`ಸಿದ್ಲಿಂಗು’ ಬಿಡುಗಡೆ ಸಿದ್ದತೆಯಲ್ಲಿ ಸಿದ್ದರಾಜು.
published on Dec.29, 2011, under News
ನೀವು ದುನಿಯಾ ಸಿನಿಮಾದ ನಂತರ ವಿಜಯ್,ಯೋಗೇಶ್ ಮತ್ತು ಸೂರಿಯನ್ನು ಸುಲಭವಾಗಿ ಗುರುತಿಸುತ್ತೀರಿ. ಈ ಮೂವರು ಮೇನ್ ಪಾರ್ಮಗೆ ಬರಲು ಹಗಲಿರುಳು ದುಡಿದ ನಿರ್ಮಾಪಕರು ಯಾರಿಗೂ ನೆನಪಿರುವುದಿಲ್ಲ. ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಿಂದಲೂ ಸಿನಿಮಾಕ್ಕೆ ಹಣ ಹೂಡುವವನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಕಾರಣ ಚಿತ್ರರಂಗದ ಅಸ್ತಿತ್ವವೇ ನಿರ್ಮಾಪಕ. ಯಾರೂ ಸುಮ್ಮ ಸುಮ್ಮ ನೆ ಸಿನಿಮಾ ಮಾಡುವುದಿಲ್ಲ. ಉತ್ತಮ ಚಿತ್ರ ನಿರ್ಮಿಸಿ, ಜನರನ್ನು ಮೆಚ್ಚಿಸಿ, ಹಾಗೇ ಹಾಕಿದ ಬಂಡವಾಳಕ್ಕೆ ಲಾಭ ಪಡೆಯುವುದೇ ನಿರ್ಮಾಪಕನ ನಿಜವಾದ ಕನಸಾಗಿರುತ್ತದೆ.
ಈ ಎಲ್ಲ ಗುಣಗಳನ್ನು ಹೊಂದಿರುವ, ಚಿತ್ರರಂಗದಲ್ಲಿಯೇ ಸಜ್ಜನ ನಿರ್ಮಾ ಪಕ ಎಂದು ರಮ್ಯಳಂತಹ ಬಹುಭಾಷೆಯ ನಟಿಯೇ ಹೇಳುವ, ಅಷ್ಟೆ ಪ್ರೊಪೆಷನಲ್ ಎಂದು ತಮ್ಮ ಸಿನಿಮಾದ ನಿರ್ದೇಶಕ ವಿಜಯ ಪ್ರಸಾದ್ ಕೊಂಡಾಡುವ ವ್ಯಕ್ತಿತ್ವ ಹೊಂದಿದವರೇ ಟಿ.ಪಿ.ಸಿದ್ದರಾಜು.
ಸ್ಯಾಮಿ ಅಸೋಸಿಯೋಟ್ಸ್ ಲಾಂಛನದಲ್ಲಿ ದುನಿಯಾ, ಯಕ್ಷ, ಈಗ ಸಿದ್ಲಿಂಗು ನಿರ್ಮಿಸಿರುವ ಟಿ.ಪಿ.ಸಿದ್ದರಾಜು ಮೂಲತಃ ಲಾಯರ್. ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು, ಮೊದಲಿನಿಂದಲೂ ನಾಟಕ,ಸಿನಿಮಾದಲ್ಲಿಯೇ ಆಸಕ್ತಿ ಹೊಂದಿರುವ ಸಿದ್ದರಾಜು ತಮ್ಮ ಪತ್ನಿಯ ತಮ್ಮ ವಿಜಯ್ ಒತ್ತಾಸೆಗೆ ಚಿತ್ರರಂಗಕ್ಕೆ ಬಂದರು. ಕಷ್ಟಪಟ್ಟು ದುನಿಯಾ ನಿರ್ಮಿ ಸಿ, ಸೂರಿ,ಯೋಗಿ,ವಿಜಿ ಪ್ರತಿಭೆಯನ್ನು ಚಿತ್ರರಂಗದಲ್ಲಿ ತೋರಿಸಿ, ಆ ಸಿನಿಮಾದಿಂದಲೇ ಸುಮಾರು 20 ಕೋಟಿ ಹಣ ಬಾಚಿದ ಯಶಸ್ವಿ ನಿರ್ಮಾಪಕರಲ್ಲಿ ಟಿ.ಪಿ.ಸಿದ್ದರಾಜು ಒಬ್ಬರು. ಇಂತಹ ಅನುಭವ ಹೊಂದಿಯೂ ನಾನಾ ಪಾಟೇಕರ್ ನಂತಹ ನಟರನ್ನು ತಂದು ಯಕ್ಷ ನಿರ್ಮಿ ಸಿ ಸ್ವಲ್ಪವು ಹಣ ತಂದುಕೊಡದಿದ್ದರು ಇವರ ಸಿನಿಮಾ ಪ್ರೀತಿ ಕಡೆಮೆಯಾಗಿಲ್ಲ. ಮೊದಲು ಟಿ.ವಿ.ನಿರ್ದೇಶನ ಮಾಡುತ್ತಿದ್ದ ವಿಜಯ್ ಪ್ರಸಾದ್ ನಿರ್ದೇ ಶನದಲ್ಲಿ ಸಿದ್ಲಿಂಗು ನಿರ್ಮಿ ಸಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಮಗ ಯೋಗೇಶ್, ರಮ್ಯ ಹಾಗೂ ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ.
`ಸಿದ್ಲಿಂಗು’ ತುಂಬ ಚೆನ್ನಾಗಿ ಮೂಡಿಬಂದಿರುವುದರಿಂದ ಸ್ವತಃ ಸಿದ್ದಾರಾಜುರವರೇ ಸ್ಯಾಮಿ ಪಿಲಂಸ್ ಮೂಲಕ ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೆ ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದ್ದು ಜನವರಿ ಮೊದಲ ವಾರದಲ್ಲಿಯೇ ಬಿಡುಗಡೆ ಮಾಡಲು ತುಂಬ ಬ್ಯುಸಿಯಾಗಿ ಓಡಾಡುತ್ತಿದ್ದಾರೆ. ಈಗಾಗಲೇ ಉತ್ತಮ ಬೆಲೆಗೆ ಟಿ.ವಿ.ಹಕ್ಕು ಪಡೆಯುವಲ್ಲಿ ಯಶಸ್ವಿಯಾಗುತ್ತಿರುವ ಸಿದ್ಲಿಂಗು ತನ್ನ ಬ್ಯಾನರ್ಗೆ ಇನ್ನೊಂದು ಸಕ್ಸಸ್ ಸಿನಿಮಾವಾಗಲಿದೆ ಎಂದು ತಮ್ಮ ಹೊಸ ಸಿನಿಮಾದ ಬಗ್ಗೆ ಹೇಳಿಕೊಳ್ಳುತ್ತಾರೆ. ಉತ್ತಮ ಚಿತ್ರ ನಿರ್ಮಿಸಿದಾಗ ನಮ್ಮ ಜನರು ಎಂದು ಕೈಬಿಡುವುದಿಲ್ಲ ಎಂಬ ಭರವಸೆಯಲ್ಲಿ ಸಿದ್ಲಿಂಗು ತಂಡ ಸಿನಿಮಾ ಪ್ರಚಾರಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಡಿಫéರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಉದಯ ಹೆಗಡೆ ಸಂಕಲನ `ಸಿದ್ಲಿಂಗು’ ಚಿತ್ರಕ್ಕಿದೆ.