Chitra Vaarte

ಕನ್ನಡದ ಆಸ್ಕರ್

published on Apr.25, 2009, under News

025 ಕಳೆದ ವರ್ಷ ಕನ್ನಡದ ಹಿಟ್ ಸಿನಿಮಾಗಳಲ್ಲಿ "ತಾಜ್ ಮಹಲ್" ಸಹ ಒಂದು. ಆ ಸಿನಿಮಾದ ಸಹ ನಟ ಹಾಗೂ ನಿರ್ಮಾಪಕರಾದ ಅಶೋಕ್ ಕುಮಾರ್ ಇಂದು "ಆಸ್ಕರ್" ಸಿನಿಮಾಕ್ಕೆ ಹೀರೋ. ಇಂದು ಈ ಸಿನಿಮಾವನ್ನು ಶಿವು ಬೆಳವಾಡಿ ಮತ್ತು ಡಿ.ಎಸ್.ಕುಬೇರ ಸೇರಿ ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು "ಶಿಷ್ಯ" ಹಾಗೂ "ಕೊಡಗನ ಕೋಳಿ ನುಂಗಿತ" ಸಿನಿಮಾಗಳ ಸಹ ನಿರ್ದೇಶಕರಾದ ಕೃಷ್ಣರವರು ನಿಭಾಯಿಸುತ್ತಿದ್ದಾರೆ. ಆಸ್ಕರ್ ಸಿನಿಮಾದ ನಾಯಕಿಯರಾಗಿ ಪ್ರಿಯಾಂಕ ಎಂಬ ಇಬ್ಬರು ಚೆಲುವೆಯರು. ಅದರಲ್ಲಿ ಒಬ್ಬಳು "ಮರುಜನ್ಮ" ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರೆ, ಇನ್ನೊಬ್ಬಳು "ಕಬಡ್ದಿ" ಸಿನಿಮಾದ ನಾಯಿಕಿಯಾಗಿ ಅಭಿನಯಿಸುತ್ತಿದ್ದಾಳೆ.

ಅಶೋಕ್ ಕುಮಾರ್ ಗೆಟಪ್ ತಾಜ್ ಮಹಲ್ ಗಿಂತ ಇಂದು ಬಹಳಷ್ಟು ಮಾಡ್ ಆಗಿ ಕಾಣಿಸುತ್ತಿದ್ದಾರೆ. ಅಲ್ಲದೇ ಬಾಂಬೆಯಲ್ಲಿ ಸಿನಿಮಾ ತರಬೇತಿ ಪಡೆದಿದ್ದು "ಆಸ್ಕರ್" ಸಿನಿಮಾಕ್ಕೆ ಬಾಲಿವುಡ್ ಹೀರೋನಂತೆ ಕಂಗೊಳಿಸುತ್ತಿದ್ದಾರೆ. ಕೃಷ್ಣರವರು ಈ ಸಿನಿಮಾದಲ್ಲಿ ಲವ್ ಕಾನ್ಸೆಪ್ಟ್ ನ್ನು ತುಂಬ ವಿಭಿನ್ನವಾಗಿ ನಿರೂಪಿಸಲು ಮುಂದಾಗಿದ್ದಾರೆ. ಬೆಂಗಳೂರು, ಮಡಿಕೇರಿ, ಮಂಗಳೂರಿನಂತಹ ಸ್ಥಳಗಳಲ್ಲಿ ೪೦ ದಿನಗಳ ಕಾಲ ಶೂಟಿಂಗ್ ನಡೆಸಿದ್ದಾರೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...