ಇದು `ಪೂಜಾ’ ಸಮಯ
published on Mar.19, 2011, under Special Feature
ಸಂಜನಾ ಗಾಂಧಿ ಎಂದರೆ ಎಲ್ಲರ ನೆನಪು ಐದು ವರ್ಷ ಹಿಂದೆ ಸರಿಯುತ್ತೆ. ಅದೇ ಮಳೆಯಲ್ಲಿ ನೆನೆದ ಹುಡುಗಿ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ `ಕುಣಿದು ಕುಣಿದು’ ಬಂದಾಕೆ. ಚಿತ್ರರಂಗ ಅವರನ್ನು ಪೂಜಾ ಎಂದಿತು. ಅವರೀಗ ಇಪ್ಪತ್ತೈದರ ಸಂಭ್ರಮವನ್ನು ದಾಟಿ ಮುನ್ನುಗ್ಗುತ್ತಿದ್ದಾರೆ. ಆದರೆ ಯಾರಿಗೂ ತಿಳಿದಿಲ್ಲವೇನೋ.
ಲವ್ಲೀ ಹುಡುಗಿ ಪೂಜಾ ಜನುಮ ದಿನ ಅಂತ ನೀವು ತಿಳಿದುಕೊಂಡರೆ ಅದು ಖಂಡಿತಾ ತಪ್ಪು. ಇಲ್ಲಿ ಹೇಳ ಹೊರಟಿರುವುದು ಪೂಜಾ ಗಾಂಧಿ ಚಿತ್ರಗಳ ಬಗ್ಗೆ. `ಮುಂಗಾರು ಮಳೆ’ಯಲ್ಲಿ ನೆನೆಯುವುದರೊಂದಿಗೆ ಸ್ಯಾಂಡಲ್ವುಡ್ನಲ್ಲಿ ತನ್ನ ಛಾಪನ್ನೊತ್ತಿದ ಪೂಜಾ ಆಪ್ತರಾಗುವ ಮಟ್ಟಕ್ಕೆ ಮುಂದುವರಿದ್ದಾರೆ. (ಬಿಡುಗಡೆಗೊಂಡ ಚಿತ್ರಗಳನ್ನು ಮಾತ್ರ ಲೆಕ್ಕಕ್ಕಿರಿಸಿದೆ)
ಸಂಜನಾ ಚಿತ್ರರರಂಗಕ್ಕೆ ಕಾಲಿರಿಸಿದ್ದು ಬೆಂಗಾಳಿ ಚಿತ್ರವೊಂದರ ಮೂಲಕ. 2003ರಲ್ಲಿ ಬಂದ ಚಿತ್ರದ ಹೆಸರು `ತೊಮಕೆ ಸಲಾಂ’. ನಂತರ ತಮಿಳಿನ ಕಕ್ಕೆ ಚಿತ್ರದಲ್ಲಿಯೂ ಪಾತ್ರ ಮಾಡ್ದಿದಾರೆ. ಹಲವಾರು ಆಲ್ಬಂಗಳಲ್ಲಿಯೂ ಕಾಣಿಸಿಕೊಂಡಿರುವ ಇವರಿಗೆ ಅದೃಷ್ಟದ ಬಾಗಿಲು ತೆರೆದಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ. ಕನ್ನಡಿಗರು ಪೂಜಾ ಗಾಂಧಿಯ ಚೊಚ್ಚಲ ಚಿತ್ರ `ಮುಂಗಾರು ಮಳೆ’ಯನ್ನು ನೋಡಿ ಅವರನ್ನು ಬಿಗಿದಪ್ಪಿದರು. ಅನ್ಯರಾಜ್ಯದ ಮಗಳಾದರೂ ಅವರನ್ನು ತಮ್ಮ `ಮನೆ ಮಗಳಂತೆ ಪ್ರೀತಿಸಿದರು. ಆರಂಭದಲ್ಲಿ ಬಂದ ಚಿತ್ರಗಳು ಹಿಟ್ ಆದವು. ಅನಂತರ… ನಿಮಗೆ ಗೊತ್ತಲ್ಲ…?!
