ಹಾಗೇ ಸುಮ್ಮನೆ ಕುಳಿತಿಲ್ಲ ಪ್ರೀತಂ
published on Apr.30, 2009, under News
"ಹಾಗೆ ಸುಮ್ಮನೆ’ ಪ್ರೀತಂ ಗುಬ್ಬಿ ಕುಳಿತಿಲ್ಲ. ಮುಂಗಾರು ಮಳೆ ಕತೆಯಿಂದ ಬಹು ಜನಪ್ರೀಯವಾಗಿದ್ದು ನಂತರ ತಮ್ಮ ಮೊದಲ ಸಿನಿಮಾ ನಿರ್ದೇಶನ ಅನುಭವವಾಗಿದೆ. ಈಗ ಗಣೇಶ್ ಕಾಂಬಿನೇಷನೊಂದಿಗೆ ತಮ್ಮ ಎರಡನೇ ನಿರ್ದೇಶನದ ಚಿತ್ರಕ್ಕೆ ರೆಡಿಯಾಗಿದ್ದಾರೆ. ಗಣೇಶ್ ಜೊತೆಗೆ ಎರಡು ನಾಯಕಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಗೆಲುವು, ಹೆಸರು ಎಲ್ಲವನ್ನು ತಂದುಕೊಟ್ಟ ಮುಂಗಾರು ಮಳೆ ಟೀಮ್‌ನ್ನೇ ಪ್ರೀತಂ ಇಲ್ಲಿ ದುಡಿಸಿಕೊಳ್ಳುವವರಿದ್ದಾರೆ. ಛಾಯಾಗ್ರಾಹಕರಾಗಿ ಎಸ್.ಕೃಷ್ಣ, ಗೀತೆ ರಚನೆಗೆ ಜಯಂತ್ ಕಾಯ್ಕಿಣಿ ಹಾಗೂ ಹರ್ಷರನ್ನು ನೃತ್ಯ ನಿರ್ದೇಶಕರನ್ನಾಗಿ ನೆಮಿಸಿದ್ದಾರೆ. ಸಂಗೀತ ನಿರ್ದೇಶನವನ್ನು ವಿ.ಹರಿಕೃಷ್ಣ ಹಾಗೂ ಸಂಕಲನಕ್ಕೆ ದೀಪು ಎಸ್ ರವರನ್ನು ಗೊತ್ತುಪಡಿಸಿದ್ದಾರೆ.
ಈ ಸಿನಿಮಾವನ್ನು ಯಶೋಸಾಗರ್ ನಿರ್ಮಿಸಲು ಒಪ್ಪಿಕೊಂಡಿದ್ದಾರೆ. ಇವರು ತೆಲುಗಿನ "ಉಲ್ಲಾಸಂಗ್ ಉತ್ಸಾಹಂಗ" ಗಳಂತಹ ಸಿನಿಮಾ ನೀಡಿ ಪ್ರಸಿದ್ದರಾದವರು. ಎಲ್ಲವು ಅಂದುಕೊಂಡಂತೆ ನೆಡೆದರೆ ಜುಲೈನಲ್ಲಿ ಈ ಸಿನಿಮಾ ಆರಂಭವಾಗಲಿದೆ.


hello
pritham i have one different story please help me,daaaaaaaaa