ಸಿನಿಮಾ ಎಷ್ಟೊಂದು ಪ್ರಭಾವಿ ಮಾಧ್ಯಮವೆಂದು "ಫೃಥ್ವಿ" ಮತ್ತೊಮ್ಮೆ ಸಾಭಿತು
published on May.02, 2010, under News
ಮಾಜಿ ಪ್ರಧಾನಿ ಎಚ್.ಡಿ.ದೇವೆ ಗೌಡ "ಪೃಥ್ವಿ" ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ. ಬಳ್ಳಾರಿಯ ಗಣಿ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ ಈ ಸಿನಿಮಾ ಗೌಡರಿಗೆ ಸಂಸತ್ತಿನಲ್ಲಿ ಗಣಿ ವಿಷಯದ ಬಗ್ಗೆ ಚಚಿ೯ಸಲು ಪ್ರೇರೇಪಣೆ ನೀಡುವಷ್ಟು "ಪೃಥ್ವಿ" ಗೆದ್ದಿದೆ. ಈಗಾಗಲೇ ನೂರಕ್ಕು ಹೆಚ್ಚು ಥಿಯೇಟರ್ ಗಳಲ್ಲಿ ಓಡುತ್ತಿರುವ ಈ ಸಿನಿಮಾ "ಮೊದಲ ಬಾರಿ ಡಿಸಿ ಪಾತ್ರದಲ್ಲಿ ಪುನೀತ್ ಕಾಣಿಸಿಕೊಳ್ಳುತ್ತಿರುವುದು ಇದರ ಪ್ರಮುಖ ಆಕಷ೯ಣೆ. ನಗರದ ರೇಣುಕಾಂಬ ಥಿಯೇಟರ್ ನಲ್ಲಿ ಗೌಡರಿಗಾಗಿಯೇ ವಿಶೇಷವಾಗಿ ಎಪ೯ಡಿಸಿದ ಪ್ರದಶ೯ನದಲ್ಲಿ ಅವರು ಪಾಲ್ಗೊಂಡು "ಪೃಥ್ವಿ" ಥೀಮ್, ಪುನೀತ್ ರವರ ಅಭಿನಯ, ಸ್ಟಂಟ್, ಚಿತ್ರದ ನಿಜವಾದ ವಾಸ್ತವತೆ ಗೆ ಮೆಚ್ಚಿ ಗೌಡರು ಬೇಷ್ ಎಂದಿದ್ದಾರೆ. ಅಲ್ಲದೇ ಎಲ್ಲಾ ಸಕಾ೯ರಿ ಹಿರಿ-ಕಿರಿಯ ಅಧಿಕಾರಿಗಳು ಹಾಗೂ ಯುವ ಜನಾಂಗ ಚಿತ್ರ ನೋಡಬೇಕೆಂದು ಆಶಿಸಿದ್ದಾರೆ.
ಕಳೆದ ಐದು ವಷ೯ಗಳಿಂದ ಸಿನಿಮಾಗಳನ್ನು ನೋಡಿರದ ದೇವೆ ಗೌಡರನ್ನು "ಪೃಥ್ವಿ" ಚಿತ್ರಮಂದಿರದತ್ತ ಅವರನ್ನು ಕರೆತಂದಿದೆ. ಈ ಮೊದಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿಮಿ೯ಸಿದ ಚಂದ್ರ ಚಕೋರಿ,"ಸೂರ್ಯವಂಶ" ಸಿನಿಮಾಗಳನ್ನು ಥಿಯೇಟರ್ ಗೆ ಬಂದು ಗೌಡರು ನೋಡಿದ್ದರು. ಅಲ್ಲದೇ ಈಗ ಕುಮಾರಸ್ವಾಮಿಯೇ "ಪೃಥ್ವಿ" ಸಿನಿಮಾದ ನಿಜವಾದ ನಿಮಾ೯ಪಕರಿರಬೇಕೆಂದು ಗಾಂಧಿನಗರದಲ್ಲಿ ಗುಲ್ಲೇದ್ದಿದೆ.

