ಸಂಜು ಮತ್ತು ಗೀತಾಳ ಮದುವೆಗೆ ಬಂದುಬಿಡಿ
published on Mar.24, 2011, under Photo Gallery
ನಿರ್ದೇಶಕ ನಾಗಶೇಖರ್ ಮೊಗ ಕಳೆಗಟ್ಟಿತ್ತು. ತನ್ನ ಕನಸೊಂದು ಸಾಕಾರಗೊಂಡ ಸಂತೃಪ್ತ ಭಾವ ಅಲ್ಲಿ ಮನೆ ಮಾಡಿತ್ತು. ಅದು ನಾಲ್ಕು ವರ್ಷದ ಅದಮ್ಯ ಕನಸು. ಎರಡು ವರ್ಷಗಳ ಕಾಲ ಅದನ್ನು ಸಾಕಾರಗೊಳಿಸಲು ಪಟ್ಟ ಶ್ರಮ ಇಂದು ಸಂಜು ವೆಡ್ಸ್ ಗೀತಾ ಈಗಾಗಲೇ ಅನೇಕ ಬಿಡುಗಡೆಯ ಸೌಭಾಗ್ಯವನ್ನು ಅದು ಕಳೆದುಕೊಂಡಿತ್ತು. ಆದರೆ ಈ ಬಾರಿ ಎಲ್ಲಾ ವಿಘ್ನಗಳು ಕಳೆದು ಸಂಜು ಮತ್ತು ಗೀತಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಈಕುರಿತು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಮತ್ತು ಸಹ ನಿರ್ಮಾಪಕ ನಾಗಶೇಖರ್ ಮಾತಾಡಿದ್ದು ಹೀಗೆ, ಸಂಜು ವೆಡ್ಸ್ ಗೀತಾ ನನ್ನ ಕನಸಿನ ಕೂಸು. ನಾಲ್ಕು ವರ್ಷಗಳಿಂದ ನಾನು ಅದಕ್ಕಾಗಿ ಕನಸು ಕಂಡಿದ್ದೆ ಎರಡು ವರ್ಷಗಳಿಂದ ಶ್ರಮಿಸಿದ್ದೆ. ಸಂಜು ವೆಡ್ಸ್ ಗೀತಾ ಚಿತ್ರದ ಪ್ರಥಮ ಪ್ರತಿ ಬಂದು ಸೆನ್ಸಾರ್ ಕೂಡ ಆಗಿದೆ. ಅದಕ್ಕಾಗಿ ಇವತ್ತು ನನಗೆ ತುಂಬಾ ಖುಷಿಯಾಗುತ್ತದೆ. ತುಂಬಾ ಕಷ್ಟ ಪಟ್ಟು ತಂದ ಚಿತ್ರ ತುಂಬಾ ಚೆನ್ನಾಗಿದೆ ಎಂದು ಹೇಳಿದರು ನಾಗಶೇಖರ್.
ಈ ಚಿತ್ರಕ್ಕಾಗಿ ಸತತ ಎರಡು ವರ್ಷಗಳ ಪಟ್ಟು ಬಿಡದೆ ದುಡಿದಿದ್ದೇನೆ. ಕ್ಯಾಮೆರಾ ಮ್ಯಾನ್ ಸತ್ಯ ಹೆಗಡೆ ಕೂಡ ಸಂಜು ವೆಡ್ಸ್ ಗೀತಾಕ್ಕಾಗಿ ಒಂದು ವರ್ಷ ದುಡಿದ್ದು ಬೇರೆ ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಚಿತ್ರ ಎಪ್ರಿಲ್ 1ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಎಪ್ರಿಲ್ ಫೂಲ್ ಅಲ್ಲ, ಈಗಾಗಲೇ ಮೂರು ಬಾರಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದು ಸಮಸ್ಯೆಗಳಿಂದಾಗಿ ಸಾಧ್ಯವಾಗಿರಲಿಲ್ಲ. ಆದರೆ ಈಬಾರಿ ಎಲ್ಲವೂ ಸುಸೂತ್ರವಾಗಿದ್ದು ಎ. 1 ರಂದು ಜನತೆಯ ಮುಮದೆ ಬರಲಿದೆ. ಈಗಾಗಲೇ ಹಾಡುಗಳು ಜನಮನ ಗೆದ್ದಿದ್ದು ಚಿತ್ರವೂ ಗೆಲ್ಲುತ್ತದೆ ಎನ್ನುವ ಭರವಸೆ ಇದೆ. ಹಾಡುಗಳಿಗಿಂತ ಚಿತ್ರ ಡಬ್ಬಲ್ ಚೆನ್ನಾಗಿದೆ ಎಂದು ನಾಗಶೇಖರ್ ಮಾತು ಮುಗಿಸಿದರು.
