆಸ್ಟಿಕ್ ಹತ್ತಿರದಲ್ಲಿರುವ ಗಾಂಧೀನಗರ ಕನ್ನಡ ಚಿತ್ರೋದ್ಯಮದ ಕೇಂದ್ರಬಿಂದು. ಇಲ್ಲಿನ ಪ್ರಮುಖ ಥಿಯೇಟರ್ ಗಳಾದ "ಕಪಾಲಿ" ಹಾಗೂ ತ್ರಿಭುವನ್ ಗಳಲ್ಲಿ ತೆಲಗು ಸಿನಿಮಾಗಳ ಪೋಸ್ಟರ್ಸ್ ಹಾಗೂ ಪ್ರದರ್ಶನ ಯಥೇಚ್ಚವಾಗಿ ನಡೆಯುತ್ತಿದೆ. ಈ ವಿಷಯವನ್ನು ಚಲನಚಿತ್ರಮಂಡಳಿಯ ಅಧ್ಯಕ್ಷರಾಗಿ ಬಪಾ(ಬಸಂತ್ ಕುಮಾರ್ ಪಾಟೀಲ್) ರವರ ಮೊದಲಬಾರಿ ಕರೆದ ಮಾಧ್ಯಮ ಘೋಷ್ಟಿಯಲ್ಲಿ ರಾಜ್ಯದಲ್ಲಿ ಥಿಯೇಟರ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚಿರುವ ಥಿಯೇಟರ್ಸ್ ಗಳಲ್ಲಿ ಈಗ ಚಾಲ್ತಿಯಲ್ಲಿರುವುದು 5 ರಿಂದ 6 ನೂರುಗಳಷ್ಟು. ಅವುಗಳಲ್ಲಿ ಹಲವು ಥಿಯೇಟರ್ಸ್ ಗಳು ಪರಭಾಷಾ ಸಿನಿಮಾಗಳ ಪಾಲಾಗಿವೆ. ಆ ನಿಟ್ಟಿನಲ್ಲಿ ಬಪಾ ಗುಂಪು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ 400-500 ಸೀಟುಗಳ ಸಾವಿರ ಮಿನಿ ಥಿಯೇಟರ್ಸ್ ಗಳನ್ನು ನಿರ್ಮಿಸಲು ಸಹಕರಿಸುವಂತೆ ಕೇಳಿಕೊಂಡಿದ್ದಾರೆ. ಇರುವ ಥಿಯೇಟಗಳೇ ದುರಾವಸ್ಥೆಯಲ್ಲಿದು ಹೊಸ ಥಿಯೇಟರ್ಸ್ ನಿರ್ಮಾಣದ ಕುರಿತು ಬಪಾ ಗುಂಪಿನ ಮುಂದಿನ ಹೆಜ್ಜೆಯ ಬಗ್ಗೆ ಈಗ ಗಾಂಧೀನಗರದಲ್ಲಿ ಗುಸು-ಗುಸು ಎದ್ದಿದೆ.
ಸಿಕ್ಕಾಪಟ್ಟೆ ಪೈರಸಿ ಹಾವಳಿಗೂ ಮೂಗುದಾರ ಹಾಕಲು ‘ಗುಂಡಾ ಕಾಯ್ದೆ" ಜಾರಿಗೂ ಮುನ್ನವೇ ಬಪಾ ಗುಂಪಿನವರಾದ ಬಿ.ಎನ್.ಗಂಗಾಧರ್(ಉಪಾಧ್ಯಕ್ಷ,ನಿರ್ಮಾಪಕರ ವಲಯ) , ಕೆ. ಮಂಜು.(ಉಪಾಧ್ಯಕ್ಷ,ವಿತರಕ ವಲಯ) ವಿ. ಹನುಂತರಾಯ (ಉಪಾಧ್ಯಕ್ಷ,ಪ್ರದರ್ಶಕ ವಲಯ), ಎ.ಗಣೇಶ್, ( ಗೌರವ ಕಾರ್ಯದರ್ಶಿ,ನಿರ್ಮಾಪಕ ವಲಯ) ಎ.ಗಣೇಶ್( ಗೌ.ಕಾ. ನಿರ್ಮಾಪಕ ವಲಯ) ಎಸ್.ನರಸಿಂಹಲು(ಗೌ.ಕಾ. ವಿತರಕರ ವಲಯ) ಎಸ್.ಕೆ.ವೆಂಕಟೇಶ್ ಮೂತರ್ಿ(ಗೌ.ಕಾ. ಪ್ರದರ್ಶಕ ವಲಯ) ಹಾಗೂ ಖಜಾಂಚಿ ಎಸ್.ಎ.ಚಿನ್ನೆಗೌಡರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

