ಮಳೆಗಾಲ ಶುರು, ಗಣೇಶ್ ಮತ್ತೆ "ಕೂಲ್"
published on Jun.25, 2010, under News
ಮಳೆಗಾಲ ಮತ್ತು ಗಣೇಶ್ ನಿಗೆ ಗಾಢವಾದ ಸಂಬಂಧ. ಮಳೆ ಇದ್ದಲ್ಲಿ ಗಣೇಶ್, ಗಣೇಶ್ ಇದ್ದಲ್ಲಿ ಮಳೆ ಎಂಬಂತೆ ಈ ಮಳೆಗಾಲ ಆರಂಭವಾಗುತ್ತಿದ್ದಂತೆ ಹೋಮ್ ಬ್ಯಾನರಿನ ಎರಡನೆ ಸಿನಿಮಾ ಸೆಟ್ಟೇರಿದೆ. ಮುಸ್ಸಂಜೆ ಮಹೇಶ್ ನಿದೇ೯ಶಿಸುತ್ತಿರುವ ಈ ಸಿನಿಮಾದಲ್ಲಿ ಗಣೇಶ್ ಕಾಲೇಜ್ ಬಾಯ್. ಕಾಲೇಜು ದಿನಗಳಲ್ಲಿ ಎಲ್ಲರಲ್ಲಿಗೂ ತಮ್ಮದೇ ಕಥೆ ಎನ್ನುವಂತ ಅನುಭವಗಳನ್ನು ಹೇಳುವ ಕಥೆಯಾಗಿದ್ದು ಇಲ್ಲಿಯೂ ತರ್ಲೆ-ತಮಾಷೆಗಳೆಲ್ಲವು ಇವಯಂತೆ.
ಬಾಲಿವುಡ್ ನ ಅಮಿನಾ ಷರೀಪ್ ಸಕತ್ ಹಾಟ್ ಮಾಡಲು ಬರುತ್ತಿರುವುದಲ್ಲದೇ, ಕೂಲ್ ಸಿನಿಮಾದ ಸಬ್ ಟ್ಯೆಟಲ್ ಸಹ "ಸಕತ್ ಹಾಟ್ ಮಗ’ ಎಂದಿದೆ. ಕಾಲೇಜ್ ಗೆಟಪ್ ಕಾಣಲು ಗಣೇಶ್ ಈಗಾಗಲೇ ಮೂರು ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ, ಇನ್ನೂ ಸ್ಲಿಮ್ ಆಗುವ ಪ್ರಯತ್ನ ನಡೆದಿದೆಯಂತೆ. ಈ ಸಿನಿಮಾದ ಇನ್ನೊಂದು ವಿಶೇಷವೇನೆಂದರೆ ಗಾಳಿಪಟದ ನಂತರ ದಕ್ಷಿಣ ಭಾರತದ ಖ್ಯಾತ ಕ್ಯಾಮೆರಾಮನ್ ರತ್ನವೇಲು ಬರುತ್ತಿರುವುದು. ಈ ಸಂತಸವನ್ನು ಹಂಚಿಕೊಳ್ಳಲು ಮೊನ್ನೆ ಶಿಲ್ಪಾ -ಗಣೇಶ್ ಟೀಮ್ ಈಡಿ ಗಾಂಧಿನಗರದ ಗಣ್ಯರನ್ನು ಸಂತಸಕೂಟಕ್ಕೆ ಆಹ್ವಾನಿಸಿದ್ದರು.
"ಗಣೇಶ್ "ಗಾಳಿಪಟ"ಸಿನಿಮಾ ಚಿತ್ರಿಕರಣದ ಸಮಯದಲ್ಲಿಯೇ ರತ್ನವೇಲುರವರಿಗೆ ತಮ್ಮ ಇನ್ನೊಂದು ಸಿನಿಮಾಕ್ಕೆ ಬರುಲು ಆಹ್ವಾನವಿತ್ತಿದ್ದರಂತೆ. ಆಗ ಗಣೇಶ್ ನಿಗೆ ಉತ್ತಮ ಸ್ಕ್ರಿಪ್ಟ್ ತರಲು ಹೇಳಿದ್ದರಂತೆ. ಹಾಗೇ "ಕೂಲ್" ಸಿನಿಮಾದ ಸ್ಕ್ರಿಪ್ಟ್ ಓಕೆಮಾಡಿ ಕನ್ನಡಕ್ಕೆ ಮತ್ತೊಮ್ಮೆ ಬಂದಬಗ್ಗೆ "ರತ್ನವೇಲು" ತಿಳಿಸಿದರು.
