Chitra Vaarte

‘ಮೊದಲ ಸಲ’ ಜಯಭೇರಿಯ ಹಾದಿಯಲಿ

published on Dec.28, 2010, under Photo Gallery

ಉತ್ತರ ಕರ್ನಾ ಟಕಕ್ಕೂ ಮತ್ತು ಕನ್ನಡ ಚಿತ್ರರಂಗಕ್ಕೂ ಅವಿನಾವಭಾವ ಸಂಬಂಧ. ಹಾಗೇ ನಮ್ಮ ಪಕ್ಕದ ಜಿಲ್ಲೆಯ ಗದಗ್ನ ಮಲ್ಲಿಕಾರ್ಜುನ ಎಂಬುವವರು ಮೊದಲಬಾರಿ ಸಿನಿಮಾ ನಿರ್ಮಿಸಿ ಈ ವಾರ ಬಿಡುಗಡೆಗೊಳಿಸುತ್ತಿದ್ದಾರೆ. ಹೆಸರು ‘ಮೊದಲಸಲ’. ಯಶ್ ಮತ್ತು ಭಾಮಾ ನಟಿಸಿರುವ ಈ ಸಿನಿಮಾ ಯುವ ಸಮುದಾಯಕ್ಕೆ ಮುದ್ದಾದ ಪ್ರೇಮಕಾವ್ಯ. ತೆರೆಯಲ್ಲಿ ಪೂರ್ತಿ ಪ್ಯಾಮಿಲಿ ಕುಳಿತು ನೋಡಬಹುದಾದ ಸಿನಿಮಾ ಮೊದಲಸಲ.

 

ಗದಗ್ನ ಮಲ್ಲಿಕಾರ್ಜುನರವರಿಗೆ ನಿರ್ಮಾಪಕರಾಗಿದ್ದು ಮೊದಲ ಬಾರಿಯಾದರೂ ಚಿತ್ರರಂಗ ಹೊಸದೇನಲ್ಲ. ಕಳೆದ ಆರುವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು ಹೊಂದಿದ್ದಾರೆ. ಅಲ್ಲದೇ ಬಿ.ಇ. ಪದವಿದಾರರಾಗಿದ್ದು, ಮೊದಲು ಸಾಪ್ಟವೇರ್ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು. ಜೊತೆಗೆ ಖ್ಯಾತ ನಿರ್ದೇಶಕ ಎಮ್.ಎಸ್. ರಮೇಶರವರ ವಾಲ್ಮಿಕಿ, ಆದಿ ಹಾಗೂ ಸ್ವಾಮಿ ಸಿನಿಮಾಕ್ಕೆ ಸಂಭಾಷಣೆ ಮತ್ತು ಸಹಾಯಕ  ನಿರ್ದೇಶಕರಾಗಿದ್ದರು. ನಂತರ ಜೊತೆ ಜೊತೆಯಲಿ, ಇಂದ್ರ, ನವಗ್ರಹ ಮುಂತಾದ ಸಿನಿಮಾಗಳಿಗೆ ಸಂಭಾಷಣೆಯೊಂದಿಗೆ ಸಹ-ನಿರ್ದೇಶಕರಾಗಿ ಭಡ್ತಿಹೊಂದಿದ್ದರು.

Picture 1 of 9

 

