Chitra Vaarte

ಪರಮಾತ್ಮ ಫೋಟೋ ಗ್ಯಾಲರಿ

published on Oct.03, 2011, under Photo Gallery

 

ಪುನೀತ್ ಒಂದರ ಹಿಂದೊಂದರಂತೆ ಹಿಟ್ ನೀಡುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ `ಹುಡುಗರು’ ಶತದಿನೋತ್ಸವ ಆಚರಿಸಿಕೊಂಡಿದೆ. ಅದರ ಬೆನ್ನಲ್ಲೇ `ಪರಮಾತ್ಮ’ ಪ್ರತ್ಯಕ್ಷನಾಗಿದ್ದಾನೆ. ಯೋಗರಾಜ್ ಭಟ್ ಹಾಗೂ ಪುನೀತ್ ಕಾಂಬಿನೇಶನ್ ಇದೇ ಮೊದಲು. ಈಗಾಗಲೇ ಹಾಡುಗಳು ಹಿಟ್ ಆಗಿದೆ. ಚಿತ್ರದ ಬಗ್ಗೆ ನಿರೀಕ್ಷೆಯೂ ಸಾಕಷ್ಟಿದೆ. ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ ನಾಲ್ವರು ನಟಿಮಣಿಯರಿದ್ದಾರೆ.

 

Picture 1 of 10

 

ವಿ.ಹರಿಕೃಷ್ಣ ಮತ್ತೊಮ್ಮೆ ಬ್ಯಾಂಡು ಬಜಾಯಿಸಿ `ಹ್ಯಾಟ್ರಿಕ್’ ಸಾಧಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಇರುವುದರಿಂದ ಕಾಮಿಡಿ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಭಟ್ಟರ ಡೈಲಾಗ್ ಕೂಡ ಮನರಂಜನೆ ನೀಡುತ್ತದೆ ಎಂದು ಈಗಾಗಲೇ ಮನದಟ್ಟಾಗಿದೆ. ಜಯಣ್ಣ ಹಾಗೂ ಭೋಗೇಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ. ಪುನೀತ್ ಸಿನಿಮಾ ಎಂದಮೇಲೆ ನಿರ್ಮಾಪಕರು ತಲೆ ಮೇಲೆ ಕೈ ಹೊತ್ತು ಕೂರುವ ಪ್ರಮೇಯವೇ ಇಲ್ಲ. ಹೀಗಾಗಿ ಪ್ರೊಡ್ಯೂಸರ್ಸ್ ಈಗಾಗಲೇ ಸೇಫ್ ಎಂದು ಹೇಳಲು ಅಡ್ಡಿಯಿಲ್ಲ.

 

ಸಕಲೇಶಪುರದಲ್ಲಿ ಆರಂಭವಾದ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಕರಾವಳಿ ತೀರ ಸೇರಿದಂತೆ ಕರ್ನಾಟಕದ  ಹಲವಾರು ರಮ್ಯ ತಾಣಗಳಲ್ಲಿ ನಡೆದಿದೆ.

 

ಚಿತ್ರಕ್ಕೆ ನಿರ್ದೇಶಕರೇ ಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರಿಗೆ ಸೂರಿ ಸಾಥ್ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ. ಶಶಿಧರ್ ಅಡಪರ ಕಲಾ ನಿರ್ದೇಶನವಿದೆ.  ದೀಪು.ಎಸ್.ಕುಮಾರ್ ಸಂಕಲನವಿದೆ.  `ಪರಮಾತ್ಮ’ನ ನಾಯಕಿಯರಾಗಿ ದೀಪ ಸನ್ನಿಧಿ ಹಾಗೂ ಐಂದ್ರಿತಾ ರೇ ಅಭಿನಯಿಸಿದ್ದಾರೆ. ರಮ್ಯಾ ಬಾರ್ನಾ, ಶ್ವೇತಾ, ದತ್ತಣ್ಣ, ಅವಿನಾಶ್, ರಂಗಾಯಣ ರಘು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಸೋ… `ಪರಮಾತ್ಮ’ ಯಾವ ರೀತಿಯ ಕಮಾಲ್ ಮಾಡಲಿದ್ದಾನೆ ಕಾದು ನೋಡಬೇಕಿದೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...