Chitra Vaarte

ರಾಜ್ ದ ಶೋಮನ್ ಫೋಟೋ ಗ್ಯಾಲರಿ

published on Aug.11, 2009, under Photo Gallery

Picture 1 of 10

ರಾಜ್ : ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ‘ರಾಜ್’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭಾರತದ ಪ್ರಮುಖ ನಗರಗ ಳಲ್ಲದೇ ದುಬೈ, ಇಂಗ್ಲೆಂಡ್, ಆಸ್ಟ್ರೇಲಿಯಾದಂಥ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರ ನಿರ್ದೇಶಕ ಪ್ರೇಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೋಡಿಯ ಅದ್ಧೂರಿ ಕೃತಿಯಾಗಿದೆ. ಬಾಲಿವುಡ್ ಬೆಡಗಿ ಪ್ರಿಯಾಂಕ ಕೊಠಾರಿ ಪುನೀತ್ ಜೋಡಿಯಾಗಿ ಅಭಿನಯಿಸಿದ್ದಾರೆ. ಡಿ. ಸುರೇಶ್ ಗೌಡ್ರು ಹಾಗೂ ಪಿ.ಎಸ್. ಶ್ರೀನಿವಾಸಮೂರ್ತಿ ಅವರು ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ನಟ ಪುನೀತ್  ಡಾ|| ರಾಜಕುಮಾರ್ ಅವರ ಅಭಿಮಾನಿಯಾಗಿದ್ದು, ಹಿರಿಯ ನಟಿಯರಾದ ಜಯಪ್ರದಾ, ಭಾರತಿ, ಜಯಂತಿ, ಜಯಮಾಲ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಅನೇಕ ವಿಶೇಷತೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ಪ್ರೇಮ್.  ಎಸ್. ಕೃಷ್ಣರ ಛಾಯಾಗ್ರಹಣ, ವಿ.ಹರಿಕೃಷ್ಣರ ಸಂಗೀತ ಸಂಯೋಜನೆ ಇದ್ದು, ಶ್ರೀನಿವಾಸ್ ಪಿ. ಬಾಬು, ದಶಾವರ ಚಂದ್ರು, ವಿ. ಆನಂದ್ ಪ್ರಿಯಾ, ನಾಗೇಶ್, ಸಿ. ಸೇತು, ಹಾಗೂ ಮೋಹನ್ ರಾಜ್ ಪ್ರೇಮ್ ತಂಡದಲ್ಲಿದ್ದಾರೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...