ಈ ಸಿನಿಮಾದಲ್ಲಿಯೂ ಬೆಂಗಳೂರು,ಮೈಸೂರು, ಊಟಿ ಯಲ್ಲದೇ ಉತ್ತರ ಭಾರತದ ಡಾಜಿ೯0ಲಿಗ್ ಹಾಗೂ ಲಡಾಖ್ ಗಳಲ್ಲಿ ಚಿತ್ರಿಕರಣ ನಡೆಯುವುದನ್ನು ಗಣೇಶ್ ತಿಳಿಸಿದರು. " ಈ ಸಿನಿಮಾದ ಟೈಟಲ್ ಬಗ್ಗೆಯೂ ಪೇಕ್ಷಕರಿಂದ ಪೋಲಿಂಗ್ ನಡೆಸಿ ಅವರ ಇಷ್ಟದಂತೆ "ಕೂಲ್" ಎಂದು ಹೆಸರಿಡಲಾಗಿದೆಯಂತೆ.
ಗೋಲ್ಡನ್ ಮೂವಿಸ್ ಒಡತಿ ಶಿಲ್ಪಾ ಗಣೇಶ್ ಸಹ ತಮ್ಮ ಮೊದಲ ಸಿನಿಮಾ "ಮಳೆಯಲಿ ಜೊತೆಯಲಿ" ಯಶಸ್ಸೇ ನಮಗೆ "ಕೂಲ್" ನಿಮಾ೯ಣ ಮಾಡಲು ಸ್ಪೂತಿ೯ . ಹಾಗಾಗಿ ವರ್ಷಕ್ಕೆ ಒಂದು ಸಿನಿಮಾದ ಬದಲಾಗಿ ವರ್ಷದೊಳಗೆ ಎರಡನೇ ಸಿನಿಮಾ ನಿಮಿ೯ಸುತ್ತಿದ್ದೇವೆ, ಎನ್ನುತ್ತ ತಮ್ಮ ಗೆಲುವಿನ ನಗೆ ಬೀರುತ್ತಾರೆ. ಮುಸ್ಸಂಜೆ ಮಹೇಶ್ ಸಹ ಗಣೇಶ್ ಬ್ಯಾನರಿನಲ್ಲಿ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತಿದೆ. ಈ ಸಿನಿಮಾದ ಕಥೆಯಂತೆ ಹಾಡುಗಳನ್ನು ಅಷ್ಟೆ ಚೆನ್ನಾಗಿ ಮಾಡುತ್ತಿದ್ದೇವೆ. ಜುಲೈ ಎರಡು ಅಥವಾ ಮೂರನೆ ವಾರ ಚಿತ್ರಕರಣ ಪ್ರಾರಂಭಿಸಲು ಸಿದ್ದತೆ ನಡೆಸಿದ್ದೇವೆ," ಎಂದು ತಮ್ಮ ನಿದೇ೯ ಶನದ ಬಗ್ಗೆ ಹೇಳಿಕೊಂಡರು. ಸಂತಸ ಕೂಟದಲ್ಲಿ ರಾಕ್ ಲ್ಲ್ಯೇನ್ ವೆಂಕಟೇಶ್, ಕೆ. ಮಂಜು, ಲವ್ಲಿಸ್ಟಾರ್ ಪ್ರೇಮ್, ಸೌಂದರ್ಯ ಜಗದೀಶ್ ಮುಂತಾದವರು ಆಗಮಿಸಿ ಗೋಲ್ಡನ್ ಮೂವಿಸ್ ಗೆ ಶುಭ ಹಾರೈಸಿದರು.


Hello ganesh carry on. ninna “cool” sinima bruv besigege tangali tarali