Chitra Vaarte

ಕಾಮೆಡಿಯೆಂದು ಹೋದರೆ ನಿರಾಸೆ, ನಿರಾಸೆ ಹೊಂದಿದವರಿಗೆ ಭರವಸೆ

published on Jul.24, 2010, under review

lift_kodla ಜಗ್ಗೇಶ್ ಸರ್ವರ ಸೋಮಣ್ಣನ ಸಿನಿಮಾದಿಂದ ಇತ್ತೀಚಿನ ಸಿನಿಮಾಗಳವರೆಗೆ ತಾನು ಅಪಹಾಸ್ಯಕೊಳಗಾಗಿ ಜನರನ್ನು ನಗಿಸುತ್ತಿದ್ದ. ಈಗ ಸಿನಿಮಾ ಮತ್ತು ರಾಜಕೀಯದಲ್ಲಿ ತೊಡಗಿಕೊಂಡಿರುವ ಬ್ಯುಸಿ ವ್ಯಕ್ತಿ. ಸಿನಿಮಾ ಮತ್ತು ರಾಜಕೀಯ ಈ ಎರಡರಲ್ಲು ಗೌರವವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ "ಲಿಪ್ಟ್ ಕೊಡ್ಲಾ" ದಂತಹ ಸಿನಿಮಾದಲ್ಲಿ ನಟಿಸಬೇಕು. ನಗರದ ಯಾವುದೇ ಏರಿಯಾದಲ್ಲೂ ಈ ಸಿನಿಮಾದ ಪೋಸ್ಟರ್ನಲ್ಲಿ ಕಾಣುವ ಜಗ್ಗೇಶ್, ಕೋಮಲ್, ರಾಜು ತಾಳಿಕೋಟೆ ಹಾಗೂ ಸಾಧು ಕೋಕಿಲನಂತವರು ನಗೆ ಹುಟ್ಟಿಸುತ್ತಾರೆ. ಅಂದರೆ ಲಿಪ್ಟ್ ಕೊಡ್ಲಾ ಇದು ಹಾಸ್ಯ ಚರ್ಕವತಿ೯ಗಳ  ಸಂಗಮ ಎನ್ನಬಹುದು. ಕಾಮೆಡಿಗಾಗಿ ನೀವು ಈ ಸಿನಿಮಾ ನೋಡಲು ಹೋದರೆ ನಿರಾಸೆಹೊಂದುವಿರಿ. ಜೀವನದಲ್ಲಿ ನಿರಾಸೆಯುಳ್ಳವರು ನೀವಾಗಿದ್ದರೆ ಖುಷಿಪಡೆಯುವಿರಿ.

 

ಜಗ್ಗೇಶ್ ಸಿನಿಮಾ ಬದುಕಿನ ಇನ್ನೋಂದು ಘಟ್ಟದತ್ತ ಸಾಗುವತ್ತ ಪ್ರಯಾಣಮಾಡುತ್ತಿರುವುದು ಲಿಪ್ಟ್ ಕೊಡ್ಲಾ ಸಿನಿಮಾ ನಿರೂಪಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವರ ಒಂದು ತಂಡವನ್ನು ಕಟ್ಟಿಕೊಂಡು ಕೊಡಚಾದ್ರಿ ಘಟ್ಟದತ್ತ ಬಸ್ಸಿನ ಪ್ರಯಾಣವೇ ಈ ಕಥೆಯ ಮೂಲವಸ್ತು. ಇಲ್ಲಿ ಶ್ರೀಮಂತನಿದ್ದಾನೆ, ದಿವಾಳಿಕೋರನಿದ್ದಾನೆ, ವಿದ್ಯಾಥಿ೯, ಪ್ರೇಮಿಗಳು, ಭಗ್ನ ಪ್ರೇಮಿ, ಕುಡುಕ, ವರದಕ್ಷಿಣೆ ಕಿರುಕಳಕ್ಕೆ ಬಲಿಪಶುವಾದ ಮಹಿಳೆ ಹಾಗೂ ಮುದಿ ಜೋಡಿ ಪ್ರಯಾಣದುದ್ದಕ್ಕೂ ನಗಿಸುತ್ತಲೇ ಬದುಕಿ ಸಾಧಿಸುವ ಫಿಲಾಸಪಿಯನ್ನು ಹೇಳುತ್ತಾರೆ. ಕೊನೆಗೆ ಜಗ್ಗೇಶ್ ಸಾಹಸ ದೃಶ್ಯದಲ್ಲಿಯು ಪ್ರೇಕ್ಷಕರ ಗಮನ ಸೆಳೆಯುತ್ತಾರೆ.

 

ದೀಘ೯ವಧಿಯ ನಂತರ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಟೋಪಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜಕಾರಣಿಯಾಗಿ ಬಂದು ಹೋಗುತ್ತಾರೆ. ನಿದೇ೯ಶನ   ಅಶೋಕ ಕಶ್ಯಪ್ ನಿದೇ೯ಶನದ ಈ ಸಿನಿಮಾ ಜಗ್ಗೇಶ್ ನಟನೆಯ ಬದುಕಿಗೆ ಅರ್ಥಕೊಡುವಂತ ಪಾತ್ರನೀಡಿದ್ದಾರೆ. ವಿ. ಮನೋಹರ ಸಂಗೀತ ಸಿನಿಮಾಕ್ಕೆ ತಕ್ಕ ಹಾಗೀದೆ. ಈ ಎಲ್ಲ ಹಾಸ್ಯ ಚಕ್ರವತಿ ಗಳ ಸಂಗಮದಿಂದಾಗಿಯಾದರೂ ಸಿನಿಮಾದ ಪ್ರೊಡ್ಯುಸರ್ ಜೇಬನ್ನು ಪ್ರೇಕ್ಷಕ ತುಂಬಿಸುವನೋ ಎಂಬುದು ಇನ್ನೊಂದು  ವಾರದೊಳಗೆ ತಿಳಿಯಲಿದೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...