ಮಹಿಳಾ ಪ್ರೇಕ್ಷಕರನ್ನು ಸೆಳೆದ ಡೆಡ್ಲಿ-2
published on Aug.22, 2010, under News
ಡೆಡ್ಲಿ-2ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಪಡ್ಡೆಗಳಿಗೆ ಮಾತ್ರವಲ್ಲದೇ ಮಹಿಳಾ ಪ್ರೇಕ್ಷಕರು ಸಹ ಸುಹಾಸಿನಿಯವರ ನಟನೆ ಕಂಡು ಮೆಚ್ಚಿದ್ದಾರೆ. ಕೆ.ಕೆ. ಪಿಲಂಸ್ ನ ಮಂಜುನಾಥವರಿಗೆ ಈ ಸಿನಿಮಾ ಗೆಲ್ಲುವ ಶುಭಸೂಚನೆ ಸಿಕ್ಕುತ್ತಿದ್ದಂತೆ ಇನ್ನೊಂದು ಸುದ್ದಿ ಅವರ ಆಪ್ತವಲಯದಲ್ಲಿ ತೇಲುತ್ತಿದೆ. ಅವರೀಗ ಎಲ್ಲಾ ಪ್ರೇಕ್ಷಕ ವರ್ಗಕ್ಕೆ ಲಗ್ಗೆ ಹಾಕಲು ‘ಕೋಟೆ" ಕಟ್ಟಳು ಮುಂದಾಗಿದ್ದು. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಅಮೂಲ್ಯಳನ್ನು ಕೋಟೆಯೊಳಗೆ ಸೇರಿಸಿಕೊಳ್ಳಲು ಮಾತುಕತೆ ನಡೆಯುತ್ತಿದೆ. ಶ್ರೀನಿವಾಸ ರಾಜು ನಿದರ್ೇಶಿಸುತ್ತಿರುವ ಈ ಸಿನಿಮಾದ ಕಥಾವಸ್ತು ತ್ರಿಕೋನ ಪ್ರೇಮಕಥೆ. ತೆಲುಗಿನ ಚೆಲುವೆಯೊಬ್ಬಳಿಗೂ ಮಂಜುನಾಥ್ ಆಪರ ನೀಡಿದ್ದಾರೆ. ಆಕ್ಷನ್ ವಿಥ್ ಲವ್ ಸಬ್ಜೆಕ್ಟಿನ ‘ಕೋಟೆ’ ಮತ್ತಷ್ಟು ಮಹಿಳಾ ಪ್ರೇಕ್ಷಕರನ್ನು ಥಿಯೇಟರಿಗೆ ಕರೆತರಲು ‘ಕೋಟೆ’ ಸಜ್ಜಾಗುವುದು ಕೆಲವೆ ದಿನದಲ್ಲಿ ತಿಳಿಯಲಿದೆ.

