Chitra Vaarte

ಶಾಲೆಶಾಲೆಗಳಲ್ಲಿ ಅಪ್ಪು-ಪಪ್ಪು

published on Jun.14, 2010, under News

AppuPappu ಅಪ್ಪು ಪಪ್ಪು ನಿಮಾ೯ಪಕ ಸೌಂದಯ೯ ಜಗದೀಶ್ ಚಿತ್ರದ ಪ್ರಚಾರಕ್ಕಾಗಿ ಹೊಸ   ಸಂಯೋಜನೆಯನ್ನು ಕೈಗೊಂಡಿದ್ದಾರೆ.  ಮಾಸ್ಟರ್ ಸ್ನೇಹಿತ್ ಹಾಗೂ ಕಾಂಬೋಡಿಯಾದ ಒರಾಂಗಟನ್ ಎಂಬ ಚಿಂಪಾಂಜಿಯ ಸಾಹಸದ ಕಥೆ ಹೊಂದಿರುವ ಅಪ್ಪು – ಪಪ್ಪು ಚಿತ್ರದ ಡಬ್ಬಿಂಗ್, ರೀ ರೆಕಾಡಿ೯೦ಗ್ ಹಾಗೂ ಡಿ.ಟಿ.ಎಸ್. ಕಾ ಯ೯ ಪೂರ್ಣಗೊಂಡಿದ್ದು, ವಾರಾಂತ್ಯದಲ್ಲಿ ಚಿತ್ರದ ಪ್ರಥಮ ಪ್ರತಿ ಕೂಡ ಹೊರ ಬರಲಿದೆ. ಈಗ ಮಕ್ಕಳಿಗೆ ಶಾಲೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ ಪ್ರತಿ ಶಾಲೆಗಳಿಗೂ ತೆರಳಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪುಸ್ತಕದ ಮೇಲೆ ಹಚ್ಚುವ ಲೇಬಲ್ ಗಳನ್ನು ಉಚಿತವಾಗಿ ಹಂಚಿದ್ದಾರೆ. ಅಲ್ಲದೆ, ಬಡ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಕೂಡ ವಿತರಿಸಿದ್ದಾರೆ. ಇದರಿಂದ, ಮಕ್ಕಳಿಗೆ ಸಹಾಯ ಮಾಡುವುದರ ಜೊತೆಗೆ ಚಿತ್ರದ ಪ್ರಚಾರಕ್ಕೂ ಒಂದು ರೀತಿ ಸಹಕಾರಿಯಾಗಲಿದೆ. ಮತ್ತೊಂದು ವಿಶೇಷವೇನೆಂದರೆ, ರಾಷ್ಟ್ರದ ಹೆಸರಾಂತ ಗಾಯಕರೊಬ್ಬರು ಈ ಚಿತ್ರಕ್ಕೆ ಒಂದು ಹಾಡನ್ನು ಹಾಡಲಿದ್ದಾರೆ. ಹಾಡಿನ ಚಿತ್ರೀಕರಣ ಕೂಡ ಮುಗಿದಿದ್ದು, ರೀ ರೆಕಾಡಿ೯೦ಗ್  ನಂತರ ಅದನ್ನು ಚಿತ್ರಕ್ಕೆ ಅಳವಡಿಸಲಾಗುವುದು. ಆ ಗಾಯಕಿ ಯಾರೆಂಬುದನ್ನು ನಿಮಾ೯ಪಕ ಸೌಂದಯ೯  ಜಗದೀಶ್ ಇನ್ನೂ ಸಸ್ಪೆನ್ಸ್ ಆಗಿಯೆ ಇಟ್ಟಿದ್ದಾರೆ. ಆರ್. ಅನಂತರಾಜು ಕಥೆ ಚಿತ್ರಕಥೆ – ಸಂಭಾಷಣೆ ಬರೆದು ನಿದೇ೯ಶನ ಮಾಡಿದ್ದು, ಹಂಸಲೇಖರ ಸಾಹಿತ್ಯ-ಸಂಗೀತ, ಎಸ್. ಕೃಷ್ಣರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೋಮಲ್ ಅಬ್ಬಾಸ್, ರೇಖಾ, ರಂಗಾಯಣ ರಘು, ಜನೀಫರ್ ಪ್ರಮುಖ ತಾರಾಗಣದಲ್ಲಿದ್ದಾರೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...