ಹೇಂಡ್ತೀರ್ ದಬಾ೯ರ್ – ಪ್ಯಾಮಿಲಿ ಬಜೆಟ್
published on Jul.10, 2010, under News
ಪಕ್ಕಾ ಪ್ಯಾಮಿಲಿ ಎಂಟರಟೇನ್ಮೆಂಟ್ ಸಿನಿಮಾ "ಹೇಂಡ್ತೀರ್ ದಬಾ೯ರ್". ಮಿಡ್ಲಕ್ಲಾಸ್ ಪ್ಯಾಮಿಲಿಯಲ್ಲಿ ದಿನನಿತ್ಯ ನಡೆಯುವ ಸಂಸಾರದ ತಾಪತ್ರಯೇ ಸಿನಿಮಾದ ಕಥಾವಸ್ತು. ತಮಿಳಿನ ರಿಮೇಕ್ ಸಿನಿಮಾವಾದ ಇದು ಸಂಸಾರದಲ್ಲಿ ಪ್ರೀತಿಯ ಗುಟ್ಟೇನು ಹೇಳಲು ಹೊರಟಿದ್ದು, ರಮೇಶ=ಮೀನಾ ಜೋಡಿಯನ್ನು ಮೊದಲಬಾರಿ ತೆರೆ ಮೇಲೆ ನೋಡಿ ಪ್ರೇಕ್ಷಕ ಇಷ್ಟಪಡುತ್ತಿದ್ದಾನೆ.
ತಮಿಳಿನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಾರಣ ಮಿಡ್ಲಕ್ಲಾಸ್ ಪ್ಯಾಮಿಲಿ ಹೆಚ್ಚಿರುವ ನಮ್ಮ ದೇಶದಲ್ಲಿ ತಮ್ಮ ತಾಪತ್ರಯೇಗಳೆ ಸಿನಿಮಾಪರದೆಯ ಮೇಲೆ ಬಂದಾಗ ಕುತೂಹಲದಿಂದ ನೋಡುವುದು ಸ್ವಾಭಾವಿಕ. ಹಾಗಾಗಿಯೇ ನಿಮಾ೯ಪಕ ಜಿ,ಆರ್.ರಾಮಚಂದ್ರರವರು ತಮ್ಮ ಮೊದಲ ನಿಮರ್ಾಣದ ಕನ್ನಡ ಸಿನಿಮಾಕ್ಕಾಗಿ ವರವು ಎತ್ತಣ ಸೆಲವು ಪತ್ತಣ ವನ್ನು ಆಯ್ಕೆ ಮಾಡಿಕೊಂಡದ್ದು. ಶಿವರಾಮ(ರಮೇಶ್) ರಾಧಾ(ಮೀನಾ)ರಿಬ್ಬರ ಬದುಕು ನಮ್ಮ ನಿಮ್ಮ ಮನೆಯಲ್ಲಿ ನಡೆಯುವಂತೆ ತೋರುತ್ತದೆ. ಕಡಿಮೆ ಸಂಬಳದಲ್ಲಿಯೇ ಉನ್ನತ ಬದುಕನ್ನು ನಡೆಸುತ್ತಿದ್ದರು ಹೆಂಡತಿಯ ದುರಾಸೆಗೆ ಗಂಡ ಹೇಗೆ ಭ್ರಷ್ಟಚಾರ ಮತ್ತು ಪಾಪದ ಕೆಲಸಕ್ಕೆ ತೊಡಗುತ್ತಾನೆ. ಆಮೇಲೆ ಸಂಪತ್ತಿನ ನಡುವೆ ನಿಜವಾದ ಪ್ರೀತಿಯ ಮೌಲ್ಯ ಹೇಗೆ ಕೊಚ್ಚಿಕೊಂಡು ಹೋಗುತ್ತದೆ ಎಂಬುದನ್ನು ನಿದೇ೯ಶಕ ವಿ ಶೇಖರ್ ಪ್ರೇಕ್ಷಕರಿಗೆ ಬೇಸರವಾಗದಂತೆ ತೋರಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ ಹಾಗೂ ಅಂಬಿಕಾ ಸೋನಿ ಪ್ರೇಕ್ಷಕರನ್ನು ಥಿಯೇಟರ್ನಲ್ಲಿ ನಗೆಗಡಲಲ್ಲಿ ತೇಲಿಸುವ ಕಾರ್ಯವನ್ನು ಚೆನ್ನಾಗಿ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈ ವಾರ ಆರು ಸಿನಿಮಾಗಳ ನಡುವೆ 30 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು, ಉಳಿದೆಲ್ಲ ಸಿನಿಮಾಗಳಿಗಿಂತ ಒಳ್ಳೆ ಒಪನಿಂಗ್ ಪಡೆದಿದೆ. ಮೂಲತಃ ಕನ್ನಡದವರೇ ಆದ ಜಿ.ಆರ್ ಚಿತ್ರದಲ್ಲಿ ಎಂ.ಎಲ್.ಎ ಪಾತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿ ಎಲ್ಲರಮನೆಯ ಸಂಸಾದಲ್ಲಿರುವ ಬಜೆಟ್ ಹೊಂದಿಸಲು ವ್ಯವಹಾರಿಕತೆ ಎಷ್ಟು ಮುಖ್ಯವೊ ಚಿತ್ರರಂಗದಲ್ಲೂ ಅಷ್ಟೆ ಮುಖ್ಯ ಎಂಬುದನ್ನು ಜಿ.ಆರ್.ತಂಡ ತೋರಿಸಿದೆ.
ಪ್ಯಾಮಿಲಿ ಸ್ಟಾರ್ ರಮೇಶ್ ಮೂಲಕ ಥಿಯೇಟರ್ ಮತ್ತು ಟಿ.ವಿ.ಪ್ರೇಕ್ಷಕರಿಬ್ಬಬ್ಬರು ಇಷ್ಟಪಡುವ ಪುಲ್ ಮಿಲ್ಸ್ ಈ ಸಿನಿಮಾ.