ಇನ್ನೇನು "ಶುಭಾಶಯ" ಎಂಬ ಸಿನಿಮಾ ನಿರ್ದೇಶಿಸಲು ತಯಾರಿ ನಡೆಸಿ, ನಿರ್ಮಾಪಕರ ಹುಡುಕಾಟದಲ್ಲಿದ್ದರು. ಆಗ ಅದಕ್ಕೆ ಬರೋಬ್ಬರಿ ನಾಲ್ಕು ಕೋಟಿ ಬೇಕಾಗಿತ್ತು. ಅದೇ ಸಮಯದಲ್ಲಿ ಗೆಳೆಯ ಪುರುಷೊತ್ತಮ ‘ಮೊದಲಸಲ’ ಸಿನಿಮಾ ಕಥೆಯನ್ನು ರೆಡಿಮಾಡಿಕೊಂಡಿದ್ದರು. ಆ ಕಥೆ ಕೇಳಿ, ತಮ್ಮ ಶುಭಾಶಯ ಸಿನಿಮಾಕ್ಕೆ ರೆಡಿಮಾಡಿಕೊಂಡ ಅರ್ಧಬಜೆಟ್ನ್ನೆ ವ್ಯಯಿಸಿ ‘ಮೊದಲಸಲ’ ಸಿನಿಮಾವನ್ನು ಗೆಳೆಯರಿಬ್ಬರು ಮಾಡಿದ್ದಾರೆ. ಒಬ್ಬ ಸಹ ನಿರ್ದೇಶಕನಾಗಿ ತನ್ನ ಗೆಳೆಯ  ಸಹ ನಿರ್ದೇಶಕನಿಗಾಗಿ ಸಿನಿಮಾ ಮಾಡಿದ್ದು ಮಲ್ಲಿಕಾರ್ಜುನರವರ ವಿಶೇಷ. ಕರ್ನಾಟಕ ಟಾಕೀಸ್ ಎಂಬ ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಯೋಗೇಶ್ ನಾರಯಣ್,ಜಗದೀಶ್ ಕಾಳಗಿ,ಮಯೂರ, ವೆಂಕಟೇಶ್ ನಾಯಕ, ಮಹೇಶ್ ಪಾಟೀಲ್ ಹಾಗೂ ರಾಜಣ್ಣ ಗುಡಿಮನಿ ಮುಂತಾದವರು ಕೈಜೋಡಿಸಿದ್ದು ಮಲ್ಲಿಕಾ ಕಾರ್ಜು ರವರಿಗೆ ಇನ್ನಷ್ಟು ಬಲ ಬಂದಿದೆ.

 

ಈ ಸಿನಿಮಾದಲ್ಲಿ ಯಶ್ ಮತ್ತು ಭಾಮಾರ ಜೋಡಿ ಸಖತ್ ಸುಂದರವಾಗಿ ಕಾಣುತ್ತಾರೆ. ಭಾಮಾ ತೆಲಗು,ತಮಿಳು, ಮಲೆಯಾಲಂಗಳ ಹತ್ತಾರು ಸಿನಿಮಾದಲ್ಲಿ ನಾಯಕಿಯಾಗಿ ಅನುಭವಹೊಂದಿದ್ದರೆ, ಯಶ್ ಕೂಡ ಕನ್ನಡದ ಭರವಸೆ ನಟ. ಮೊದಲಸಲದಲ್ಲಿ ತಾರಾ ಮತ್ತು ರಂಗಾಯಣರವರ ಜೋಡಿಯು ನಾಯಕ-ನಾಯಕರನ್ನು ಮೀರಿಸುವಷ್ಟು ಚೆನ್ನಾಗಿ ಅಭಿನಯಿಸಿದ್ದಾರಂತೆ. ಹರಿಕೃಷ್ಣರವರ ಮ್ಯೂಸಿಕ್ ಸುಪರ್ಬ ಎಂಬುದು ಈಗಾಗಲೇ ಸಾಭಿತಾಗಿದೆ. ಜಾಕಿ ಸಿನಿಮಾದ ಸಂಕಲನಕಾರ ದೀಪು ಎಸ್ ಕುಮಾರ್ರವರ ಕೈಚಳಕ ಇನ್ನಷ್ಟು ಚೆನ್ನಾಗಿದೆ ಎಂಬಮಾತು ಈಗಾಗಲೇ ಕೇಳಿಬರುತ್ತಿದೆ. ಜಯಣ್ಣ ಹಂಚಿಕೆ ಮಾಡುತ್ತಿರುವ ಈ ಸಿನಿಮಾ ರಾಜ್ಯದಾದ್ಯಂತ 50 ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂತು ಮಲ್ಲಿಕಾ ಕಾರ್ಜುನರವರು ಉತ್ತರ ಕರ್ನಾಟಕದಾದ್ಯಂತ ವಿಶೇಷ ಪ್ರಚಾರ ಮಾಡಿದ್ದು, ನಮ್ಮ ಜನ ಚಿತ್ರಮಂದಿರದತ್ತ ಬಂದು ಸಿನಿಮಾ ನೋಡುವುದು ಖಚಿತ. ಮೊದಲಸಲ ರಾಜ್ಯದಾದ್ಯಂತ ದೊಡ್ಡ ಯಶಸ್ಸು ಕಾಣುತ್ತದೆ, ಎಂಬ ವಿಶ್ವಾಸ ನಿರ್ಮಪಕರದ್ದು.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...