ಬರ್ತಡೇ ಬಾಯ್(ಯೋಗಿ) ಮನೆಯಲ್ಲಂದು ಜಾಗರಣೆ
published on Jul.05, 2011, under Special Feature
ಜುಲೈ 6 ಯೋಗೇಶ್ ಹುಟ್ಟಿದ ದಿನ. ದುನಿಯಾ ಸಿನಿಮಾದಲ್ಲಿ ಚಿಕ್ಕ ಪಾತ್ರದ ಮೂಲಕವೇ ಜನಪ್ರಿಯನಾದ ಯೋಗಿಗೆ ಇಂದು ಅಸಂಖ್ಯಾತ ಅಭಿಮಾನಿಗಳ ಬಳಗವಿದೆ. ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಡಜನ್ಗಟ್ಟಲೇ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿ, ಜನಮನ್ನಣೆ ಗಳಿಸಿದಲ್ಲದೇ ಈ ವರ್ಷ ರಾಜ್ಯ ಪ್ರಶಸ್ತಿಗೂ ಭಾಜನರಾದ ಹಿರಿಮೆ ಯೋಗಿಗೆ ಸಲ್ಲುತ್ತದೆ. ಹಾಗಾಗಿ ಯೋಗಿಗೆ ಹುಟ್ಟುಹಬ್ಬ ಎಂದರೆ ಮನೆಯಲ್ಲಂದು ಜನರ ಜಾತ್ರೆಯಲ್ಲದೆ, ಜಾಗರಣೆಯು ನಡೆದಿರುತ್ತದೆ.
ಯೋಗೇಶ್ ಪ್ರತಿ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಅಕ್ಕಪಕ್ಕದ ಮನೆಯವರು,ಗೆಳೆಯರು ಹಾಗೂ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಷೂಟಿಂಗ್ ಇಲ್ಲದ ದಿನಗಳಲ್ಲಿ ಸಾದಸೀದ ಹುಡುಗನಂತೆ ವಾಲಿಬಾಲ್,ಕ್ರಿಕೇಟ್ ಆಡುವ ಯೋಗಿಗೆ ದೊಡ್ಡ ಸ್ನೇಹಿತರ ಬಳಗವಿದೆ. ಅವರೆಲ್ಲ ಗೆಳೆಯನ ಹುಟ್ಟುಹಬ್ಬದ ಮೊದಲ ವಿಶ್ ಮಾಡಲು ಹಾತೊರೆಯುತ್ತಾರೆ. ಹಾಗಾಗಿ ಜುಲೈ 5ರ ರಾತ್ರಿ ಹನ್ನೆರಡು ಗಂಟೆ ಕಳೆಯುತ್ತಿದ್ದಂತೆ ಯೋಗಿ ಮನೆಯಂಗಳದಲ್ಲಿ ಸರ ಪಟಾಕಿಯ ಶಬ್ದ ಶುರುವಾಗುತ್ತದೆ. ಈ ವರ್ಷದ ಹುಟ್ಟುಹಬ್ಬದ ಮೊದಲು ವಿಶ್ ಮಾಡಿದವರು ಯಾರೆಂದು ಸ್ವತಃ ಯೋಗಿಯನ್ನು ಕೇಳಿದರೆ, ‘ಮಧ್ಯರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಸುಮಾರು 50-60 ಜನ ದೊಡ್ಡ ಹೂಮಾಲೆಯೊಂದಿಗೆ ಬಂದು ವಿಶ್ ಮಾಡಿದರು. ಆಮೇಲೆ ಮನೆಯವರು ಅಂದರೆ ಅಪ್ಪ,ಅಮ್ಮ,ಅಣ್ಣ ಹಾಗೂ ನನ್ನ ಸಂಭದಿಕರೆಲ್ಲರು ಹುಟ್ಟುಹಬ್ಬದ ಶುಭಾಶಯ ಹೇಳಿದರು. ನಂತರ ಬಿಡಿ, ನನ್ನ ಚಿತ್ರರಂಗದ ಸ್ನೇಹಿತ-ಸ್ನೇಹಿತೆಯರು ಹಾಗೂ ಅಭಿಮಾನಿಗಳು ಬೆಳೆಗ್ಗೆ 5 ಗಂಟೆಯವರೆಗೂ ಪೋನ್ ಮೂಲಕ ವಿಶ್ ಮಾಡುತ್ತಿದ್ದರು. ನಾನು ರಾತ್ರಯಿಡಿ ನಿದ್ದೆ ಮಾಡಿಲ್ಲ. ಬೆಳಿಗ್ಗೆ 5 ಕ್ಕೆ ಮಲಗಿ 8 ಕ್ಕೆ ಎದ್ದರೆ, ಮತ್ತೆ ಜನರ ಪ್ರೀತಿ ಮತ್ತು ಶುಭಾಶಯಗಳು.
