Chitra Vaarte

ಶ್ರೀನಿವಾಸರಂತಹ ಉತ್ಸಾಹಿ ನಿರ್ಮಾಪಕರು ಉಳಿದರೆ, ಚಿತ್ರರಂಗ ಬೆಳೆದೀತು…

published on May.19, 2011, under Special Feature

Srinivas ಮೂರುವರ್ಷಗಳ ಹಿಂದೆ ನಾನು ಚಿತ್ತಾರ ಜ್ಯೋತಿ ಪತ್ರಿಕೆಗಾಗಿ ನಿರ್ಮಾಪಕ ಶ್ರೀನಿವಾಸರನ್ನು ಭೇಟಿಯಾಗಿದ್ದೆ. ಆಗ ಅವರ ಮಂದಾಕಿನಿ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದರು. ಚೌಲ್ಟ್ರಿ,ಹೋಟೆಲ್, ಕನ್ಸ್ಟ್ರಕ್ಷನ್ ಮುಂತಾದ  ಉದ್ಯಮಗಳ ಒತ್ತಡದ ನಡುವೆಯು ತಮ್ಮ ‘ಮಂದಾಕಿನಿ’ಸಿನಿಮಾ ಪ್ರೊಡಕ್ಷನ್ ಬಗ್ಗೆ ಹೆಚ್ಚಿನ ಮುತುರ್ವಜಿ ವಹಿಸಿದ್ದರು. ಆಗಲೇ ಮೂರು ಕೋಟಿ ಹಣ ಸುರಿದು ಬಾಲ್ಯ ಸ್ನೇಹಿತ ರಮೇಶ್ ಸುರವೆ  ಕ್ರಿಯೇಟಿವಿಟಿಗೆ ಸಾಕಷ್ಟು ಸ್ವಾತಂತ ನೀಡಿದ್ದರು. ಅಲ್ಲದೇ ಕನ್ನಡ ಚಿತ್ರರಂಗದಲ್ಲಿ ಸಾಧಿಸಲು ಸಾಕಷ್ಟು ಕನಸುಗಳನ್ನು ಶ್ರೀನಿವಾಸ್ ಹೊತ್ತಿದ್ದರು.

 

ಆದರೆ ನಿರ್ದೇಶನ ಮತ್ತು ಗಾಂಧೀನಗರದ ಅಸಹಕಾರದಿಂದ ‘ಮಂದಾಕಿನಿ’ ಮಂದವಾಯಿತು. ಹಾಗೇ ಶ್ರೀನಿವಾಸ್ ರವರಿಗೂ ಚಿತ್ರರಂಗದ ಬಗ್ಗೆ ಉತ್ಸಾಹ ಹೊರಟು ಹೋಯಿತು. ಆದರೂ ಅವರು ಅಂದುಕೊಂಡದನ್ನು ಸಾಧಿಸದೆ ಬಿಡಲಾರರು. ಕೇವಲ ಹತ್ತನೇ ತರಗತಿ ಪಾಸು ಮಾಡದ ಶ್ರೀನಿವಾಸ್ ಹಾಲು ಮಾರುತ್ತಲೇ, ಗಾರೆ ಕೆಲಸ ಕಲಿತವರು. ಮನೆ ಕಟ್ಟುತ್ತಲೇ ಕನ್ಸ್ಟ್ರಕ್ಷನ್ ಉದ್ಯಮಕ್ಕೆ ಶುರು ಮಾಡಿದವರು. ಹೀಗೆ ಬೆಳೆಯುತ್ತ ತಮ್ಮ ವ್ಯವಹಾರದ ಮೂಲಕ ಸಾವಿರ ಜನರಿಗೆ ಕೆಲಸ ನೀಡಿದ ದೊಡ್ಡ ಉದ್ಯಮಿಯಾದವರು.

 

