Chitra Vaarte

ಮಾಲಾಶ್ರೀ ಎಂದೆಂದಿಗೂ ಸ್ಯಾಂಡಲ್ವುಡ್ನ `ಶಕ್ತಿ’

published on Jan.06, 2012, under News

Malashri-Shatkiನಂಜುಂಡಿ ಕಲ್ಯಾಣದಲ್ಲಿ ದೇವಿ ಯಾಗಿ,  ಪೋಲಿಸ್ ಪಾತ್ರದಲ್ಲಿ ಭಾರ್ಗವಿಯಾಗಿ ನಂತರ ತವರು ಮನೆ ಉಡುಗಡೆ ಸಿನಿಮಾದಲ್ಲಿ ಸಮಸ್ತ ಸ್ತ್ರೀ ಕುಲಕ್ಕೆ ಮಾದರಿ ಹೆಣ್ಣುಮಗಳಾಗಿ  ಮಾಲಾಶ್ರೀ ಬೆಳ್ಳಿತೆರೆಯಲ್ಲಿ ರಾಣಿ ಮಹರಾಣಿ ಯಾಗಿ ದಾಖಲೆ ನಿರ್ಮಿ ಸಿದವರು. ಮಾಲಾಶ್ರೀ ಸಿನಿಮಾವೆಂದರೆ ಮುಗಿಯಿತು ಸಮಸ್ತ ಕನ್ನಡ ಚಿತ್ರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸೇರಿ ಜಾತ್ರೆ ಯನ್ನೆ ನೆನಪಿಸುತ್ತಿದ್ದರು. ಈಗ ಮತ್ತೊಮ್ಮೆ ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬರುತ್ತಿದ್ದು ಸ್ಟಾರ್ ನಟರಿಗೂ ಸಡ್ಡು ಹೊಡೆಯುತ್ತಿದ್ದಾರೆ.

 

ಮಾಲಾಶ್ರೀ ಕೇವಲ ತೆರೆಯಮೇಲೆ ಮಾತ್ರವಲ್ಲ, ನಿರ್ಮಾಣದಲ್ಲಿಯೂ ಇವರಿಗೆ ದೊಡ್ಡ ಶಕ್ತಿ ನಿರ್ಮಾಪಕ ರಾಮು. ರಾಮುರವರು ಪಕ್ಕಾ ಕಮಷರ್ಿಯಲ್ ಚಿತ್ರಮಾಡುವುದರಲ್ಲಿ ಗಾಂಧಿನಗರದಲ್ಲಿಯೇ ದೊಡ್ಡ ಶಕ್ತಿ. ಈಗ ಮತ್ತೊಮ್ಮೆ ತಮ್ಮ ಶಕ್ತಿ ತೋರಿಸಲು ತಮ್ಮ ಪತ್ನಿ, ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದಲ್ಲಿ ದೊಡ್ಡ ಮಟ್ಟದ ಸಿನಿಮಾ ನಿರ್ಮಿಸಿದ್ದಾರೆ. ಭಾರತದ ಬ್ರಷ್ಟಚಾರ ಹೊಡೆದೋಡಿಸಬೇಕಾದರೆ ಸುಭಾಷ್ ಚಂದ್ರ ಬೋಸ್ ಮಾರ್ಗ ಹಿಡಿಯಬೇಕಾಗುತ್ತದೆ. ಅಂತಹ ಕಥೆಯನ್ನು ಹೆಣೆದು ಅನಿಲ್ ಕುಮಾರ್ ಮೊದಲ ಬಾರಿ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಸಂಭಾಷಣೆ ಬರೆಯುತ್ತಿದ್ದ ಅನಿಲ್ ಕೆಂಪೆಗೌಡದಂತಹ ಹಿಟ್ ಸಿನಿಮಾಗಳಲ್ಲಿ ಅಸೋಷಿಯೇಟ್ ಆಗಿ ಕೆಲಸ ಮಾಡಿದ ಅನುಭವವಿದೆ.

 

ಇಂಡಿಯನ್ ಸಿನಿಮಾದಂತೆ ಈ ಕಥೆಯು ಬ್ರಷ್ಟಚಾರದ ವಿರುದ್ಧ ಹೋರಾಡುವ ಈ ಕಾನ್ಸೆಪ್ಟ್ ಈ ಸಿನಿಮಾಕ್ಕಿದೆ. ಥ್ರಿಲರ್ ಮಂಜು ಸಾಹಸ, ಪಂಚಿಂಗ್ ಡೈಲಾಗ್ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಈ ಸಿನಿಮಾ ಯಶಸ್ವಿಯಾಗಲಿದೆ. ಈ ವಾರ ರಾಜ್ಯದಾದ್ಯಂತ ಶಕ್ತಿಗೆ ಉತ್ತಮ ಬೇಡಿಕೆಯಿದ್ದು ದೊಡ್ಡ ಸ್ಟಾರ್ನಟರಿಗೆ ಸಮವಾಗಿ ಬ್ಯುಸಿನೆಸ್ ಆಗಿದೆ ಎಂದು ರಾಮು ತಮ್ಮ ಶಕ್ತಿ ಯ ಬಗೆಗೆ ಹೇಳಿಕೊಳ್ಳುತ್ತಾರೆ. ರಾಜೇಶ್ ಅವರ ಛಾಯಾಗ್ರಹಣವಿರುವ  `ಶಕ್ತಿ’ ಗೆ ಥ್ರಿಲ್ಲರ್ಮಂಜು, ರವಿವರ್ಮ, ರಾಮ್ಲಕ್ಷ್ಮಣ್ ಮತ್ತು ಪಳನಿರಾಜ್ ಅವರ ಸಾಹಸ ನಿರ್ದೇಶನವಿದೆ. ವರ್ಧನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ.  ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...