Chitra Vaarte

ಬೆಂಗಳೂರಿನಲ್ಲಿ ಬದ್ರಿನಾಥನ ದರ್ಬಾರ್

published on Aug.02, 2011, under News, Photo Gallery, Tollywood

PCS_0183 ಮೊನ್ನೆ ಅಲ್ಲು   ಅರ್ಜುನ್  ಬೆಂಗಳೂರಿಗೆ ಬಂದಿದ್ದ. ತನ್ನ ಹನ್ನೆರಡನೆಯ ಸಿನಿಮಾ ‘ಬದ್ರಿನಾಥ’ ದೇಶದಾದ್ಯಂತ 50 ದಿವಸ ಪೂರೈಸಿದಕ್ಕಾಗಿ ತನ್ನ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದು ವಿಶೇಷ. ದೂರದ ಹೈದರಬಾದ್ನಿಂದ ಬರುವ ಅರ್ಜುನ್ ನ್ನ್ನು ಸ್ವಾಗತಿಸಲು ಬಂದ ಸಾವಿರಾರು ಅಭಿಮಾನಿಗಳನ್ನು ಕಂಡಾಗಲೇ ಈತ ಎಷ್ಟರಮಟ್ಟಿಗೆ ಕರ್ನಾಟಕದ ಜನರ ಮನಸ್ಸಿನಲ್ಲಿ ಇದ್ದಾನೆ ಎಂಬುದು ವ್ಯಕ್ತವಾಗುತಿತ್ತು. ನಿಜ, ಅಲ್ಲು ಅರ್ಜುನ್  ತನ್ನ ‘ಆರ್ಯ’ ಸಿನಿಮಾದಿಂದಲೇ ಕೇವಲ ಬೆಂಗಳೂರು ಮಾತ್ರವಲ್ಲ ಕರ್ನಾಟಕದ ಮೂಲೆ ಮೂಲೆಗಳಲ್ಲು ಜನಪ್ರಿಯತೆಗಳಿಸಿದ್ದಾನೆ. ಹಾಗಾಗಿಯೇ ಬದ್ರಿನಾಥ 50 ದಿನ ಪೂರೈಸಿದ 187 ಥಿಯೇಟರ್ಗಳಲ್ಲಿ 12 ನಮ್ಮ ರಾಜ್ಯದ ಕೇಂದ್ರಗಳಾಗಿವೆ.

 

Picture 1 of 5

 

ಅಲ್ಲು ಅರ್ಜುನ್ ಹೆಸರಾಂತ ತೆಲುಗು ಕಾಮೆಡಿಯನ್ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ. ಅರ್ಜುನ್ ತಂದೆ ಅಲ್ಲು ಅರವಿಂದ ಗೀತಾ ಆಟ್ರ್ಸ ಬ್ಯಾನರಿನ ಮಾಲಿಕ. ಚಿರಂಜೀವಿ ಕುಟುಂಬಕ್ಕೆ ಹತ್ತಿರ ಸಂಬಂದಿಗಳಾದ ಇವರು 30 ಕ್ಕೂ ಹೆಚ್ಚು ಸಿನಿಮಾ ನಿರ್ಮಿಸಿ ‘ಮಗಧೀರ’ನಂತಹ ಹಿಟ್ ಸಿನಿಮಾ ಕೊಟ್ಟವರು. ಈಗ 40 ಕೋಟಿ ಬಜೆಟ್ನಲ್ಲಿ ಮಗನಿಗಾಗಿ ಸಿನಿಮಾ ನಿ ರ್ಮಿಸಿ 25ನೇ ದಿನಕ್ಕೆ ಹಾಕಿದ ಬಂಡವಾಳವನ್ನು ಹಿಂಪಡೆದು ಈಗ ಕೋಟಿಗಟ್ಟಲೇ ಲಾಭದಲ್ಲಿರುವ ಗೀತಾ ಆಟ್ರ್ಸ ಈಗ ದೇಶದಾದ್ಯಂತ ‘ಬದ್ರಿನಾಥ’ ಪ್ರಮೋಷನ್ ಟೂರ್ ಲ್ಲಿ ಬ್ಯುಸಿ.

