Chitra Vaarte

ರಾಮ್ ಗೆ ಜೊತೆಯಾದ ಪ್ರೇಮ್

published on Aug.22, 2010, under News

ಇದು ಜೋಗಿಯಿಂದ ಜೊತೆಗಾರ ನವರೆಗಿನ ಕಥೆ. ರಾಮ್   ಪ್ರಸಾದ್  ಮತ್ತು ಪ್ರೇಮ್ ಜೋಡಿ ‘ಜೋಗಿ’ಯಲ್ಲಿ ಕರಾಮತ್ತನ್ನೇ ಸೃಷ್ಟಿಸಿದ್ದರು. ಆ ಜೋಗಿ ಬ್ರಾಂಡ್ ಇಂದು ತಮಿಳು ತೆಲುಗಿನ ಸೂಪರ್ ಸ್ಟಾರ್ಸ್ ಗಳೆಲ್ಲ ಜೋಗಯ್ಯ ಮುಹೂರ್ತ ಕ್ಕೆ ಬಂದಿದ್ದು ಸಾಕ್ಷಿ. ಆದರೆ ಮೊದಲ ಜೋಗಿ  ದಣಿಯ ಜೊತೆಗಾರ ಸಿನಿಮಾ ತೆರೆಗೆ ತರದಷ್ಟು ಕಷ್ಟದಲ್ಲಿದ್ದರು. ಇಂತಹ ಸಮಯದಲ್ಲಿ ದಣಿಗೆ ಜೊತೆಗಾರ ನಾಗಿ ಪ್ರೇಮ್ ಬಂದಿದ್ದಾನೆ.

 

ಜೊತೆಗಾರ ಲವ್ಲಿಸ್ಟಾರ್ ಪ್ರೇಮ್ ಮತ್ತು ರಮ್ಯ ಅಭಿನಯಿಸಿದ ಚಿತ್ರ. ಈ  ನಿರ್ಮಾಣ  ಗೊಂಡು ತೆರೆಗೆ ಬರುವ ಹೊತ್ತಿಗೆ ರಾಮಪ್ರಸಾದ್ ರವರ ಜೊತೆಗಾರರಾಗಿ ಯಾರು ಇರಲಿಲ್ಲ. ಕಿತ್ತಾಟ,ಜಗಳ ಎಲ್ಲಕ್ಕಿಂತ ಮುಖ್ಯವಾಗಿ ಹಣಕಾಸಿನ ತೊಂದರೆ. ಇನ್ನೇನು ಜೊತೆಗಾರರೆಲ್ಲ ಕೈಬಿಟ್ಟರೆಲ್ಲ ರಾಮ.. ರಾಮ.. ಎನ್ನುವಾಗ ಹ್ಯಾಟ್ರಿಕ್ ನಿದೇ ಶಕ ಪ್ರೇಮ್ ಜೊತೆಗಾರ ಸಿನಿಮಾದಲ್ಲಿ ನಾಯಕನ ಇಂಟರ್ಡಕ್ಷನ್ ಹಾಡಿನ ಚಿತ್ರೀಕರಣ ರಾಕ್ಲೈನ್ ಸ್ಟುಡಿಯೋದಲ್ಲಿ ನಡೆಯಿತು.  ಲವ್ಲಿ ಪ್ರೇಮ್ಗೆ ಜೊತೆಯಾಗಿ ಜೋಗಿ ಖ್ಯಾತಿಯ ಜನಿಫರ್ ಕೊತ್ವಾಲ್ ಕುಣಿದಿದ್ದಾಳೆ.

 

ಈಗ ನಿರ್ಮಾಣದ ಮುತುರ್ವಜಿವಹಿಸುತ್ತಿದ್ದವರು ಕೃಷ್ಣ ಪ್ರಸಾದ್.   ಎಲ್ಲವೂ ಅಂದುಕೊಂಡ ಹಾಗೇ ನಡೆದರೆ ಸೆಪ್ಟೆಂಬರ್ ಮೊದಲವಾರ ಮುಗಿಯುತ್ತಿದ್ದಂತೆ ಬಿಡುಗಡೆ ಮಾಡಲು ರಾಮ್ ಟೀಮ್ ಯೋಚಿಸಿದ್ದಾರೆ. ಪ್ರೇಕ್ಷಕರಿಗೆ ಗಣೇಶ್ ಹಬ್ಬದ ಸಮಯದಲ್ಲಿ ಪ್ರೇಮ್-ರಮ್ಯ ಜೊತೆಗೆ ಜನಿಫರ್ ಕುಣಿತ ನೋಡುವ ಭಾಗ್ಯ. ಅಂತೂ ರಾಮ್-ಪ್ರೇಮ್ ಜೋಡಿ ಮೋಡಿ ಏನಾಗುತ್ತದೆ ಎಂಬುದಕ್ಕೆ ಚಿತ್ರ ಬಿಡುಗಡೆಯಾಗಬೇಕು.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...