ರಮ್ಯಾ ಅವರ ಸಹಕಾರವನ್ನು ಸ್ಮರಿಸಿದರು. ಊಟಿಯಲ್ಲಿ ಚಿತ್ರೀಕರಣಕ್ಕೆ ತೆರಳಿದಾಗ ಇಡೀ ಟೀಮ್ ಅಲ್ಲಿನ ಚಳಿಗೆ ಮಾತ್ರ ತಯಾರಾಗಿ ಹೋಗಿತ್ತು. ಆದರೆ ಚಿತ್ರೀಕರಣ ಸಂದರ್ಭದಲ್ಲಿ ಮಳೆ ಬಂದಾಗ ಯುನಿಟ್ನ ಎಲ್ಲರೂ ಮಳೆಯಲ್ಲಿ ನೆನೆದು ಕೆಲಸ ಮಾಡಿದ್ದರು. ಅದನ್ನು ನೋಡಿದ ರಮ್ಯಾ ಮರುದಿನ ಯುನಿಟ್ನ ಎಲ್ಲಾ 113 ಮಂದಿಗೆ ಜಾಕೆಟ್ಗಳನ್ನು ಕೊಡಿಸಿದ್ದರು. ಅಷ್ಟೇ ಅಲ್ಲ ಎಲ್ಲಾ ರೀತಿಯಲ್ಲೂ ಅವರು ನಮ್ಮ ತಂಡಕ್ಕೆ ಸಹಕಾರ ನೀಡಿದ್ದಾರೆ. ಊಟಿಯಿಂದ ಶುರುವಾಯ್ತು ಅವರ ಹೆಲ್ಪ್ ಎಂದು ಸ್ಮರಿಸಿದರು.
ಚಿತ್ರದಲ್ಲಿ ಯಾವ ಭಾವನೆಯನ್ನು ಬಿಂಬಿಸಬೇಕಿತ್ತೋ ಅದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಹಾಡುಗಳ ಕುರಿತು ಸಾಮಾಜಿಕ ತಾಣಗಳಾದ ಟ್ವೀಟರ್, ಫೇಸ್ಬುಕ್ಗಳಲ್ಲಿ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. Ùರಸಂಜು ಮತ್ತು ಗೀತಾ ಸೇರಬೇಕು ಅಂತಾÙಳ ಎನ್ನುವ ಹಾಡಿನಲ್ಲಿ ಏನು ಹೇಳಲಾಗಿದೆಯೋ ಅದರಲ್ಲಿ ಶೇ. 5ರಷ್ಟು ಕೂಡ ಚಿತ್ರ ಕಥೆ ಇಲ್ಲ. ಹಾಡುಗಳಿಗಿಂತ ದುಪ್ಪಟ್ಟು ಚೆನ್ನಾಗಿದೆ ಚಿತ್ರ. ಉತ್ತಮ ಕಥೆ, ಚಿತ್ರ ಭಿನ್ನವಾಗಿದೆ ಎಂದವರು ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ.
ರಮ್ಯಾ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ, ನಾನು ಈ ಚಿತ್ರಕ್ಕಾಗಿ ಕಾದಿದ್ದೆ, ಈಗ ಚಿತ್ರ ಬಿಡುಗಡೆಯಾಗುತ್ತಿರುವುದು ಮನಸ್ಸಿಗೆ ತುಂಬಾ ಖುಷಿಯಾಗುತ್ತಿದೆ. ಅಷ್ಟೇ ಅಲ್ಲ ಇದು ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಸಿನಿಮಾ. ಇಡೀ ಚಿತ್ರತಂಡವೇ ನನಗೆ ಸಹಾಯ ಮಾಡಿದೆ ಎಂದು ಚಿತ್ರೀಕರಣ ಸಂದರ್ಭವನ್ನು ನೆನೆದರು.