 

ಬೆಂಗಳೂರಿನ ಚಿರಂಜೀವಿ ಅಭಿಮಾನಿ ಬಳಗದ ನೇತೃತ್ವದಲ್ಲಿ ನಡೆದ ಬದ್ರಿನಾಥ ನ 50ನೇ ದಿನದ ದಿನ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ತಂದಿತ್ತು. ನಗರದ ಕೋರಮಂಗಲದಲ್ಲಿರುವ ಸೇಂಟ್ ಜಾನ್ ಅಡಿಟೊರಿಯಂನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಸಾವಿರಾರು ಅಭಿಮಾನಿಗಳ ಸಾಗರ ಹರಿದುಬಂದಿತ್ತು. ಹಾಗೆ ಹೊರಾಂಗಣದಲ್ಲಿಯೂ ತಮ್ಮ ನೆಚ್ಚಿನ ನಟನ ದರ್ಶನ ಮಾಡಲು ಅಭಿಮಾನಿಗಳು ಹಾತೊರೆಯುತ್ತಿದ್ದರು. ಆದರೆ ಅರ್ಜುನ್  ನೊಡಲು ಕೆಲವರಿಗೆ ಮಾತ್ರ ಸಾಧ್ಯವಾಗಿದೆ. ಇನ್ನೇನು ತನ್ನ ನೆಚ್ಚಿನ ನಟ ವೇದಿಕೆ ಹತ್ತಿರ ಬರುತ್ತಿದ್ದಾನೆ ಎಂದಾಗ ಜನರನ್ನು ನಿಯಂತ್ರಣದಲ್ಲಿಲು ಪೋಲಿಸ್ ಮತ್ತು ಸಂಘಟಕರು ಹೈರಾಣಾಗಿ ಹೋಗಿದ್ದರು. ಬೆಂಗಳೂರಿನ ಹಲವು ಡ್ಯಾನ್ಸ್ ಗ್ರೂಪ್ಗಳ ಪ್ರದರ್ಶನಕ್ಕೆ ಮೆಚ್ಚಿ ಸ್ವತಃ ಅರ್ಜುನ್  ಕ್ಷಣಮಾತ್ರದಲ್ಲಿ ಅವರ ಅಭಿಮಾನಿಯಾಗಿ ವೇದಿಕೆಗೆ ಜಿಗಿದಿದ್ದು ಎಲ್ಲರಿಗು ಆಶ್ಚರ್ಯ ತಂದಿತು.

 

ವರ್ಷಕ್ಕೆ ಎರಡು ಬಾರಿ ಸ್ವತಃ ಅರ್ಜುನ್  ರಕ್ತದಾನ ಮಾಡುವುದು ವಾಡಿಕೆ. ಹಾಗೇ ಆತನ ಅಭಿಮಾನಿಗಳು ರಕ್ತದಾನ ಮಾಡಲು ಹೆಸರು ನೊಂದಾಯಿಸಿಕೊಂಡರು. ನಂತರ ರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಬದ್ರಿನಾಥ ಓಡಿದ 12 ಥಿಯೇಟರ್ ಮಾಲಿಕರಿಗೂ ಫಲಕ ನಿಡಿ  ಅರ್ಜುನ್  ಗೌರವಿಸಿದರು. ಅಷ್ಟರೊಳಗೆ ಹಲವಾರು ಅಭಿಮಾನಿಗಳು ಬೆಳ್ಳಿ ಖಡ್ಗ,ಹೂವಿನ ಹಾರ ಹಾಕುವ ಮೂಲಕ ಖುಷಿಪಟ್ಟರೆ, ಕೆಲವು ಹುಡುಗಿಯರು ಸಂಘಟಕರನ್ನು ಲೆಕ್ಕಿಸದೆ ‘ಅಟೋಗ್ರಾಪ್ ಪ್ಲೀಸ್’ಎಂದು ಹಸ್ತಾಕ್ಷರವನ್ನು ಬರೆಸಿಕೊಂಡು ಖುಷಿಪಟ್ಟರು. ಈ ಸಂದರ್ಭದಲ್ಲಿ ಅಲ್ಲು ಅರವಿಂದ್, ನಿರ್ದೇಶಕ ವಿನಾಯಕ ಹಾಗೂ ಕನ್ನಡದ ಹೆಸರಾಂತ ನಿರ್ಮಾಪಕರಾಕ್ಲೈನ್ ವೆಂಕಟೇಶ್ ಸಹ ವೇದಿಕೆಯನ್ನು ಹಂಚಿಕೊಂಡಿದ್ದರು.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...