ಹೌಸ್ ಪುಲ್, ಹೌಸ್ ಪುಲ್ ಎಲ್ನೋಡಿ ಹೌಸ್ ಪುಲ್
published on May.05, 2010, under News
ಅಂತೂ ಸಿನಿಮಾ ಇಂಡಸ್ಟ್ರಿ ಸ್ವಲ್ಪ ನಿಟ್ಟುಸಿರು ಬಿಡುತ್ತಿದೆ. ಕನ್ನಡ, ಹಿಂದಿ ಸಿನಿಮಾ ಥಿಯೇಟರ್ ಗಳು ಹೌಸ್ ಪುಲ್ ಅಗುತ್ತಿವೆ. ಅದಕ್ಕೆ ಸಾಕ್ಷಿ ಅಕ್ಷಯ್ ಕುಮಾರ್ ನಟಿಸಿದ "ಹೌಸ್ ಪುಲ್" ಉತ್ತಮ ಒಪನಿಂಗ್ ಪಡೆದಿದ್ದು. ಟ್ವೆಂಟಿ-ಟ್ವೆಂಟಿ ವಡ್೯ ಕಪ್ ಮಧ್ಯೆಯು ಜನರು ಚಿತ್ರಮಂದಿರದತ್ತ ಬರುತ್ತಿರುವುದಕ್ಕೆ ಕನ್ನಡದ ಮೂರು ಚಿತ್ರಗಳು (ಆಪ್ತರಕ್ಷಕ, ಪೃಥ್ವಿ ಹಾಗೂ ಉಲ್ಲಾಸ ಉತ್ಸಾಹ) ಥಿಯೇಟರ್ ನಲ್ಲಿ ಒಳ್ಳೆ ಕಲೆಕ್ಷನ್ ಗಳಿಸುತ್ತಿರುವುದಕ್ಕೆ ಸಾಕ್ಷಿ.
ಈ ಕ್ರಿಕೇಟ್ ಹಾವಳಿ ಹೆಚ್ಚುತ್ತಿದ್ದಂತೆ ಯಾವಾಗಲೂ ಬಹು-ಕೋಟಿ ಬಜೆಟ್ ನ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರೋದ್ಯಮ ಹಿಂದೇಟು ಹಾಕುತ್ತದೆ. ಈರೋಸ್ ಇಂಟರ್ ನ್ಯಾಷನಲ್ ನಂತಹ ದೊಡ್ಡ ಪ್ರೊಡಕ್ಷನ್ ಹೌಸ್ ಕೂಡ "ಹೌಸ್ ಪುಲ್" ಬಿಡುಗಡೆ ಮಾಡಲು ಹಿಂದೆ-ಮುಂದೆ ಯೋಚಿಸುತಿತ್ತು. ಈ ಸಿನಿಮಾ ಪ್ರಮೋಷನ್ ಗಾಗಿ ಅಕ್ಕಿ ಸೇರಿದಂತೆ ದೀಪಿಕಾ ಪಡುಕೋಣೆ, ಲಾರ ದತ್ತ, ರಿತೇಶ್ ದೇಶಮುಖ್, ಅಜು೯ನ್ ರಾಮ್ ಪಾಲ್ ಹಾಗೂ ಜಿಯಾ ಖಾನ್ ಇವರೆಲ್ಲ ದಿಲ್ಲಿ, ಕೋಲ್ಕತ್ತಾ, ಬಾಂಬೆ ಅಹಮದಾಬಾದ್ ಸುತ್ತಿ ಬಂದಿದ್ದಾರೆ. ಲಾಟರಿ ಮೂಲಕ ಅದೃಷ್ಟಶಾಲಿಗಳನ್ನು ಆರಿಸಿ ಒಬ್ಬೊಬ್ಬರು ಒಂದುದಿನ ತಮ್ಮ ಅಭಿಮಾನಿಗಳ ಮನೆಯಲ್ಲಿ ತಂಗಿ ಬಂದಿದ್ದಾರೆ. ಹಾಗಾಗಿ ಈ ವಷ೯ದ ಬಾಕ್ಸ್ ಆಪೀಸ್ ಗಳಿಕೆಯಲ್ಲಿ "ಹೌಸ್ ಪುಲ್" ಸೇರಲಿದೆ.
ಕನ್ನಡದಲ್ಲೂ ಆಪ್ತರಕ್ಷಕ ನೂರುದಿನ ಪೂರೈಸುವತ್ತ ಹೆಜ್ಜೆಹಾಕುತ್ತಿದೆ. ಈ ಸಿನಿಮಾ ಎಪ್ಪತೈದು ದಿನ ಪೂರೈಸುತ್ತಿದ್ದಂತೆ ಸಿನಿಮಾ ಗಳಿಕೆ ಮುವತ್ತು ಕೋಟಿ ದಾಟಿದೆ. "ಪೃಥ್ವಿ" ಸಹ ಎರಡು ವಾರ ಓಡುತ್ತಿದ್ದಂತೆ ಹಾಕಿದ ಬಂಡವಾಳ ಹಿಂಪಡೆಯುವ ಹಂತದಲ್ಲಿದೆ. ಗಣೇಶ ನ ಉಲ್ಲಾಸ-ಉತ್ಸಾಹಕ್ಕೂ ಯಾವುದೇ ಅಡ್ಡಿಯಿಲ್ಲ ಎಂಬುದು ಈ ಥಿಯೇಟರ್ ನಲ್ಲಿ ಸಾಭೀತಾಗುತ್ತಿದೆ.

