Chitra Vaarte

ಸೆನ್ಸಾರ್ ಮೆಚ್ಚಿದ “ಪ್ರೇಮ್ ಕಹಾನಿ”

published on Aug.05, 2009, under News

PremKahani02

ಕೊನೆಗೂ ಆರ್.ಚಂದ್ರು ಒಂದು ಉತ್ತಮ ಸಿನಿಮಾ ನೀಡುವ ಮೂಲಕ ಸೆನ್ಸಾರ್ ಮಂಡಳಿಯವರ ಮನಸ್ಸನ್ನು ಗೆದ್ದಿದ್ದಾರೆ. ಅಂದರೆ ಪ್ರೇಮ್ ಕಹಾನಿಗೆ ‘U’ ಸಟಿ೯ಪಿಕೆಟ್ ಸಿಕ್ಕಿದೆ.ಹಾಗಾಗಿ ಚಂದ್ರುರವರ ಎರಡನೇ ಸಿನಿಮಾವನ್ನು ಯಾವುದೇ ಸಂಕೋಚವಿಲ್ಲದೆ ಮನೆಮಂದಿಯೆಲ್ಲ ಕುಳಿತು ನೋಡಲು ಆಹ್ವಾನವಿದ್ದಂತೆ. ಈಗಾಗಲೇ ಪ್ರೇಮ್ ಕಹಾನಿ ತೆರೆಗೆ ಬರಬೇಕಿತ್ತು. ರಾಜ್ ಅಬ್ಬರದಿಂದಾಗಿ ಸ್ವಲ್ಪ ಲೇಟಾಗಲು ಕಾರಣವಾಗಿದೆ.

 

"ನಮ್ಮ ಸಿನಿಮಾ(ಪ್ರೇಮ್ ಕಹಾನಿ) ಚೆನ್ನಾಗಿ ಓಡುತ್ತೆ ಎನ್ನುವ ಭರವಸೆ ನನಗಿದೆ. ಆದರೆ ರಾಜ್ ಗೆ ಪ್ಯೆಪೋಟಿ ನೀಡುತ್ತೆ ಅನ್ನುವುದು ಸುಳ್ಳು. ಕೆಲವರು ರಾಜ್ ಮತ್ತು ಪ್ರೇಮ್ ಕಹಾನಿ ಒಂದೇ ದಿನ ಬಿಡುಗಡೆಯಾಗುತ್ತೆ ಎಂದು ಸುದ್ದಿ ಹಬ್ಬಿಸಿದರು. ಅದು ಹೇಗೆ ಸಾಧ್ಯ? ನಾನು ಕೂಡ ಅಪ್ಪು ಅವರ ಫ್ಯಾನ್. ಅವರ ಸಿನಿಮಾ ಮೊದಲು ಬರಲಿ. ನಂತರ ಈ ತಿಂಗಳ ಕೊನೆ ಆಥವಾ ಸೆಪ್ಟೆಂಬರ್ ಮೊದಲ ವಾರ ನಮ್ಮ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲದಕ್ಕೂ ಸೆನ್ಸಾರ್ ಮಂಡಳಿ ಯಾವುದೇ ಕಟ್ ಎನ್ನದೆ ಯು ಸಟಿ೯ಪಿಕೆಟ್ ನೀಡಿದ್ದು ಖುಷಿನೀಡಿದೆ" ಎನ್ನುತ್ತಾರೆ ಫ್ರೇಮ್ ಕಹಾನಿ ನಿದೇ೯ಶಕರಾದ ಆರ್. ಚಂದ್ರು.

 

ಶ್ರೀ ಲಕ್ಷ್ಮೀ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಎಂ. ವಿಶ್ವನಾಥ್, ಜಿ.ರವಿಕುಮಾರ್ ಕೂಡಿ ನಿರ್ಮಿಸಿದ ಈ ಚಿತ್ರದ ಛಾಯಾಗ್ರಹಣ ಮಾಡಿದವರು ಚಂದ್ರಶೇಖರ್, ಸಂಗೀತ – ಇಳಯರಾಜ, ಸಂಕಲನ – ಕೆ.ಎಂ. ಪ್ರಕಾಶ್, ಸಾಹಸ – ರವಿವರ್ಮ, ಕಲೆ – ಹೊಸ್ಮನೆ – ಮೂರ್ತಿ, ನೃತ್ಯ – ರಾಮು, ಮದನ್ ಹರಿಣಿ, ರಘು, ಇಮ್ರಾನ್, ಹರ್ಷ, ಸಾಹಿತ್ಯ – ಕೆ.ಕಲ್ಯಾಣ್, ಡಾ||ನಾಗೇಂದ್ರ ಪ್ರಸಾದ್, ಕವಿರಾಜ್, ಕಾಯ೯ಕಾರಿ ನಿಮಾ೯ಪಕರಾಗಿ ಭೀಮನ ಗೌಡ ಹಾಗೂ ನಿರ್ಮಾಣ ವಿನ್ಯಾಸ ಪ್ರತಿಭಾ ಸಂಶಿಮಠ ನಡೆಸಿ ಕೊಟ್ಟಿದ್ದಾರೆ.

 

ತಾರಾಗಣದಲ್ಲಿ ಅಜಯ್, ಶೀಲಾ, ರಂಗಾಯಣ ರಘು, ರಾಜೇಶ್, ಸುಧಾ ಬೆಳವಾಡಿ,  ಲೋಕನಾಥ್, ಮೈಕೋ ನಾಗರಾಜ್ ಹಾಗೂ ಟೆನ್ನಿಸ್ಕೃಷ ಅಭಿನಯಿಸಿದ್ದಾರೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...