ಚಿತ್ರಕ್ಕೆ ಎರಡು ಹಾಡುಗಳನ್ನು ಬರೆದಿರುವ ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ ಈ ಚಿತ್ರದ ಎರಡು ಹಾಡುಗಳಿಗೆ ಸಿಕ್ಕ ಪ್ರತಿಕ್ರಿಯೆ ಇಲ್ಲಿಯವರೆಗೆ ಯಾವ ಹಾಡುಗಳಿಗೂ ಸಿಕ್ಕಿಲ್ಲ. ಹಾಡುಗಳನ್ನು ಬರೆಯುವಾಗ ಪಲ್ಲವಿ ಮಾತ್ರ ಚೆನ್ನಾಗಿದ್ದರೆ ಸಾಕು ಹಿಟ್ ಆಗೋಕೆ ಎನ್ನುವ ಮಾತುಗಳು ಕೇಳುತ್ತವೆ. ಆಗ ಎನಿಸುವುದು ಇಷ್ಟೊಂದು ಕಷ್ಟಪಟ್ಟು ಬರೆದ ಹಾಡುಗಳನ್ನು ಯಾರೂ ಪೂತರ್ಿಯಾಗಿ ಕೇಳುವುದಿಲ್ಲ ಅನುಭವಿಸುದಿಲ್ಲ ಅಂತ. ಆದರೆ ಈಗ ಗೊತ್ತಾಯ್ತು. ಹಾಡಿನ ಪ್ರತಿಯೊಂದು ಸಾಲನ್ನು ಇಷ್ಟ ಪಡುತ್ತಾರೆ. ಈ ಎರಡು ಹಾಡುಗಳಿಂದ ನನ್ನ ಎಲ್ಲಾ ಫೀಲ್ಸ್ ಫುಲ್ಫಿಲ್ ಆಯ್ತು. ಸಾರ್ಥಕ ಭಾವನೆ ಮನದಲ್ಲಿ ಮೂಡಿತು. ಕೇವಲ ಕನ್ನಡಿಗರು ಮಾತ್ರವಲ್ಲ ಬೇರೆ ರಾಜ್ಯದವರೂ ಈ ಹಾಡುಗಳನ್ನು ಇಷ್ಟ ಪಡುತ್ತಾರೆ. ಇವತ್ತು ವಿದೇಶದಿಂದ ಕರೆ ಬರುತ್ತದೆ ಹಾಡು ತುಂಬಾ ಚೆನ್ನಾಗಿದೆ ಅಂತ ಇದಕ್ಕಿಮ್೦ತ ಹೆಚ್ಚಿನದ್ದು ಏನು ಬೇಕು. ಪ್ರೀತಿ ಎಂದರೆ ಇದು ಎಂದು ಒಬ್ಬ ಅಮೆರಿಕಾದ ಅಪ್ಪ ತನ್ನ ಮಗಳಿಗೆ ಹೇಳಿಕೊಡಬೇಕಾದರೆ ಹಾಡುಗಳು ಎಷ್ಟು ಪರಿಣಾಮಕಾರಿಯಾಗಿವೆ ಎನ್ನುವುದು ಅರ್ಥವಾಗುತ್ತದೆ ಎಂದು ಧನ್ಯತಾ ಭಾವದಿಂದಲೇ ಮಾತಿಗೆ ಪೂರ್ಣವಿರಾಮವಿಟ್ಟರು ಕವಿ.
ಪ್ರೇಮ ಗೀತೆಗಳು ಮಾತ್ರವಲ್ಲದೆ ತಮಾಷೆಯ ಹಾಡುಗಳೂ ಇವೆ. ನಾನು ಅಂತಹ ಹಾಡುಗಳನ್ನು ಬರೆದಿದ್ದು ಪ್ರೇಯಸಿಯನ್ನ ಹುಡುಕಿಕೊಂಡು ಹೋಗುವ ಹಾಡು ತುಮಬಾ ಚೆನ್ನಾಗಿದೆ ಎಂದರು ಇನ್ನೋರ್ವ ಸಾಹಿತಿ ನಾಗೇಂದ್ರ.
ಚಿತ್ರದಲ್ಲಿ ವಿಶೇಷವಾದ ಸೌಂಡ್ಸ್ ಇಫೆಕ್ಟ್ ಇದೆ. ಚಿತ್ರದ ಮೊದಲ ಫ್ರೇಮ್ನಿಂದ ಹಿಡಿದು ಕೊನೆಯ ಫ್ರೇಮ್ ವರೆಗೆ ಮಳೆಯಿದೆ ಎನ್ನುತ್ತಾರೆ ಕ್ಯಾಮೆರಾಮೆನ್ ಸತ್ಯ ಹೆಗಡೆ.

