ಯೋಗೇಶ್ ನ ಆಫಿಶಿಯಲ್ ವೆಬ್ಸೈಟ್ ಒಪನಿಂಗ್
published on Jul.02, 2010, under News
ಯೋಗೇಶ್ ಸಿನಿಮಾ ದುನಿಯಾದಲ್ಲಿ ನಿನ್ನೆ ಮೊನ್ನೆ ಬಂದ ಹುಡುಗನ ಹಾಗೆ ಕಾಣಿಸುತ್ತಾನೆ. ಆದರೆ ಆತನ ಪ್ರೊಪೈಲ್ ದೊಡ್ಡದಾಗುತ್ತಿದೆ ಎಂಬುದಕ್ಕೆ ಇಂದು ಅವನ ವೆಬ್ಸೈಟ್ ಸಾಕ್ಷಿಯಾಗುತ್ತಿದೆ. ಈಗಾಗಲೇ ಈತನ ಬಿಡುಗಡೆಯಾದ ಮತ್ತು ಬಿಡುಗಡೆಗೆ ಕಾದಿರುವ ಒಟ್ಟು ಸಿನಿಮಾಗಳ ಸಂಖ್ಯೆ 14. ಕಳೆದ ಎರಡು ವರ್ಷಗಳಲ್ಲಿ ಈ ಎಲ್ಲ ಸಾಧನೆ ಈ ಪೋರ ಮಾಡಿದನೆಂದರೆ ಹುಬ್ಬೇರಿಸುವ ಸಂಗತಿಯೆ. ಹಾಗೇ ಮತ್ತೊಂದು ಈ ಹುಡುಗನ ಸಾಧನೆಯೇನೆಂದರೆ ಆತನ ಜನ್ಮ ದಿನವಾದ ಜುಲೈ 6 ರಂದು ಆತನ ಆಫಿಶಿಯಲ್ ವೆಬ್ಸೈಟ್ ಒಪನಿಂಗ್ ಆಗುತ್ತಿರುವುದು.
ಈಗಾಗಲೇ ದೇವದಾಸ್, ದೂಳ್, ಪಡ್ಡೆಹುಡುಗ ಈ ಮುಂತಾದ ಸಿನಿಮಾಗಳೊಂದಿಗೆ ಭಾರಿ ನಿರೀಕ್ಷೆಯ ಹೋಮ್ ಬ್ಯಾನರ್ ಸಿನಿಮಾವಾದ "ಯಕ್ಷ" ಕೂಡ ರೆಡಿಯಾಗುತ್ತಿದೆ. ನಾನಾ ಪಾಟೇಕರ್, ಅತುಲ್ ಕುಲಕಣಿ೯ ಯಂತಹ ಘಟಾನುಘಟಿಗಳು ಬಂದು ಅಭಿನಯಿಸಿದ "ಯಕ್ಷ" ಸಿನಿಮಾ ಬಿಡುಗಡೆಗೆ ಮುನ್ನವೇ ಬಾಲಿವುಡ್ ರೇಂಜಿಗೆ ಯೋಗೇಶ್ ನ ಪೂರ್ಣ ಪ್ರೊಪೈಲ್ ಹೊಂದಿರುವ( yogisamy.com ) ವೆಬ್ಸೈಟ್ ರಚನೆಯಾಗಿದೆ. ಹಾಗಾಗಿ ಯೋಗೇಶ್ ರಾಜ್ಯವಲ್ಲದೇ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರಿಗೆ ತಲುಪಲು ಈ ವೆಬ್ಸೈಟ್ ಸಹಾಯವಾಗಿದೆಯಲ್ಲದೇ ಅವನ ಅಭಿನಯ ಮತ್ತು ಸಿನಿಮಾ ಬಗ್ಗೆ ಕಮೆಂಟ್ ಕೂಡ ಕಳಿಸಲು ಅನಕೂಲವಾಗುವಂತೆ ಈ ವೆಬ್ ಜಾಲ ರಚನೆಯಾಗಿದೆ.
"ದುನಿಯಾ" ಮೂಲಕ ಯೋಗೇಶ್ ಕನ್ನಡ ಚಿತ್ರರಂಗಕ್ಕೆ ಬಂದ ಕುಡಿ. ಈತ ಬೆಳೆಯಲು ಹಿಂದೆ ಅವರ ತಂದೆ ಟಿ.ಪಿ.ಸಿದ್ದರಾಜುರವರ ಪಾತ್ರ ದೊಡ್ಡದಿದೆ. ಮೂಲತಃ ಲಾಯರ್ ಆದ ಸಿದ್ದರಾಜುರವರು ಮಗ ಯೋಗೇಶ್ ಏಳ್ಗೆಗೆ ಇವರು ಕಂಡುಕೊಂಡ ಮಾರ್ಗವೆಂದರೆ ಪ್ರೊಪೆಷನಲಿಸಂ. ದುನಿಯಾ ದ ಗೆಲುವು ಸಿಕ್ಕರು ದುಡುಕದೇ ನಾಲ್ಕು ವರ್ಷದ ನಂತರ ತಮ್ಮ ಸ್ಯಾಮಿ ಅಸೋಷಿಯೇಟ್ಸ್ ಬ್ಯಾನರನಲ್ಲಿ ತಯಾರಿಸಿದ ಸಿನಿಮಾ "ಯಕ್ಷ". ಜುಲೈ ಎರಡನೆ ವಾರ ಆಡಿಯೋ ಬಿಡುಗಡೆಯಾಗುವ ಇದರ ರಿಮಿಕ್ಸಿಂಗ್ ಕೆಲಸ ಲಂಡನ್ ನಲ್ಲಿ ನಡೆದಿದೆ. ಈ ಮುನ್ನ ರೆಹಮಾನ್ ನಂತಹ ಸಂಗೀತ ನಿದರ್ೇಶಕರಂತವರು ಈ ಸ್ಟುಡಿಯೋದಲ್ಲಿ ಕೆಲಸ ಮಾಡಿಸಿದ್ದಾರೆ. ಹಾಗೇ ಲಗಾನ್, ಕಮಿನೇ ಈ ಮುಂತಾದ ಸಿನಿಮಾಗಳ ರೇಂಜಿಗೆ ಯಕ್ಷನ ಸಂಗೀತ ಕಾರ್ಯ ನಡೆಯುತ್ತಿದ್ದು ಕನ್ನಡ ಚಿತ್ರರಂಗದ ದುನಿಯಾದಲ್ಲಿ ಯಕ್ಷನ ಪವಾಡ ಏನುಮಾಡುತ್ತದೆ ಎಂಬುದರ ಬಗ್ಗೆ ಪ್ರೇಕ್ಷಕ ಕೂಡ ಕುತೂಹಲದಿಂದ ಕಾಯುವಂತೆ ಮಾಡಿರುವುಸು ದಿಟ.