‘ನಾನು ಇಂದು ಹೆಸರು ಮಾಡಿದೆನೆಂದರೆ ಅದಕ್ಕೆ ಜನರು ಕಾರಣ. ನನ್ನ ಪ್ರತಿಭೆಯನ್ನು ಗುರುತಿಸಿ, ನನ್ನ ಸಿನಿಮಾಗಳಿಗೆ ಬೆನ್ನು ತಟ್ಟುತ್ತಿದ್ದಾರೆ. ಹಾಗಾಗಿ ಹುಟ್ಟು ಹಬ್ಬದ ದಿನ ಮನೆಯಲ್ಲಿಯೇ ತಂದೆ-ತಾಯಿಯೊಂದಿಗೆ ಜನರ ಜೊತೆಯೆ ಬೆರೆಯುತ್ತೇನೆ. ಎಲ್ಲರ ಶುಭಾಶಯ ಸ್ವೀಕರಿಸುವುದಲ್ಲದೇ ಹತ್ತಾರು ಕೇಕ್ ಕಟ್ ಮಾಡಿ ಅಭಿಮಾನಿಗಳಿಗೂ ತಿನ್ನಿಸುತ್ತೇನೆ. ನನ್ನ ಬದುಕಿನಲ್ಲಿ ಹೆಸರು,ಕೀರ್ತಿ ಸಹಜವಾಗಿ ಬಂದಿವೆ. ನಾನು ನನ್ನ ಪ್ರಯತ್ನವನ್ನಷ್ಟೆ ಮಾಡುತ್ತೇನೆ. ಹಾಗಾಗಿ ಹುಟ್ಟು ಹಬ್ಬವನ್ನು ಎಲ್ಲ ದಿನಗಳಂತೆ ನೋಡುತ್ತೆನೆ. ಈ ದಿನ ನನ್ನ ವೃತ್ತಿಬದುಕಿನ ಸಂಕಲ್ಪಗಳಾಗಲಿ, ದೇವಸ್ಥಾನಗಳಿಗೆ ಭೇಟಿ ನೀಡುವುದಾಗಲಿ ಮಾಡುವುದಿಲ್ಲ. ತಂದೆ-ತಾಯಿ ಯೊಂದಿಗೆ ಅಭಿಮಾನಿಗಳನ್ನೆ ದೇವರ ಥರಾ ನೋಡುತ್ತೇನೆ." ಎನ್ನುತ್ತ ಯೋಗಿ ಹುಟ್ಟು ಹಬ್ಬದ ಖುಷಿಯನ್ನು ಹಂಚಿಕೊಳ್ಳುತ್ತಾರೆ.
ಇನ್ನೂ ಸಹ ಯೋಗೇಶ್ ಪುನೀತ್ ಮತ್ತು ಶ್ರೀನಗರ ಕಿಟ್ಟಿಯೊಂದಿಗೆ ಅಭಿನಯಿಸಿದ ಹುಡುಗರು ಓಡುತ್ತಿದೆ. ಅಲ್ಲಿ ತನ್ನ ಡಿಪರೆಂಡ್ ಮ್ಯಾನರಿಸಂ ಅಭಿನಯಿಸಿ ಮಾಧ್ಯಮ ಮತ್ತು ಜನರಿಂದ ಪ್ರಶಂಸೆ ಪಡೆದ ಯೋಗಿ ಕಾಲೇಜಿಗೆ ಹೋಗುತ್ತಿದ್ದರೆ, ನಿನ್ನೆ ಮೊನ್ನೆ ಡಿಗ್ರಿ ಪಡೆಯುತ್ತಿದ್ದ. ಆದರೆ ಶಿಕ್ಷಣಕ್ಕೆ ಸಮಯ ಸಿಗದಿದ್ದರು, ಕಲೆ ಕೈಹಿಡಿದಿದೆ. ಸದ್ಯ ‘ಸಿದ್ಲಿಂಗು’ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯ ಜೊತೆ ಅಭಿನಯಿಸುತ್ತಿದ್ದಾನೆ. ಅಲ್ಲದೇ ಅಲೆಮಾರಿ, ಕಾಲಾಯತಸ್ಮಯೇ ನಮಃ ಮುಂತಾದ ಸಿನಿಮಾಗಳಿಗೆ ಕಾಲ್ಷೀಟ್ ಕೊಟ್ಟಾಗಿದೆ. ಇನ್ನೂ ಅನೇಕ ಕಥೆಗಳನ್ನು ಓಕೆ ಮಾಡಿ ಅರ್ಧ ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಯೋಗೇಶ್ಗೆ ಚಿತ್ರರಂಗದಲ್ಲಿ ಬೆಳೆಯಲು ಬೃಹತ್ ಅವಕಾಶಗಳಿವೆ. ನಾವು ಈಗ ಯೋಗಿಗೆ ಹುಟ್ಟುಹಬ್ಬದ ಶುಭಾಶಯವನ್ನು ಹೆಳೋಣ.
- ರಾಜೇಶ್ ಗಣಪತಿ