ಚಿತ್ರರಂಗಕ್ಕೆ ಬರಲು ಮೊದಲು ಶ್ರೀನಿವಾಸ್ ರವರು ಹಿಂದೇಟು ಹಾಕಿದ್ದರು. ಆ ಸಮಯದಲ್ಲಿ ಮನೆಯವರಿಗೂ ಇಷ್ಟವಿರಲಿಲ್ಲ. ಗೆಳೆಯ ಹಾಗೂ ಸಾಹಿತಿ ರಮೇಶ್ ಸುರವೆ ಬಹಳವರ್ಷಗಳ ಹಿಂದೆ ಒಂದು ಮಾತನ್ನು ನೀಡಿದರು. ಮುಂದೆ ‘ಗೆಳೆಯ ನಿನಗಾಗಿ ಒಂದು ಸಿನಿಮಾ ನಿರ್ಮಿಸುತ್ತೇನೆ’, ಎಂದೊ  ಕೊಟ್ಟ ಮಾತೇ ಅವರು ಚಿತ್ರರಂಗಕ್ಕೆ ಬರಲು ಕಾರಣವಾಯಿತು. ಇತ್ತೀಚೆಗೆ ಬೆಂಗಳೂರಿನ ‘ಕನ್ನಡ ಭವನ’ದಲ್ಲಿ ‘ನಂಬಿಕೆಯೇ ಜೀವನ’ ಎಂಬ ಪುಸ್ತಕ ಬಿಡುಗಡೆಯಾಗಿತ್ತು. ಅದರ ವರದಿ ನಮ್ಮ ಪತ್ರಿಕೆಗೆ ಪ್ರಕಟವಾಗಿದನ್ನು ಶ್ರೀನಿವಾಸರಿಗೆ ತಲುಪಿಸಲು ಸ್ನೇಹಿತನೊಂದಿಗೆ ಅವರ ಮನೆಗೆ ಹೋಗಿದ್ದೆ. ಬಹಳ ವರ್ಷಗಳ ನಂತರವೂ ಬಹಳ ಪ್ರೀತಿಯಿಂದ ಮಾತನಾಡಿಸಿ ತಮ್ಮ ದುಬಾರಿ ಕಾರಿನಲ್ಲಿ ಕುಳಿಸಿ ಕೆಲವು ಇಂಪಾದ ಹಾಡುಗಳನ್ನು ಕೇಳಿಸಿದ್ದರು. ಅವುಗಳಲ್ಲಿ ಎರಡು ಹಾಡು ತಾವೇ ಬರೆದದ್ದು ಎಂದು ಹೇಳಿಕೊಂಡರು. ಆಗಾಲೇ ಅವರು ಕೈಗಿತ್ತ ಪುಸ್ತಕದಲ್ಲಿಯೂ ತಮ್ಮ ಅನುಭವವನ್ನು ‘ಬೆಂಕೋಶ್ರೀ’ ಎಂಬ ಕಾವ್ಯನಾಮದಲ್ಲಿ ಅವರ ಬರೆಹಗಳನ್ನು ಕಂಡಾಗ ಅವರ ಸಾಹಿತ್ಯ ಆಸಕ್ತಿ ನೋಡಿ ನಿಜಕ್ಕೂ ನಾವು ಬೆರಗಾಗಿದ್ದೇವು.

 

ಈ ‘ಬೆಂಕೋಶ್ರಿ’ಯವರು ಸೋಲನ್ನು ಒಪ್ಪಿಕೊಳ್ಳುವವರಲ್ಲ. ಏನಾದರೂ ಮಾಡಿ ಹಿಡಿದ ಕೆಲಸ ಸಾಧಿಸಲೇ ಬೇಕೆಂದು ಮತ್ತೊಮ್ಮೆ ಶ್ರೀನಿವಾಸ್ರವರು ಎಂಟ್ರಿ ಕೊಟ್ಟಿದ್ದಾರೆ. ಅಂದರೆ ಜೋಗಿ ನಿರ್ಮಾಣ ಸಂಸ್ಥೆಯಾದ ಅಶ್ವಿನಿ ನೆಟ್ವಕ್ ಪ್ರೈವೇಟ್ ಲಿಮಿಟೆಡ್ನ ಚಾರಸಿ ಯಾಗಿ ಬಂದು ಅಲೆಮಾರಿ ಸಿನಿಮಾ ಮೂಲಕ ಮತ್ತೊಮ್ಮೆ ಗಾಂಧೀನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಅಂದು ಕೇಳಿಸಿದ ಹಾಡುಗಳ ಅಲ್ಬಂ ಮಾಡಿ ಸದ್ಯದಲ್ಲಿ ಮಾರುಕಟ್ಟೆಗೆ ಬಿಡಲಿದ್ದಾರೆ. ತಮ್ಮ  2ಲಕ್ಷಪುಸ್ತಕವನ್ನು ಜೋಗಯ್ಯ ಸಿಡಿ ಯೊಂದಿಗೆ ಜನತೆಗೆ ತಲುಪಿಸಲು ಒಪ್ಪಂದ ಮಾಡಿಕೊಂಡಿದ್ದಾರೆ.

Leave a Reply

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...