ಸಿನಿಮಾ ಪಯಣ
ಮುಂಗಾರು ಮಳೆ (ನಂದಿನಿ), ಮನ್ಮಥ, ಕೃಷ್ಣ (ಪ್ರೀತಿ), ಮಿಲನ (ಪ್ರಿಯಾ), ಹನಿ ಹನಿ (ರಮ್ಯಾ), ಆಕ್ಸಿಡೆಂಟ್ (ಪೂಜಾ), ಕಾಮಣ್ಣನ ಮಕ್ಕಳು, ನೀ ಟಾಟಾ ನಾ ಬಿರ್ಲಾ, ಬುದ್ಧಿವಂತ (ಪೂಜಾ), ತಾಜ್ಮಹಲ್ (ಶೃತಿ), ಕೋಡಗನ ಕೋಳಿ ನುಂಗಿತ್ತ (ಲಕ್ಷ್ಮೀ), ಮಹರ್ಷಿ (ಮಾನಸ ವೀಣಾ), ಜನುಮದ ಗೆಳತಿ (ಮಂಜುಳ), ಹಾಗೇ ಸುಮ್ಮನೆ (ನಂದಿನಿ), ಅನು(ಅನು), ಇನಿಯಾ (ಜಾನಕಿ), ಹುಚ್ಚಿ (ಪ್ರೀತಿ), ನಿನಗಾಗಿ ಕಾದಿರುವೆ (ಶ್ವೇತಾ ನಂದನ್), ಗೋಕುಲ (ಲೀಲಾ), ಮಿನುಗು(ಸಂಚಿತಾ), ಶ್ರೀಹರಿಕಥೆ (ಪೂಜಾ ಕೃಷ್ಣಮೂರ್ತಿ), ರಾಣಿ ಮಹಾರಾಣಿ, ವೇಗ, ತವರಿನ ಋಣ, ಆಪ್ತ ಇನ್ನೂ ಅನೇಕ ಚಿತ್ರಗಳಲ್ಲಿ ನಟಿ(ಸಿದ್ದಾರೆ) ಸುತ್ತಿದ್ದಾರೆ ಪೂಜಾ. ಆದರೆ ಇತ್ತೀಚೆಗೆ ಅವರ ಸಾಲು ಸಾಲು ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿವೆ. ಇದಕ್ಕೆ ಪೂಜಾ ಬೇಕಾ ಬಿಟ್ಟಿ ಚಿತ್ರಗಳನ್ನು ಒಪ್ಪಿಕೊಳ್ಳುವುದೂ ಒಂದು ಕಾರಣ ಇರಬಹುದು.
ಪೂಜಾ ಅವರಿಗೆ ಇಷ್ಟೆಲ್ಲಾ ಬಣ್ಣದ ಬದುಕಿನ ಪಯಣ ಮುಂದುವರಿಯಲು ಅನುವು ಮಾಡಿಕೊಟ್ಟದ್ದು ಇಲ್ಲಿನ ಮಂದಿ ಅಂದರೆ ಕನ್ನಡಿಗರು. ಪೂಜಾ ಎಡವಿದಾಗ ಬುದ್ಧಿ ಮಾತನ್ನೂ ಹೇಳಿದ್ರು. ಇಷ್ಟೆಲ್ಲಾ ಮಾಡಿದ ಕನ್ನಡಿಗರಿಗೆ ಪೂಜಾ ತನ್ನ ಇಪ್ಪತ್ತೈದು ಚಿತ್ರಗಳನ್ನು ಪೂರೈಸಿ ಮುಂದೆ ಸಾಗುತ್ತಿದ್ದಾಗ ಒಂದು ಕೃಜ್ಞತೆಯನ್ನೂ ಹೇಳಿಲ್ಲ. ಆ ಸೌಜನ್ಯವನ್ನು ಮರೆತು ಬಿಟ್ಟರಾ ಈ ಗುಜಾರಾತಿ ಬೆಡಗಿ. ಕನ್ನಡಿಗರಾದರೆ ತಮ್ಮ ಇಪ್ಪತ್ತೈದನೇ ಚಿತ್ರಕ್ಕೆ ಅದೆಂಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ತಮ್ಮ ವೃತ್ತಿ ಜೀವನ ಸುಗಮವಾಗಿ ಸಾಗಲು ಸಹಕರಿಸಿದ ಎಲ್ಲರನ್ನೂ ಸ್ಮರಿಸುತ್ತಾರೆ. ಅಷ್ಟೆಲ್ಲಾ ಮಾಡದಿದ್ದರೂ ಪರವಾಗಿಲ್ಲ. ತಣ್ಣಗೆ ಒಂದು ಥ್ಯಾಂಕ್ಸ್ ಹೇಳುವ ಬುದ್ಧಿ ಇದ್ದಿದ್ದರೆ ಕನ್ನಡಿಗರು ಇನ್ನಷ್ಟು ಬೆಳೆಸುತ್ತಿದ್ದರು.

