Chitra Vaarte

೧೮ ನೇ ಕ್ರಾಸಿನಲ್ಲಿ ಟಿ.ಪಿ. ಸಿದ್ದರಾಜು

published on Aug.21, 2009, under News

tpsiddaraju ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆಯಂತೆ ದುನಿಯಾ ಕೂಡ ತನ್ನದೆ ವಿಶೇಷ ಛಾಪನ್ನು ಮೂಡಿಸಿದೆ. ಹಾಗೇ ಟಿ.ಪಿ.ಸಿದ್ದರಾಜು ಸ್ಯಾಮಿ ಅಸೋಸಿಯೇಟ್ಸ್(ರಿ) ಹುಟ್ಟು ಹಾಕಿ ಎರಡು ಚಿತ್ರರಂಗದ ಕುಡಿಗಳನ್ನು (ವಿಜಯ್ ಹಾಗೂ ಯೋಗೇಶ್) ಬೆಳೆಸಿದವರು. ಅಲ್ಲದೇ ನಂದ ಲವ್ಸ್ ನಂದಿತಾ, ಅಂಬಾರಿ ಯಶಸ್ಸಿನಲ್ಲಿ ವಿಶೇಷ ಪಾತ್ರ ನಿವ೯ಹಿಸಿದ ಸಿದ್ದರಾಜುರವರು,  ಈಗ ಮತ್ತೊಂದು ಉತ್ತಮ ಕೆಲಸಕ್ಕೆ ಕ್ಯೆಹಾಕಿದ್ದಾರೆ. ಆದೇ ಅದ೯ಕ್ಕೆ ನಿಂತ ೧೮ನೇ ಕ್ರಾಸನ್ನು ಮುಂದುವರೆಸುತ್ತಿರುವುದು.

 

ಈ ಸಿನಿಮಾದಲ್ಲಿ ರಾಧಿಕ ಪಂಡಿತ್ ಹಾಗೂ ದೀಪಕ್ ನಟಿಸಿದ್ದಾರೆ. ದಿ. ಚಿಕ್ಕಣ್ಣ ಹಾಗೂ ಶಶಿಕುಮಾರ್ ನಿಮಿ೯ಸಿದ ಈ ಸಿನಿಮಾ ರಾಧಿಕಾ ಪಂಡಿತ್ ನಟಿಸಿದ ಮೊದಲ ಸಿನಿಮಾಗ ಬೆಕಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈ ಸಿನಿಮಾದ ಕಥೆ-ಚಿತ್ರಕಥೆ ಹಾಗೂ ನಿದೇ೯ಶನ ವನ್ನು ಶಂಕರ್ ನಿವ೯ಹಿಸಿದ್ದಾರೆ.  ಚಿತ್ರಿಕರಣ ಮುಗಿದಿದ್ದರು ತೆರೆ ಕಾಣಲು ಸಾಧ್ಯವಾಗದ ಈ ಸಿನಿಮಾ ಸಿದ್ದರಾಜುರವರ ಸಹಾಯ ಹಸ್ತದಲ್ಲಿ ಡಿ.ಟಿ.ಎಸ್. ಕಾಯ೯ ಭರದಿಂದ ಸಾಗಿದೆ.

ಸಿದ್ದರಾಜುರವರು ಹೇಳುವಂತೆ ಈ ಸಿನಿಮಾದ ಹಾಡುಗಳು ತುಂಬ ಚೆನ್ನಾಗಿವೆ. ಬರುವ ಸೆಪ್ಟೆಂಬರ್ ವೇಳೆಗೆ ಅಕ್ಷಯ್  ಆಡಿಯೋ ಮೂಲಕವೇ ಹಾಡುಗಳನ್ನು ಬಿಡುಗಡೆ ಗೊಳಿಸುತ್ತೇವೆ. ನಿಮಾ೯ಪಕರಾದ ದಿ. ಚಿಕ್ಕಣ್ಣನವರು ನನ್ನ ಗೆಳೆಯನಾಗಿದ್ದರು. ರಾಧಿಕಾ ಪಂಡಿತ್ ಹಾಗೂ ದೀಪಕ್ ಉಜ್ವಲ ಭವಿಷ್ಯ ಹೊಂದಿದವರು. ಇಂತಹ ಉತ್ತಮ ಪ್ರಯತ್ನಕ್ಕೆ ನಾನು ಸ್ವಲ್ಪ ಆಸರೆಯಾಗಿದ್ದೇನೆ ಅಷ್ಟೆ. ಈ ಸಿನಿಮಾವನ್ನು ಜಯಣ್ಣನವರೊಂದಿಗೆ ಸೇರಿ ಬಿಡುಗಡೆ ಮಾಡಲು ಯೋಜಿಸಿದ್ದೇವೆ, ಎನ್ನುತ್ತಾರೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...